Site icon Samastha News

Mango: ಕೆಜಿಗೆ 3 ಲಕ್ಷ, ಏನಿದು ಮಿಯಾಜಾಕಿ ಮಾವಿನಹಣ್ಣು? ಏಕಿಷ್ಟು ದುಬಾರಿ?

Mango Fruit

Mango

ಈಗ ಮಾವಿನ ಹಣ್ಣಿನ ಸೀಸನ್. ರಸಪುರಿ, ಮಲ್ಗೋವಾ, ತೋತಾಪುರಿ, ಮಿಡಿ, ಮಲ್ಲಿಗೆ ಇನ್ನಿತರೆ ಥರಹೇವಾರಿ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿವೆ. ಆದರೆ ಹೆಚ್ಚು ಸದ್ದು ಮಾಡುತ್ತಿರುವುದು ಕೆಜಿಗೆ 2.5 ಲಕ್ಷದಿಂದ 3 ಲಕ್ಷ ರೂಪಾಯಿ ಬೆಲೆಯುಳ್ಳ ಮಿಯಾಜಾಕಿ ಮಾವಿನ ಹಣ್ಣು. ಏನಿದರ ವಿಶೇಷತೆ, ಈ ಮಾವಿನ ಹಣ್ಣು ಇಷ್ಟೇಕೆ ದುಬಾರಿ? ಇಲ್ಲಿದೆ ಮಾಹಿತಿ.

ಮಿಯಾಜಾಕಿ ಮಾವಿನ ಹಣ್ಣನ್ನು ಭಾರತದಲ್ಲಿ ಕೆಲವೆಡೆ ರೈತರು ಬೆಳೆದಿದ್ದಾರೆ. ಕರ್ನಾಟಕದಲ್ಲಿಯೂ ಸಹ ಕೆಲವೆಡೆ ಈ ಮಾವಿನ ಹಣ್ಣು ಬೆಳೆಯಲಾಗಿದೆ. ಆದರೆ ಈ ಮಾವಿನ ಹಣ್ಣಿನ ಮೂಲ ಜಪಾನ್. ಈ ಮಾವಿನ ಹಣ್ಣಿಗೆ ಇಟ್ಟಿರುವುದು ಜಪಾನಿನ ವಿಜ್ಞಾನಿ ಯಾಮಜಿಟಾ ಮಿಯಾಜಾಕಿ ಹೆಸರನ್ನೆ.

ಈ ಮಾವಿನ ಹಣ್ಣು ಬಣ್ಣ ಹಾಗೂ ರುಚಿಯಲ್ಲಿ ಇತರೆ ಮಾವಿನ ಹಣ್ಣುಗಳಿಗಿಂತಲೂ ಬಹಳ ಭಿನ್ನವಾಗಿರುತ್ತದೆ. ಇತರೆ ಮಾವಿನ ಕಾಯಿಗಳು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗಿದರೆ ಈ ಮಾವಿನ ಹಣ್ಣು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದರ ರುಚಿಯಂತೂ ಅಮೋಘ. ಅಲ್ಲದೆ ಸಾಕಷ್ಟು ಔಷಧೀಯ ಗುಣಗಳನ್ನು ಸಹ ಈ ಹಣ್ಣು ಒಳಗೊಂಡಿರುತ್ತದೆ. ಹಾಗಾಗಿ ಈ ಹಣ್ಣಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ.

ಬೇಡಿಕೆ ಹೆಚ್ಚಿದೆ ಎಂಬ ಕಾರಣಕ್ಕೆ ಹೇಗೆಂದರೆ ಹಾಗೆ ಈ ಹಣ್ಣನ್ನು ಬೆಳೆಯಲಾಗದು. ಈ ಹಣ್ಣು ರಾಸಾಯನಿಕಗಳಿಂದ ಮುಕ್ತವಾಗಿದ್ದರಷ್ಟೆ ಇದಕ್ಕೆ ದುಬಾರಿ ಬೆಲೆ, ಇಲ್ಲವಾದರೆ ಬೆಲೆ ಸಿಗದು. ಅಲ್ಲದೆ ಈ ಜಾತಿಯ ಮಾವಿನ ಗಿಡಗಳ‌ನ್ನು ಆಮದು ಮಾಡಿಕೊಳ್ಳುವುದು ಸಹ ಕಷ್ಟ ಸಾಧ್ಯ. ಗಿಡಗಳ‌ನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ.

Bengaluru Mysore Highway: ಟ್ರಾಫಿಕ್‌ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನ ಬಳಕೆ

ಒಡಿಸ್ಸಾದಲ್ಲಿ ರೈತನೊಬ್ಬ ಎರಡು ಎಕರೆಗೆ ಇದೇ ಜಾತಿಯ ಮಾವಿನ ಹಣ್ಣು ಬೆಳೆದಿದ್ದು, ವಿದೇಶಕ್ಕೆ ರಫ್ತು ಮಾಡುತ್ತಿದ್ದಾನೆ. ರಾಜಸ್ಥಾನದಲ್ಲೂ ಒಬ್ಬ ರೈತ ಇದೇ ಮಾವಿನ ಹಣ್ಣು ಬೆಳೆದಿದ್ದು ಭಾರಿ ಲಾಭ ಮಾಡಿದ್ದಾನೆ. ಕರ್ನಾಟಕದಲ್ಲಿಯೂ ಕೆಲವು ರೈತರು ಈ ಅಪರೂಪದ ಮಾವಿನ ಹಣ್ಣು ಬೆಳೆದಿದ್ದು, ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನ ಶಂಕಪುರಂನಲ್ಲಿ ವ್ಯಕ್ತಿಯೊಬ್ಬರು ಮನೆಯ ಬಳಿಯೇ ಈ ಮಾವಿ‌ನ ಹಣ್ಣು ಬೆಳೆದಿದ್ದಾರೆ.

Exit mobile version