Site icon Samastha News

Shah Rukh Khan: ತಮ್ಮದೇ ಹಳೆ ಸಿನಿಮಾಗಳ ಖರೀದಿಸುತ್ತಿರುವ ಶಾರುಖ್ ಖಾನ್: ಕಾರಣ?

Shah Rukh Khan

Shah Rukh Khan

ಶಾರುಖ್ ಖಾನ್, ಭಾರತದ ಟಾಪ್ ಸೂಪರ್ ಸ್ಟಾರ್. ಡಿಡಿಎಲ್ಜೆ, ಬಾಜಿಗರ್, ಸ್ವದೇಸ್, ಡರ್ ಇನ್ನೂ ಅನೇಕ ಎವರ್ ಗ್ರೀನ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಕಳೆದ ಒಂದೇ ವರ್ಷದಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ. ಸ್ಟಾರ್ ನಟರಾಗಿರುವ ಜೊತೆಗೆ ಶಾರುಖ್ ಖಾನ್ ಜಾಣ ಉದ್ಯಮಿಯೂ ಹೌದು. ಐಪೊಎಲ್ ಟೀಂ, ಸಿನಿಮಾ ನಿರ್ಮಾಣ ಸಂಸ್ಥೆ, ವಿಎಫ್ ಎಕ್ಸ್ ಸಂಸ್ಥೆ ಇನ್ನೂ ಹಲವು ಉದ್ದಿಮೆಗಳನ್ನು ಶಾರುಖ್ ಖಾನ್ ಹೊಂದಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ತನ್ನ ಹಳೆಯ ಸಿನಿಮಾಗಳನ್ನೆಲ್ಲ ಖರೀದಿ ಮಾಡುತ್ತಿದ್ದಾರೆ.

ಹೌದು, ಶಾರುಖ್ ಖಾನ್, ಈ ಹಿಂದೆ ತಾವು ನಟಿಸಿದ್ದ ಸಿನಿಮಾಗಳನ್ನು ಮರಳಿ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳ ಹಕ್ಕುಗಳನ್ನು ಅದರ ಮೂಲ ನಿರ್ಮಾಪಕರಿಂದ ಖರೀದಿ ಮಾಡಿದ್ದಾರೆ. ತೀರ ಇತ್ತೀಚೆಗಷ್ಟೆ ಅವರದ್ದೇ ನಟನೆಯ ಸೂಪರ್ ಹಿಟ್ ಸಿನಿಮಾ ‘ದೇವದಾಸ್’ ಅನ್ನು ಭಾರಿ ಮೊತ್ತ ನೀಡಿ ಮರಳಿ ಖರೀದಿ ಮಾಡಿದ್ದಾರೆ. ‘ದೇವದಾಸ್’ ಸಿನಿಮಾ ಈಗ ನನ್ನ ಕಂಪೆನಿ ಸೇರಿಕೊಂಡಿರುವುದು ನನಗೆ ಅತೀವ ಸಂತೋಷ ನೀಡಿದೆ ಎಂದಿದ್ದಾರೆ.

ಶಾರುಖ್ ಖಾನ್ ಈಗಾಗಲೇ ತಮ್ಮ ನಟನೆಯ ಸುಮಾರು 40 ಕ್ಕೂ ಹೆಚ್ಚು ಹಳೆಯ ಸಿನಿಮಾಗಳ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಆ ಸಿನಿಮಾಗಳೆಲ್ಲವೂ ಈಗ ಶಾರುಖ್ ಖಾನ್ ರ ರೆಡ್ ಚಿಲ್ಲೀಸ್ ಎಂಟರ್ಟೈನ್ ಮೆಂಟ್ ಸಂಸ್ಥೆಗೆ ಸೇರಿವೆ. ಅಷ್ಟಕ್ಕೂ ಶಾರುಖ್ ಖಾನ್ ಏಕೆ ಹಳೆಯ ಸಿನಿಮಾಳಿಗೆ ಇಷ್ಟು ದೊಡ್ಡ ಮೊತ್ತದ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ ಎಂಬುದು ಕೂತಹಲಕಾರಿ ವಿಷಯ.

Bheema Movie: ನೆಗೆಟಿವ್ ವಿಮರ್ಶೆಗಳ‌ ನಡುವೆ ‘ಭೀಮ’ ಸಿನಿಮಾ ಗಳಿಸಿದ್ದೆಷ್ಟು?

ಈ ಯೂಟ್ಯೂಬ್, ಇನ್ಸ್ಟಾ ರೀಲ್ಸ್, ಒಟಿಟಿಗಳ ಕಾಲದಲ್ಲಿ ಹಳೆಯ ಸಿನಿಮಾದ ಹಾಡು,  ದೃಶ್ಯಗಳು ಬಹು ಬೇಗ ವೈರಲ್ ಆಗುತ್ತವೆ ಮಾತ್ರವಲ್ಲ ಹೀಗೆ ವೈರಲ್ ಆದ ಬಿಟ್ ಗಳಿಂದ ದೊಡ್ಡ ಮೊತ್ತದ ಹಣವೂ ಬರುತ್ತದೆ. ಮಾತ್ರವಲ್ಲದೆ, ಕೆಲವು ಮೂಲಗಳ ಪ್ರಕಾರ ಶಾರುಖ್ ಖಾನ್ ತಮ್ಮದೇ ಒಂದು ಒಟಿಟಿ ಸ್ಥಾಪನೆ ಮಾಡಲಿದ್ದಾರಂತೆ. ಈ ಒಟಿಟಿಯಲ್ಲಿ ಶಾರುಖ್ ಖಾನ್ ರ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ‌. ಇದರಿಂದ ಭಾರಿ ಮೊತ್ತದ ಹಣ ಶಾರುಖ್ ಖಾನ್ ಗೆ ಹರಿದು ಬರಲಿವೆ. ಕೆಲ ಮಾಹಿತಿಯಂತೆ ಒಟಿಟಿಗಳಲ್ಲಿ ಸಿನಿಮಾ ಒಂದು ವಾರದ ಕಾಲ 1 ಲಕ್ಷ ಜನರಿಂದ ವೀಕ್ಷಣೆಗೆ ಒಳಪಟ್ಟರೂ ಸಾಕು ಸುಮಾರು 5 ಕೋಟಿ ಲಾಭ ತಂದುಕೊಡುತ್ತದೆಯಂತೆ. ಹಾಗಾಗಿಯೇ ಶಾರುಖ್ ಖಾನ್ ತಮ್ಮ ಹಳೆಯ ಸಿನಿಮಾಗಳ ಹಕ್ಕು ಖರೀದಿ ಮಾಡುತ್ತಿದ್ದಾರೆ.

Exit mobile version