Vishnuvardhan: ವಿಷ್ಣುವರ್ಧನ್ ಕೈಯಲ್ಲಿದ್ದ ಕಡಗದ ಗುಟ್ಟೇನು? ಅದನ್ನು ಕೊಟ್ಟಿದ್ದು ಯಾರು?

0
133
Vishnuvardhan

Vishnuvardhan

ಇಂದು (ಸೆಪ್ಟೆಂಬರ್ 18) ವಿಷ್ಣುವರ್ಧನ್ ಹುಟ್ಟುಹಬ್ಬ. ಕನ್ನಡ ಚಿತ್ರರಂಗ ಕಂಡ ಮೇರು ನಟರಲ್ಲಿ ಒಬ್ಬರು ವಿಷ್ಣು. ಇಂದಿಗೂ ವಿಷ್ಣುವರ್ಧನ್ ಅವರನ್ನು ಅನುಕರಣೆ ಮಾಡುವವರು, ಕೈಯಲ್ಲಿದ್ದ ಕಡಗವನ್ನು ವಿಷ್ಣು ಸ್ಟೈಲ್ ಆಗಿ ಹಿಂದಕ್ಕೆ ಎಳೆದುಕೊಳ್ಳುತ್ತಿದ್ದ ರೀತಿಯನ್ನು ಮರೆಯದೇ ಅನುಕರಿಸುತ್ತಾರೆ. ವಿಷ್ಣುವರ್ಧನ್ ಅವರ ದೇಹದ ಭಾಗವೇ ಆಗಿ ಹೋಗಿತ್ತು ಆ ಕಡಗ. ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಇಂದಿಗೂ ಆ ಕಡಗವನ್ನು ಸಂರಕ್ಷಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಅಂದ ಹಾಗೆ ಈ ಕಡಗದ ಮಹತ್ವ ಏನು? ವಿಷ್ಣುವರ್ಧನ್ ಕಡಗ ಧರಿಸುವ ಕಾರಣ ಏನು? ಕಡಗವನ್ನು ವಿಷ್ಣು ಅವರಿಗೆ ಕೊಟ್ಟಿದ್ದು ಯಾರು?

ವಿಷ್ಣುವರ್ಧನ್ ಅವರು ಆರಂಭದಲ್ಲಿ ಕಡಗ ಧರಿಸುತ್ತಿರಲಿಲ್ಲ. 1980 ರ ಬಳಿಕವಷ್ಟೆ ಅವರು ಕಡಗ ಧರಿಸಲು ಆರಂಭಿಸಿದರು. 1980 ರ ಬಳಿಮ ವಿಷ್ಣು ನಟಿಸಿದ ಬಹುತೇಕ ಎಲ್ಲ ಸಿನಿಮಾಗಳಲ್ಲಿ ಅವರ ಕೈಯಲ್ಲಿ ಕಡಗ ಇದೆ ಆದರೆ ಒಂದು‌ ಸಿನಿಮಾ ಬಿಟ್ಟು. ಅದುವೇ ‘ಗುರು ಶಿಷ್ಯರು’. ವಿಷ್ಣು ಅವರ ಕೈಗೆ ಕಡಗ ಬಂದಿದ್ದು ಹೇಗೆ? ಕಡಗವನ್ನು ಅವರು ಧರಿಸುವ ಕಾರಣ ಏನು ಎಂಬುದು ಆಸಕ್ತಿಕರ ಸಂಗತಿ.

1980 ರ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಬೀದರ್’ಗೆ ಹೋಗಿದ್ದರಂತೆ. ಅಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿನ ಗುರುಗಳಯ ಪ್ರೀತಿಪೂರ್ವಕವಾಗಿ ವಿಷ್ಣುವರ್ಧನ್ ಅವರಿಗೆ ಕಡಗವನ್ನು ನೀಡಿದ್ದರು, ಕಡಗದ ಜೊತೆಗೆ ಒಂದು ಕತ್ತಿಯನ್ನೂ ಕೊಟ್ಟರಂತೆ. ಅಂದಿನಿಂದಲೂ ಕಡಗ ವಿಷ್ನುರ್ಧನ್ ಕೈಯಲ್ಲಿದೆ. ಆದರೆ ಅಂದು ದೊರೆತ ಕಡಗವನ್ನು ವಿಷ್ಣು ತೆಗೆಯದೇ ಇರುವುದಕ್ಕೆ ಒಂದು ಆಸಕ್ತಿಕರ ಕಾರಣ ಇದೆ.

ವಿಷ್ಣುವರ್ಧನ್ ಅವರೇ ಹೇಳಿಕೊಂಡಿರುವಂತೆ ಅವರು ಎಡಚರಾಗಿರುವ ಕಾರಣ ಅವರ ಎರಡು ಕೈಗಳಲ್ಲಿನ ಬ್ಯಾಲೆನ್ಸ್ ಸರಿ ಇರಲಿಲ್ಲವಂತೆ. ಇದರಿಂದ ಅವರ ದಿನನಿತ್ಯದ ಕೆಲಸಗಳಲ್ಲಿ ಸಮಸ್ಯೆ ಆಗುತ್ತಿತ್ತಂತೆ ಆದರೆ ಬಲಗೈಗೆ ಕಡಗ ಧರಿಸಿದ ಬಳಿಕ ಎರಡೂ ಕೈಗಳಲ್ಲಿ ಒಂದು ರೀತಿಯ ಬ್ಯಾಲೆನ್ಸ್ ಬಂತಂತೆ. ಕಡಗ ಹಾಕಿಕೊಳ್ಳದೇ ಇದ್ದರೆ ಬಲಗೈ ಬಳಸುವುದೇ ಕಷ್ಟವಾಗುತ್ತದೆ ಎಂದಿದ್ದರು ವಿಷ್ಣುವರ್ಧನ್.

Women Safety: ಚಲನಚಿತ್ರ ವಾಣಿಜ್ಯ ಮಂಡಳಿಗೆ 17 ಪ್ರಶ್ನೆ ಕೇಳಿದ ಮಹಿಳಾ ಆಯೋಗ

ಕಡಗದ ಜೊತೆಗೆ ಕೊರಳಿಗೆ ನವರತ್ನದ ಸರ ಸಹ ಹಾಕಿಕೊಳ್ಳುತ್ತಿದ್ದರು ವಿಷ್ಣು. ಆದರೆ ಆ ಹಾರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆ ಹಾರ ಮೈಮೇಲೆ ಇದ್ದರೆ ಒಂದು ಪಾಸಿಟಿವ್ ಎನರ್ಜಿ ಇರುತ್ತದೆ, ನನಗೆ ಮಾತ್ರವಲ್ಲ ನನ್ನ ಜೊತೆ ಇರುವವರಿಗೂ ಪಾಸಿಟಿವ್ ಎನರ್ಜಿ ಇರುತ್ತದೆ ಹಾಗಾಗಿ ಅದನ್ನು ನಾನು ಸದಾ ಹಾಕಿಕೊಂಡಿರುತ್ತೇನೆ ಎಂದಿದ್ದರು ವಿಷ್ಣು. ಅವರ ನಿಧನದ ಬಳಿಕ ಕಡಗ ಮತ್ತು ನವರತ್ನ ಹಾರವನ್ನು ಸಂರಕ್ಷಿಸಿ ಅವರ ಸ್ಮಾರಕದಲ್ಲಿ ಇಡಲಾಗಿದೆ.

LEAVE A REPLY

Please enter your comment!
Please enter your name here