Site icon Samastha News

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ, ದೊಡ್ಮನೆಯಲ್ಲಿ ಇದು ಮೊದಲು

Yuva Rajkumar

Yuva Rajkumar

ದೊಡ್ಮನೆ ಎಂದೇ ಕರೆಯಲಾಗುವ ಡಾ ರಾಜ್‌ಕುಮಾರ್‌ ಕುಟುಂಬದಲ್ಲಿ ಈ ಹಿಂದೆ ಎಂದೂ ನಡೆಯದ ಘಟನೆಯೊಂದು ನಡೆಯಲು ಮುಂದಾಗಿದೆ. ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವರಾಜ್‌ ಕುಮಾರ್‌ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್‌ ಕುಮಾರ್‌ ಹಾಗೂ ಶ್ರೀದೇವಿ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಇದೀಗ ಯುವ ರಾಜ್‌ಕುಮಾರ್‌ ಅವರು ಪತ್ನಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಪತ್ನಿಗೆ ಈಗಾಗಲೇ ವಕೀಲರ ಮೂಲಕ ಅರ್ಜಿ ಕಳಿಸಿದ್ದಾರೆ ಎನ್ನಲಾಗುತ್ತಿದೆ.

ಯುವರಾಜ್‌ ಕುಮಾರ್‌ ಹಾಗೂ ಶ್ರೀದೇವಿ ಐದು ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಹಿರಿಯರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆ ಆಗಿದ್ದರು. ಮದುವೆಗೆ ಇಡೀ ದೊಡ್ಮನೆ ಕುಟುಂಬದ ಜೊತೆಗೆ ಚಿತ್ರರಂಗದ ಹಲವು ಗಣ್ಯರು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದರು. ಮೈಸೂರಿನವರಾಗಿದ್ದ ಶ್ರೀದೇವಿ, ಯುವ ಏಳು ವರ್ಷ ಪ್ರೀತಿಸಿ ಬಳಿಕ ಹಿರಿಯರ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದರು. ಆದರೆ ಈಗ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

Instant Divorce: ಮದುವೆಯಾದ ಮೂರೇ ನಿಮಿಷಕ್ಕೆ ವಿಚ್ಛೇದನ! ಕಾರಣವೇನು?

ಪತ್ನಿಯು ತಮಗೆ ಅಗೌರವ ತೋರುತ್ತಾರೆ ಹಾಗೂ ಮಾನಸಿಕ ಕ್ರೌರ್ಯ ಪ್ರದರ್ಶಿಸುತ್ತಾರೆ ಎಂದು ಆರೋಪ ಹೊರಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಯುವರಾಜ್‌ ಕುಮಾರ್‌ ಅರ್ಜಿ ಹಾಕಿದ್ದಾರೆ. ಶ್ರೀದೇವಿ ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶ್ರೀದೇವಿ, ʼಲೀಗಲ್‌ ನೊಟೀಸ್‌ಗೆ ನಾನು ಈಗಾಗಲೇ ಉತ್ತರಿಸಿದ್ದೇನೆ, ವಿಚ್ಛೇದನ ಅರ್ಜಿ ಇನ್ನೂ ನನಗೆ ತಲುಪಿಲ್ಲ. ಅದು ಬಂದ ಮೇಲೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ಬೇರೆ ವಿಷಯಗಳನ್ನು ಮಾತನಾಡುವ ಮಾನಸಿಕ ಸ್ಥಿತಿಯಲ್ಲಿ ನಾನಿಲ್ಲ. ನನ್ನ ಖಾಸಗಿತನವನ್ನು ಗೌರವಿಸುತ್ತೀರೆಂಬ ನಂಬಿಕೆ ಇದೆ” ಎಂದಿದ್ದಾರೆ ಶ್ರೀದೇವಿ.

ಶ್ರೀದೇವಿ ಹಾಗೂ ಯುವರಾಜ್‌ ಕುಮಾರ್‌ ನಡುವೆ ಕಳೆದ ಒಂದೆರಡು ವರ್ಷದಿಂದಲೂ ಭಿನ್ನಾಭಿಪ್ರಾಯಗಳು ಇವೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಶ್ರೀದೇವಿ ಅವರು ಯುವ ಸಿನಿಮಾದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

Exit mobile version