Youtuber
ಕೋವಿಡ್ ಬಳಿಕ ಯೂಟ್ಯೂಬ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಯೂಟ್ಯೂಬ್ನಲ್ಲಿ ಹಲವು ರೀತಿಯ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಶಿಕ್ಷಣ, ಕ್ರೀಡೆ, ಫ್ಯಾಷನ್, ಡಿಸೈನ್, ಹಾಸ್ಯ, ಮನೊರಂಜನೆ, ಆಹಾರ, ಸಂಸ್ಕೃತಿ ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಯೂಟ್ಯೂಬ್ನಲ್ಲಿ ವಿಡಿಯೋ ಹಂಚಿಕೊಳ್ಳಲು ಜಾನರ್ನ ಮಿತಿಯೇ ಇಲ್ಲ. ಇವುಗಳಲ್ಲಿ ಊಟದ ವಿಡಿಯೋಗಳು ಸಹ ಬಹಳ ಜನಪ್ರಿಯ. ತಟ್ಟೆಯ ತುಂಬಾ ಆಹಾರ ತುಂಬಿಕೊಂಡು ಸುಮ್ಮನೆ ತಿನ್ನುತ್ತಾ ಹೋಗುವುದಷ್ಟೆ. ಭಾರತದಲ್ಲಿಯೂ ಇಂಥಹಾ ವಿಡಿಯೋ ಮಾಡುವ ತಿನ್ನುಬಾಕರ ಸಂಖ್ಯೆ ದೊಡ್ಡದಾಗಿದೆ. ತಮಿಳಿನ ಸಾಪಾಡ್ ರಾಮನ್ ಎಂಬಾತ ಬಹಳ ಪ್ರಸಿದ್ಧ ಇಂಥಹುದ್ದೇ ವಿಡಿಯೋ ಮಾಡುತ್ತಿದ್ದ ಯೂಟ್ಯೂಬರ್ ಒಬ್ಬರು ಅತಿಯಾದ ಊಟ ಸೇವನೆ ಮಾಡಿದ್ದರಿಂದ ಮರಣ ಹೊಂದಿದ್ದಾರೆ.
ಭಾರತದಂತೆಯೇ ಚೀನಾದಲ್ಲಿಯೂ ಸಹ ಇಂಥಹ ತಿನ್ನುಬಾಕ ಯೂಟ್ಯೂಬರ್ಗಳ ಸಂಖ್ಯೆ ದೊಡ್ಡದಾಗಿದೆ. ಅದರಲ್ಲೂ ಎಎಸ್ಎಂಆರ್ ಹೆಸರಿನ ವಿಡಿಯೋಗಳು ಚೀನಾ, ಥಾಯ್ಲೆಂಡ್ಗಳಲ್ಲಿ ಟ್ರೆಂಡ್ ಆಗುತ್ತಿವೆ. ಇಂಥಹದೇ ವಿಡಿಯೋಗಳನ್ನು ಮಾಡುತ್ತಿದ್ದ ಚೀನಾದ ಯೂಟ್ಯೂಬರ್ ಒಬ್ಬರು ಅತಿಯಾಗಿ ಆಹಾರ ಸೇವಿಸಿ ನಿಧನ ಹೊಂದಿದ್ದಾರೆ. ಪ್ಯಾನ್ ಶಿಯೋಟಿಂಗ್ ಎಂಬಾಕೆ ಊಟದ ಚಾಲೆಂಜ್ಗಳನ್ನು ತೆಗೆದುಕೊಂಡು ಅದರ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಇತ್ತೀಚೆಗೆ ಅಂಥಹುದೇ ಒಂದು ಚಾಲೆಂಜ್ ತೆಗೆದುಕೊಂಡು ಅದನ್ನು ಮುಗಿಸುವ ಭರದಲ್ಲಿ ತಾನೇ ‘ಖಾಲಿ’ ಆಗಿಬಿಟ್ಟಿದ್ದಾಳೆ.
ಪ್ಯಾನ್ ಶಿಯೋಟಿಂಗ್, ದಿನಕ್ಕೆ ಸತತ 10 ಗಂಟೆಗಳ ಕಾಲ ಆಹಾರ ಸೇವಿಸುವ ಚಾಲೆಂಜ್ ಸ್ವೀಕಾರ ಮಾಡಿದ್ದರು. ಆ ಚಾಲೆಂಜ್ ಅನ್ನು ಮುಗಿಸುವ ಕಾರಣಕ್ಕೆ ಬರೋಬ್ಬರಿ 10 ಗಂಟೆಗಳ ಕಾಲ ಪ್ಯಾನ್ ಊಟ ಸೇವಿಸಿದ್ದರು. ಏನೇನೋ ಆಹಾರ ಖಾದ್ಯಗಳನ್ನು ಪ್ಯಾನ್ ಸೇವನೆ ಮಾಡಿದ್ದರು. ಪ್ಯಾನ್, ವಿಡಿಯೋಗಳಿಗಾಗಿ ಒಂದು ಬಾರಿಗೆ ಸುಮಾರು 10 ಕೆಜಿ ಊಟ ಮಾಡುತ್ತಿದ್ದರಂತೆ. ಅದನ್ನೇ ಅವರು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಹಂಚಿಕೊಳ್ಳುತ್ತಿದ್ದರಂತೆ. ಕುಟುಂಬದವರು, ಹಿತೈಷಿಗಳು ಎಷ್ಟು ಬುದ್ಧಿ ಹೇಳಿದರೂ ಸಹ ಅವರು ಸುಧಾರಿಸಿರಲ್ಲವಂತೆ ಕೊನೆಗೆ ಅವರ ಇದೇ ಅಭ್ಯಾಸದಿಂದ ಅವರು ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೆ 10 ಗಂಟೆ ತಿನ್ನುವ ಚಾಲೆಂಜ್ ಮುಗಿಸಿದ್ದ ಪ್ಯಾನ್ರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತಾದರೂ ಅವರು ಅಲ್ಲಿ ನಿಧನ ಹೊಂದಿದರು. ಅವರ ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ತಿಳಿದು ಬಂದಿದ್ದೆಂದರೆ ಅವರ ಜೀರ್ಣಾಂಗಗಳು ಸತ್ವ ಕಳೆದುಕೊಂಡಿದ್ದವು. ಅವರ ಜೀರ್ಣಾಂಗಗಳಲ್ಲಿ ಜೀರ್ಣವಾಗದ ಆಹಾರ ಹಾಗೆಯೇ ಉಳಿದಿತ್ತು. ಇದೇ ಕಾರಣದಿಂದ ಪ್ಯಾನ್ ನಿಧನ ಹೊಂದಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ.
Bangladesh: ಹೊತ್ತಿ ಉರಿಯುತ್ತಿದೆ ಬಾಂಗ್ಲಾದೇಶ, ಕಾರಣವೇನು?
ಪ್ಯಾನ್ ನಿಧನದ ಬಳೀಕ ಚೀನಾದಲ್ಲಿ ಈ ಎಎಸ್ಎಂಆರ್ ವಿಡಿಯೋಗಳು, ಈಟಿಂಗ್ ಚಾಲೆಂಜ್ ವಿಡಿಯೋಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಅದು ಹೇಗೆ ಒಬ್ಬ ವ್ಯಕ್ತಿ, ಇನ್ನೊಬ್ಬ ವ್ಯಕ್ತಿ ಊಟ ಮಾಡುವುದನ್ನು ಗಂಟೆ ಗಟ್ಟಲೆ ನೋಡಬಲ್ಲ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.