Site icon Samastha News

Zomato: 10 ರೂಪಾಯಿ ನೀರು ಬಾಟಲಿಗೆ ನೂರು ರೂಪಾಯಿ ಬಿಲ್! ಉಗಿಸಿಕೊಂಡ ಜೊಮ್ಯಾಟೊ

Zomato

Zomato

ಬೆಲೆಗಳು ಬೇಗನೆ ಏರುತ್ತಿವೆ ನಿಜ, ಅದರಲ್ಲೂ ಮನೆಯಲ್ಲಿ ಕೂತು ಆರ್ಡರ್ ಮಾಡಿದರೆ ರೀಟೇಲ್ ಬೆಲೆಗಿಂತಲೂ ತುಸು ಹೆಚ್ಚು ಹಣ ಕೊಡಬೇಕಾಗುತ್ತದೆ. ಆದರೆ ಇಷ್ಟೋಂದಾ! 10 ರೂಪಾಯಿ‌ ಬೆಲೆಯ ಅರ್ಧ ಲೀಟರ್ ನೀರಿನ ಬಾಟಲಿಗೆ ಬರೋಬ್ಬರಿ 100 ರೂಪಾಯಿ ಪಡೆದುಕೊಂಡಿದೆ ಜೊಮ್ಯಾಟೊ. ಜೊಮ್ಯಾಟೊ ಮೂಲಕ ನೀರು ಖರೀದಿಸಿದವರ ಗಂಟಲು ಒಣಗುವಂತೆ ಮಾಡಿದೆ.

ಜೊಮ್ಯಾಟೊ ಇತ್ತೀಚೆಗೆ ಲೈವ್ ಕಾನ್ಸರಟ್ ಒಂದನ್ನು ಆಯೋಜಿಸಿತ್ತು. ಆ ಕಾನ್ಸರ್ಟ್ ಗೆ ಯಾರೂ ಸಹ ಆಹಾರವಾಗಲಿ, ನೀರಿನ ಬಾಟಲಿ ಆಗಲಿ ಕೊಂಡೊಯ್ಯುವಂತೆ ಇರಲಿಲ್ಲ. ಆದರೆ ಕಾನ್ಸರ್ಟ್ ಗೆ ಹೋದವರು ನೀರು ಖರೀದಿಸಬೇಕೆಂದರೆ 10 ರೂಪಾಯಿಯ ಬಿಸ್ಲೆರಿ ಬಾಟಲಿಗೆ ನೂರು ರೂಪಾಯಿ ನೀಡಬೇಕಿತ್ತು. ಅರ್ಧ ಲೀಟರ್ ನ ಎರಡು ನೀರಿನ ಬಾಟಲಿ ಖರೀದಿಸಿ 200 ರೂಪಾಯಿ ಪೇಮೆಂಟ್ ಮಾಡಿದ್ದಾರೆ. ಖರೀದಿಸಿದ ನೀರಿನ ಬಾಟಲಿಗಳು ಮತ್ತು ಪೇಮೆಂಟ್ ಮಾಹಿತಿಯನ್ನು ಪಲ್ಲಾದ್ ಎಂಬುವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಜೊಮ್ಯಾಟೊಗೆ ಟ್ಯಾಗ್ ಮಾಡಿ‌ ಚಿತ್ರ ಹಂಚಿಕೊಂಡಿರುವ ಪಲ್ಲಾದ್, ‘ಕಾನ್ಸರ್ಟ್ ಗೆ ನೀರಿನ ಬಾಟಲಿ ಕೊಂಡೊಯ್ಯುವಂತೆ ಇಲ್ಲ. ಅಲ್ಲೇ ನೀರು ಖರೀದಿಸಬೇಕೆಂದರೆ ಅರ್ಧ  ಲೀಟರ್ ಬಾಟಲಿಗೆ 100 ರೂ ಕೊಡಬೇಕು, ಏನಿದು‌ ಜನರನ್ನು ದೋಚುವ ಕೆಲಸ ಮಾಡುತ್ತಿದ್ದೀರಿಯೇ? ಎಂದು ಪಲ್ಲಾದ್ ಪ್ರಶ್ನೆ ಮಾಡಿದ್ದಾರೆ.

KSDL: ಸಿದ್ದರಾಮಯ್ಯಗೆ 108 ಕೋಟಿ ಕೊಟ್ಟ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ

ಪಲ್ಲಾದ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ  ಜೊಮ್ಯಾಟೊ, ನಾವು ಆ ಕಾರ್ಯಕ್ರಮದ ಆಯೋಜಕರಲ್ಲ ಬದಲಿಗೆ ಕೇವಲ ಟಿಕೆಟ್ ಪಾರ್ಟನರ್ ಗಳು, ಆದರೆ ನಿಮಗೆ ಆಗಿರುವ‌ ಸಮಸ್ಯೆಯನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಮಾಡುವ ಕಾರ್ಯಕ್ರಮವನ್ನು ಉತ್ತಮ ಪಡಿಸಿಕೊಳ್ಳಲು ಇದು ನೆರವಾಗಲಿದೆ ಎಂದಿದೆ.

Exit mobile version