Metro News: ಮೆಟ್ರೋನಲ್ಲಿ ಯುವ‌ ಜೋಡಿಯ ರೊಮ್ಯಾನ್ಸ್, ಪ್ರಯಾಣಿಕರ ಆಕ್ರೋಶ: ವಿಡಿಯೋ ನೋಡಿ

0
201
Metro News
ನಮ್ಮ ಮೆಟ್ರೊ

Metro news

ಭಾರತದ ಇತರೆ ಮೆಟ್ರೊಗಳಿಗೆ ಹೋಲಿಸಿದರೆ ಬೆಂಗಳೂರಿನ ಮೆಟ್ರೊ ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿ, ಹೆಚ್ಚು ಸ್ವಚ್ಛವಾಗಿ, ವ್ಯವಸ್ಥಿತವಾಗಿಯೂ ಇದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಮೆಟ್ರೋನಲ್ಲಿ ಸವಾರಿ ಮಾಡುತ್ತಾರೆ. ಅದರ ಲಾಭ ಪಡೆಯುತ್ತಿದ್ದಾರೆ. ಆದರೆ ಆಗೊಮ್ಮೆ ಈಗೊಮ್ಮೆ ಪ್ರಯಾಣಿಕರಿಗೆ ಇರುಸು-ಮುರುಸು ಉಂಟು ಮಾಡುವಂಥಹಾ ಘಟನೆಗಳು ಮೆಟ್ರೋದಲ್ಲಿ ನಡೆಯುವುದುಂಟು. ಈಗ ಅಂಥಹುದೇ ಘಟನೆಯೊಂದು ನಡೆದಿದೆ.

ನಮ್ಮ ಮೆಟ್ರೋನಲ್ಲಿ ಯುವಕ-ಯುವತಿ ಇಬ್ಬರು ಪರಸ್ಪರ ರೊಮ್ಯಾನ್ಸ್ ನಲ್ಲಿ ತೊಡಗಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ‌. ಮೆಟ್ರೋ ರೈಲಿನ ಬಳಿ ನಿಂತು ಯುವಕ ಹಾಗೂ ಯುವತಿ ಪರಸ್ಪರ ಅಪ್ಪಿಕೊಂಡಿದ್ದರು ಹಾಗೂ ಮುತ್ತುಗಳ ವಿನಿಮಯ ಮಾಡಿಕೊಂಡಿದ್ದರು. ಆ ಸನ್ನಿವೇಶವನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ಅನ್ನು ಹಲವರು ಶೇರ್ ಮಾಡಿದ್ದು ಘಟನೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಮೆಟ್ರೋ ಯಾಕೋ ದೆಹಲಿ ಮೆಟ್ರೋ ಆಗುತ್ತಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಆ ಯುವಕ-ಯುವತಿಯ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮೆಟ್ರೋನಲ್ಲಿ ತಿಂಡಿ ತಿಂದರೆ, ನೀರು ಕುಡಿದರೆ ದಂಡ ಹಾಕುವ ಮೆಟ್ರೋ ಇಂಥಹಾ ಘಟನೆಗಳಾದ ಏಕೆ ಶೀಘ್ರವಾಗಿ ಜರುಗಿಸುವುದಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ.

Bengaluru: ಅತಿ ಹೆಚ್ಚು ಶ್ರೀಮಂತರಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ

ಮೆಟ್ರೋ ನಲ್ಲಿ ಅಪರೂಪಕ್ಕೆ ಇಂಥಹ ಘಟನೆಗಳು ನಡೆಯುತ್ತಿರುತ್ತವೆ. ಕಳೆದ ನವೆಂಬರ್ ತಿಂಗಳಲ್ಲಿ ಮೆಟ್ರೋ ಮೂಲಕ ಕಾಲೇಜಿಗೆ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಇತ್ತೀಚೆಗೆ ದೆಹಲಿ‌ ಮೆಟ್ರೋನಲ್ಲಿ ಘಟನೆಯೊಂದು ನಡೆದಿತ್ತು. ಯುವತಿಯೊಬ್ಬಾಕೆ ಬಿಕಿನಿ ಧರಿಸಿ ಮೆಟ್ರೋ ಹತ್ತಿದ್ದಳು. ಆಕೆ ಬಿಕಿನಿ ಧರಿಸಿ ಮೆಟ್ರೋನಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

LEAVE A REPLY

Please enter your comment!
Please enter your name here