CAR
ಎಲ್ಲ ವಾಹನಗಳಲ್ಲಿಯೂ ಸ್ಪೀಡೋ ಮೀಟರ್ ಇದ್ದೆ ಇರುತ್ತದೆ. ವಾಹನ ಎಷ್ಟು ವೇಗದಲ್ಲಿ ಚಲಿಸುತ್ತಿದೆ. ಎಷ್ಟು ದೂರ ಚಲಿಸಿದೆ ಎಂಬ ಮಾಹಿತಿಯನ್ನು ಈ ಸ್ಪೀಡೋಮೀಟರ್ ಅಥವಾ ಓಡೊಮೀಟರ್ ನೀಡುತ್ತದೆ. ಆದರೆ ಕಾರುಗಳಲ್ಲಿ ಸ್ಪೀಡೋಮೀಟರ್ ಪಕ್ಕ ಇನ್ನೊಂದು ಮೀಟರ್ ಇರುತ್ತದೆ. ಅದರಲ್ಲಿ ಸೊನ್ನೆಯಿಂದ 8 ಅಥವಾ ಕೆಲವು ಕಾರುಗಳಲ್ಲಿ 10 ಸಂಖ್ಯೆಗಳು ಮಾತ್ರವೇ ಇರುತ್ತದೆ. ಇದು ಯಾವ ಮೀಟರ್?
ಕಾರಿನ ಸ್ಪೀಡೋ ಮೀಟರ್ ಪಕ್ಕದಲ್ಲೇ ಈ ಮೀಟರ್ ಇರುತ್ತದೆ. ಕಡಿಮೆ ಸಂಖ್ಯೆಗಳನ್ನು ಒಳಗೊಂಡಿರುವ ಈ ಮೀಟರ್ ನ ಒಳಗೆ *1000 RPM ಎಂದು ಬರೆಯಲಾಗಿರುತ್ತದೆ. ಕಾರು ಸ್ಟಾರ್ಟ್ ಆದಾಗ ಈ RPM ಮೀಟರ್ ಸಹ ಚಾಲನೆಯಾಗುತ್ತದೆ. ವಾಹನ ಓಡುವಾಗ ಇದರ ರೀಡಿಂಗ್ ಕಾರಿನ ವೇಗಕ್ಕೆ ಅನುಗುಣವಾಗಿ ಬದಲಾಗುತ್ತಾ ಇರುತ್ತದೆ. ಆದರೆ ಕಾರು ಓಡಿಸುವ ಮುಕ್ಕಾಲು ಪಾಲು ಜನಕ್ಕೆ ಈ RPM ಮೀಟರ್ ಏನು? ಅದರ ಮಹತ್ವ ಏನು? ಅದು ಕಾರಿನಲ್ಲಿ ಏಕಿದೆ ಎಂದು ಗೊತ್ತಿಲ್ಲ. RPM ಮೀಟರ್ ನ ಅಗತ್ಯವನ್ನು ಇಂದು ತಿಳಿಯೋಣ.
RPM ಎಂದರೆ ರೆವಲ್ಯೂಷನ್ಸ್ ಪರ್ ಮಿನಟ್. ಈ ಮೀಟರ್, ಕಾರಿನಲ್ಲಿ ಅಳವಡಿಸಲಾಗಿರುವ ಎಂಜಿನ್ ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ತಿರುಗುತ್ತಿದೆ ಎಂಬುದನ್ನು ತೋರಿಸುತ್ತದೆ. ಕಾರು ಓಡಿಸುವಾಗ RPM ಮೀಟರ್ ನಲ್ಲಿರುವ ಕೆಂಪು ಕಡ್ಡಿ 1 ರ ಸಂಖ್ಯೆಯ ಬಳಿ ಬಂತೆಂದರೆ ನಿಮ್ಮ ಕಾರಿನ ಎಂಜಿನ್ ಸಾವಿರ ಬಾರಿ ತಿರುತ್ತಿದೆ ಎಂದು ಅರ್ಥ. 2 ರ ಬಳಿ ಬಂತೆಂದರೆ 2000 ಬಾರಿ ತಿರುತ್ತಿದೆ ಎಂದರ್ಥ. ಹೆಚ್ಚು ಬಾರಿ ತಿರುಗಿದಷ್ಟು ಹೆಚ್ಚು ಶಕ್ತಿಯ ಉತ್ಪಾದನೆ ಆಗುತ್ತದೆ. ಕಾರಿನ ವೇಗ ಮತ್ತು ಪಿಕಪ್ ಇದರಿಂದ ಹೆಚ್ಚಾಗುತ್ತದೆ.
RPM ಬಹಳ ಮುಖ್ಯವಾದುದು, RPM ಗಮನಿಸಿ ಕಾರು ಚಲಾಯಿಸುವುದರಿಂದ ಕಾರಿನ ಎಂಜಿನ್ ಮೇಲೆ ಎಷ್ಟು ಒತ್ತಡ ಬೀಳುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದರಿಂದ ಎಂಜಿನ್ ಸಮಸ್ಯೆ, ಗೇರ್ ಬಾಕ್ಸ್ ಸಮಸ್ಯೆಯನ್ನು ತಪ್ಪಿಸಬಹುದು. ಕಾರಿನ ಮೈಲೇಜ್ ಹೆಚ್ಚಾಗುವಂತೆ ಮಾಡಬಹುದು. ನಿಗದಿತವಾಗಿ ಗೇರ್ ಶಿಫ್ಟ್ ಮಾಡುತ್ತಾ ಕಾರು ಸ್ಮೂತ್ ಆಗಿರುವಂತೆ ಮಾಡಬಹುದು. ಕಾರಿನ ಮೈಲೇಜ್ ಸುಮಭವಾಗಿ ಲೆಕ್ಕ ಹಾಕಬಹುದು. ಯಾವಾಗ ಗೇರು ಬದಲಿಸಬೇಕು? ಯಾವಾಗ ಬದಲಿಸಬಾರದು ಎಂಬುದನ್ನು RPM ನೋಡಿ ಲೆಕ್ಕಹಾಕಬಹುದು.
TATA Sumo: ಮತ್ತೆ ಬರುತ್ತಿದೆ ಭಾರತೀಯರ ಮೆಚ್ಚಿನ ಕಾರು ಟಾಟಾ ಸುಮೊ, ಸಖತ್ ಆಗಿದೆ ಹೊಸ ಡಿಜೈನ್
ಸಾಮಾನ್ಯವಾಗಿ ಡೀಸೆಲ್ ವಾಹನಗಳು 2000 ಟಾಪ್ RPM ನಲ್ಲಿ ಓಡುತ್ತವೆ. ಪೆಟ್ರೋಲ್ ಕಾರುಗಳು 6000 RPM ವರೆಗೆ ಹೋಗುತ್ತವೆ. ಕೆಲ ಕಾರುಗಳು 8000, 10000 RPM ಅನ್ನು ಸಹ ಸಾಧಿಸುವುದಿದೆ. ಮುಂದಿನ ಬಾರಿ ಕಾರು ಓಡಿಸುವಾಗ RPM ಮೀಟರ್ ಮೇಲೆ ಒಂದು ಕಣ್ಣಿಡಿ.