MLA Raja Babu
‘ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ’ ಇದು ಪ್ರಚಲಿತದ ಗಾದೆ. ಇತ್ತೀಚಿನ ದಿನಗಳಲ್ಲಿ ಈ ಗಾದೆ ಪದೇ ಪದೇ ಸತ್ಯವಾಗುತ್ತಲೇ ಇದೆ. ಇದೀಗ ತೆಲಂಗಾಣದಲ್ಲಿ ‘ಚಾಲಾಕಿ’ ಯುವಕನೊಬ್ಬ ತನ್ನ ಶಾಸಕನ್ನೇ ಇಕ್ಕಟ್ಟಿಗೆ ಸಿಲುಕಿಸಿ ತಾನು ಮಾತ್ರ ಭರಪೂರ ಲಾಭ ಮಾಡಿಕೊಂಡು ಪರಾರಿಯಾಗಿದ್ದಾನೆ. ಆದರೆ ಆ ಯುವಕನನ್ನು ಚಾಲಾಕಿ ಎನ್ನಬೇಕೊ, ಮೋಸಗಾರ ಎನ್ನಬೇಕೋ ನೀವೇ ನಿರ್ಧರಿಸಿ.
ತೆಲಂಗಾಣದ ಏಕೈಕ ಬಿಜೆಪಿ ಶಾಸಕ ಟಿ ರಾಜಾ ಅಲಿಯಾಸ್ ರಾಜಾಸಿಂಗ್ ತಮ್ಮ ಮುಸ್ಲಿಂ ವಿರೋಧಿ ಹೇಳಿಕೆಗಳಿಂದ ಜನಪ್ರಿಯರು. ಯೂಟ್ಯೂಬ್ಗಳಲ್ಲಿ ಅವರ ವಿಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತವೆ. ಆದರೆ ಮುಸ್ಲಿಂ ಯುವಕನೊಬ್ಬ ಟಿ ರಾಜಾ ಹೆಸರು ಹೇಳಿಕೊಂಡು ಚಾಲಾಕಿತನ ತೋರಿಸಿ, ಭರ್ಜರಿ ಲಾಭ ಮಾಡಿಕೊಂಡಿದ್ದಾನೆ, ಯುವಕನ ಚಾಲಾಕಿತನಕ್ಕೆ ನೆಟ್ಟಿಗರು ಅವಾಕ್ಕಾಗಿದ್ದಾರೆ.
ಶೇಖ್ ಮೊಹಮ್ಮದ್ ಎಂಬಾತ ಬೈಕ್ ಒಂದನ್ನು ಸಾಲದ ಮೇಲೆ (ಲೋನ್ ಇಎಂಐ) ಖರೀದಿ ಮಾಡಿದ್ದಾನೆ. ರಿಕವರಿ ನಂಬರ್ ಆಗಿ ಶಾಸಕ ರಾಜಾ ಸಿಂಗ್ ಮೊಬೈಲ್ ನಂಬರ್ ಕೊಟ್ಟಿದ್ದಾನೆ. ಅದೂ ಇರ್ಫಾನ್ ಎಂಬ ತನ್ನ ಗೆಳೆಯನ ನಂಬರ್ ಇದು ಎಂದು ಹೇಳಿದ್ದಾನೆ. ಆ ನಂತರ ಬೈಕ್ ಅನ್ನು ಸಾಲದ ಮೇಲೆ ಖರೀದಿಸಿ ಪರಾರಿಯಾಗಿದ್ದಾನೆ. ತನ್ನ ಮೊಬೈಲ್ ನಂಬರ್ ಗೆ ಸಾಲದವರು ಕರೆ ಮಾಡಬಾರದೆಂದು ಸ್ವಿಚ್ ಆಫ್ ಸಹ ಮಾಡಿದ್ದಾನೆ.
Hotel: ಊಟಕ್ಕೆ ಉಪ್ಪಿನಕಾಯಿ ಕೊಡುವುದು ಮರೆತಿದ್ದಕ್ಕೆ 35 ಸಾವಿರ ನಷ್ಟ!
ಕಡೆಗೆ ಸಾಲ ಕೊಟ್ಟ ಬೈಕ್ ಕಂಪೆನಿಯರು, ಶೇಖ್ ಮೊಹಮ್ಮದ್ ನೀಡಿದ್ದ ತನ್ನ ‘ಗೆಳೆಯ’ ಇರ್ಫಾನ್ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದಾರೆ. ಆಗ ನೋಡಿದರೆ ಆ ಕರೆ ಹೋಗಿರುವುದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ಗೆ. ಪಾಪ ಕರೆ ಮಾಡಿದ ಯುವತಿಗೆ ತಾನು ಮುಸ್ಲಿಂ ವಿರೋಧಿ ಶಾಸಕ ರಾಜಾ ಸಿಂಗ್ ಜೊತೆ ಮಾತನಾಡುತ್ತಿದ್ದೇನೆ ಎಂದು ತಿಳಿಯದು. ತನ್ನ ಮಾಮೂಲಿ ಜೋರಿನಲ್ಲಿ, ನಿಮ್ಮ ಗೆಳೆಯ ಶೇಖ್ ಮೊಹಮ್ಮದ್ ಸಾಲ ಕಟ್ಟಿಲ್ಲ ನೀವು ಕಟ್ಟಿ ಎಂದು ಕೇಳಿದ್ದಾಳೆ, ಆಗ ಶಾಸಕ ರಾಜಾ ಸಿಂಗ್, ಏರು ಧ್ವನಿಯಲ್ಲಿ ಮಾತನಾಡಿ, ‘ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಗೊತ್ತಿದೆಯೇ?’ ಎಂದಿದ್ದಾರೆ. ಆ ಕಾಲ್ ಸೆಂಟರ್ ಯುವತಿ ‘ಶೇಖ್ ಮೊಹಮ್ಮದ್ ಗೆಳೆಯ ಇರ್ಫಾನ್ ಜೊತೆ’ ಎಂದಿದ್ದಾರೆ. ಕೂಡಲೇ ರಾಜಾ ಸಿಂಗ್ ತಮ್ಮ ವರಸೆ ಶುರು ಮಾಡಿ ಬೈದಿದ್ದಾರೆ. ಆಗ ಆ ಯುವತಿಗೆ ಅರಿವಾಗಿದೆ ಶೇಖ್ ಮೊಹಮ್ಮದ್ ನಮಗೆ ಮೋಸ ಮಾಡಿದ್ದಾನೆಂದು.
ಮಾತು ಮುಂದುವರೆಸಿರುವ ರಾಜಾ ಸಿಂಗ್, ‘ನಿಮಗೇನು ಬುದ್ಧಿ ಇಲ್ಲವೆ? ಯಾರಾದರೂ ಯಾರದ್ದಾದರೂ ನಂಬರ್ ಕೊಟ್ಟರೆ ಹಿಂದೆ ಮುಂದೆ ನೋಡದೆ ತೆಗೆದುಕೊಂಡು, ಕರೆ ಮಾಡಿಬಿರುತ್ತೀರ? ನಾನು ಯಾರು ಎಂದು ನಿಮಗೆ ಗೊತ್ತಿಲ್ಲವಾದರೆ ಯೂಟ್ಯೂಬ್ ಗೆ ಹೋಗಿ ರಾಜಾ ಸಿಂಗ್ ಎಂದು ಸರ್ಚ್ ಮಾಡಿ ನಾನು ಯಾರು, ನನ್ನ ಕೆಲಸ ಏನು ಎಂದು ತಿಳಿಯುತ್ತದೆ’ ಎಂದಿದ್ದಾರೆ ರಾಜಾ ಸಿಂಗ್. ಅಷ್ಟಕ್ಕೆ ಆ ಯುವತಿಗೆ ಅರ್ಥವಾಗಿ ಸುಮ್ಮನೆ ಕಾಲ್ ಕಟ್ ಮಾಡಿದೆ.