Vegetarian Food: ಮಾಂಸಾಹಾರಿಗಳೆ ಇಲ್ಲದ ವಿಶ್ವದ ಏಕೈಕ ಸಸ್ಯಹಾರಿ ನಗರ ಭಾರತದಲ್ಲಿದೆ

0
145
Vegetarian Food
Vegetarian Food

Vegetarian Food

ಭಾರತದಲ್ಲಿ ಶುದ್ಧ ಸಸ್ಯಹಾರಿಗಳು, ಮಾಂಸಾಹಾರಿಗಳು ಉಭಯ ಆಹಾರ ಸೇವಿಸುವವರು ಇದ್ದಾರೆ. ಹಾಗಾಗಿ ದೇಶದ ಯಾವುದೇ ಮೂಲೆಗೆ ಹೋದರು ಸಸ್ಯಹಾರ ಹಾಗೂ ಮಾಂಸಾಹಾರ ಎರಡೂ ಸಹ ದೊರೆಯುತ್ತವೆ. ಎರಡನ್ನೂ ಸೇವಿಸುವ ಜನರೂ ದೊರಕುತ್ತಾರೆ. ಆದರೆ ಭಾರತದ ಒಂದು ನಗರದಲ್ಲಿ ಮಾತ್ರ ಮಾಂಸಾಹಾರ ದೊರಕುವುದಿಲ್ಲ. ಮಾತ್ರವಲ್ಲ, ಈ ನಗರದಲ್ಲಿ ಯಾರೂ ಸಹ ಮಾಂಸಾಹಾರವನ್ನು ಸೇವಿಸುವುದು ಸಹ ಇಲ್ಲ. ವಿಶ್ವದ ಏಕೈಕ ಸಸ್ಯಹಾರ ನಗರ ಇದು. ಈ ನಗರ ಇರುವುದು ಭಾರತದ ಗುಜರಾತ್ ನಲ್ಲಿ.

ಗುಜರಾತ್ ರಾಜ್ಯದ ಭವನಗರ ಜಿಲ್ಲೆಯ ಪಲಿಟಾನಾ ನಗರದಲ್ಲಿ ಮಾಂಸಾಹಾರಕ್ಕೆ ಸಂಪೂರ್ಣ ನಿಷೇಧವಿದೆ. ಇಲ್ಲಿನ ಜನ ಮಾಂಸ ಮಾರುವಂತಿಲ್ಲ, ಮಾಂಸಕ್ಕಾಗಿ ಪ್ರಾಣಿಗಳನ್ನು ಕಡಿಯುವಂತಿಲ್ಲ, ಮಾಂಸದ ಅಡುಗೆ ಮಾಡುವಂತಿಲ್ಲ, ಮಾಂಸಾಹಾರವನ್ನು ಸ್ವೇವಿಸುವಂತಿಲ್ಲ, ಮಾತ್ರವಲ್ಲ ಈ ನಗರದಲ್ಲಿ ಮೊಟ್ಟೆಗಳನ್ನು ಸಹ ಸೇವನೆ ಮಾಡುವಂತಿಲ್ಲ.

ಈ‌ ನಿರ್ಧಾರಕ್ಕೆ ಕಾರಣ ಜೈನ ಸಮುದಾಯದವರು. ಈ ನಗರದಲ್ಲಿ 900 ವರ್ಷಗಳಷ್ಟು ಪುರಾತನವಾದ ಜೈನ ಬಸದಿಗಳು, ದೇಗುಲಗಳು ದೊಡ್ಡ ಸಂಖ್ಯೆಯಲ್ಲಿವೆ. ಈ ನಗರವನ್ನು ಜೈನರು ಪವಿತ್ರವೆಂದು ಭಾವಿಸುತ್ತಾರೆ. ಹಾಗಾಗಿ ಇಲ್ಲಿ ಮಾಂಸಾಹಾರ ಮಾರಾಟ ಮತ್ತು ಸೇವನೆ ಆಗಬಾರದೆಂದು 2004 ರಲ್ಲಿ ಜೈನ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದರು. ಜೈನ ಸಮುದಾಯದ ಭಾವನೆಗೆ ಗೌರವ ನೀಡಿ ಇಲ್ಲಿ ಇದ್ದ ಸುಮಾರು 250 ಮಾಂಸಾಹಾರದ ಹೋಟೆಲ್ ಮತ್ತು ಮಾಂಸ ಮಾರುವ ಅಂಗಡಿಗಳನ್ನು ಬಂದ್ ಮಾಡಲಾಯ್ತು.

http://Renault Duster: ಬರುತ್ತಿದೆ ಆ ಕಾರು, ಮಾರುತಿ, ಹುಂಡೈ, ಟೊಯೊಟಾಗೆ ಶುರುವಾಗಿದೆ ನಡುಕ

ಜೈನ ಸಮುದಾಯದವರು ಆಹಾರದ ವಿಷಯದಲ್ಲಿ ಬಹಳ ಕಟ್ಟುನಿಟ್ಟು, ಮಾಂಸಾಹಾರ, ಮೊಟ್ಟೆಗಳನ್ನು ಸೇವಿಸದ ಅವರು ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಬೀಟ್ ರೂಟ್, ಕ್ಯಾರೇಟ್ ಗಳನ್ನು ಸಹ ಸೇವಿಸುವುದಿಲ್ಲ. ನೆಲದ ಅಡಿಯಲ್ಲಿ ಬೆಳೆಯುವ ಯಾವುದೇ ತರಕಾರಿಯನ್ನು ಸಹ ಜೈನರು ಸೇವಿಸುವುದಿಲ್ಲ. ಜೈಮ್ ಸಮುದಾಯಕ್ಕೆ ಭಾರತದ ಇತಿಹಾಸ, ಸಂಸ್ಕೃತಿಯಲ್ಲಿ ಬಹುದೊಡ್ಡ ಸ್ಥಾನವಿದೆ. ಹಾಗಾಗಿ ಅವರ ಭಾವನೆಗಳಿಗೆ ಗೌರವ ನೀಡಿ ಗಯಜರಾತ್ ಸರ್ಕಾರವು ಪಲಿಟಾನ ನಗರದಲ್ಲಿ ನಾನ್ ವೆಜ್ ಮಾರಾಟ, ಸೇವನೆಗೆ ನಿಷೇಧ ಹೇರಿದೆ.

LEAVE A REPLY

Please enter your comment!
Please enter your name here