Yash
ಯಶ್, ಭಾರತದ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್’ಗಳಲ್ಲಿ ಒಬ್ಬರು. ಕೆಜಿಎಫ್ ಸಿನಿಮಾದಿಂದಾಗಿ ಅವರ ರೇಂಜ್ ಬಹಳ ಎತ್ತರಕ್ಕೆ ಏರಿದೆ. ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಚಿತ್ರರಂಗಗಳಿಂದಲೂ ಯಶ್’ಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಹೀಗೆಯೇ ಒಂದು ಭಾರಿ ದೊಡ್ಡ ಅವಕಾಶ ಯಶ್ ಗೆ ಬಂದಿತ್ತು, ಆದರೆ ಯಶ್ ನಾಯಕ ಪಾತ್ರದ ಬದಲಿಗೆ ವಿಲನ್ ಪಾತ್ರ ಆಯ್ಕೆ ಮಾಡಿಕೊಂಡರು.
ಯಶ್, ಹಿಂದಿಯ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ವಿಶೆಷವೆಂದರೆ ಈ ಸಿನಿಮಾದ ಸಹ ನಿರ್ಮಾಣವನ್ನೂ ಸಹ ಯಶ್ ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾದ ಮುಖ್ಯ ಪಾತ್ರವೇ ಯಶ್ ಗೆ ಬಂದಿತ್ತಂತೆ. ಅಂದರೆ ಯಶ್, ರಾಮನ ಪಾತ್ರ, ಹನುಮಂತನ ಪಾತ್ರ, ಲಕ್ಷ್ಮಣ ಹೀಗೆ ಯಾವ ನಾಯಕ ಪಾತ್ರವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಿತ್ತು, ಆದರೆ ಯಶ್ ರಾವಣನ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ.
‘ಹಾಲಿವುಡ್ ರಿಪೋರ್ಟರ್’ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟ ಯಶ್, ‘ನನಗೆ ರಾವಣ ಪಾತ್ರ ಬಹಳ ಇಷ್ಟವಾಯ್ತು, ರಾವಣ ಪಾತ್ರ ಹಲವು ಭಿನ್ನತೆಗಳನ್ನು, ವಿಭಿನ್ನ ಶೇಡ್’ಗಳನ್ನು ಹೊಂದಿರುವ ಪಾತ್ರ. ನನಗೆ ಇಷ್ಟವಾದ ಪಾತ್ರ ಅದಾಗಿತ್ತು. ವೇರಿಯೇಷನ್’ಗಳು ಇರುವ ಪಾತ್ರ ಅದು. ರಾವಣನನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಬಹುದಾಗಿದೆ. ಹಾಗಾಗಿ ನನ್ನ ಮೊದಲ ಆಯ್ಕೆ ರಾವಣನೇ ಆಗಿತ್ತು. ನಾನು ರಾವಣನ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆಯಿಂದ ಆ ಪಾತ್ರವನ್ನು ಒಪ್ಪಿಕೊಂಡೆ’ ಎಂದಿದ್ದಾರೆ.
Rishab Shetty: ತೆಲುಗಿನ ಸೂಪರ್ ಹೀರೋ ಸಿನಿಮಾಕ್ಕೆ ರಿಷಬ್ ಶೆಟ್ಟಿ ನಾಯಕ
ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ರಣ್’ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಬಿ ಡೊಯೋಲ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮೇಲೆ ನಟ ಯಶ್ ಸಹ ಹೂಡಿಕೆ ಮಾಡಿದ್ದಾರೆ. ಅವರ ಒಡೆತನದ ಮಾನ್’ಸ್ಟರ್ ಮೈಂಡ್ಸ್ ಈ ಸಿನಿಮಾದ ಮೇಲೆ ಬಂಡವಾಳ ಹೂಡಿದೆ.