special children: ಬೆಂಗಳೂರಿನಲ್ಲಿ ಹೀಗೋಂದು ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

0
194
Special children

special children

‘ಯಾರಿಗೆ ಬಂದು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಎಂಬ ಹಾಡೊಂದಿದೆ. ಇಲ್ಲಿ ಕವಿಯ ಆಕ್ರೋಶವೇನೆಂದರೆ, ಸ್ವಾತಂತ್ರ್ಯ ಎಂಬುದು ಬಡವರಿಗೆ, ಬಲ್ಲಿದರಿಗೆ, ಸಮಾಜದ ಮುಖ್ಯ ಧಾರೆಯಲ್ಲಿ ಇರದೇ ಹೋದವರಿಗೆ ಇನ್ನೂ ಬಂದಿಲ್ಲವೆಂಬುದು. ಅದು ನಿಜವೂ ಹೌದು, ಯಾರಿಗೆ ಸಮಾಜದಲ್ಲಿ ಕೆಲ ಸವಲತ್ತು, ಶಕ್ತಿ, ಸೌಕರ್ಯ, ಹಕ್ಕುಗಳು ಇವೆಯೋ ಅವರಿಗಷ್ಟೆ ಆಗಸ್ಟ್ 15 ಸ್ವಾತಂತ್ರ್ಯೋತ್ಸವ ಇವು ಇಲ್ಲದವರಿಗೆ ವರ್ಷದ ಬಾಕಿ ದಿನಗಳಂತೆ ಅದೂ ಒಂದು ದಿನವಷ್ಟೆ. ಆದರೆ 18 ನಾಟೌಟ್ ಸಮಾಜ ಸೇವಾ ಸಂಸ್ಥೆಯೊಂದು ರೋಟರಿ, ಮ್ಯಾತ್ ಕೋ ಇನ್ನಿತರೆ ಕೆಲವು ಸಮಾನ ಮನಸ್ಕ ಸಂಸ್ಥೆಗಳೊಟ್ಟಿಗೆ ಜನರೊಟ್ಟಿಗೆ ಸೇರಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಭಿನ್ನವಾಗಿ, ಅರ್ಥಪೂರ್ಣವಾಗಿಯೂ ಆಚರಿಸಿವೆ.

ಬಹುತೇಕ ಖಾಲಿಯೇ ಇರುವ ಕಬ್ಬನ್ ಪಾರ್ಕ್​ನ ಬಾಲಭವನದ ವಿಶೇಷಚೇತನ ಮಕ್ಕಳ ಉದ್ಯಾನ ಕೆಲವು ದಿನದ ಹಿಂದೆ ಗಿಚಿ ಗುಡುತ್ತಿತ್ತು. ಅಲ್ಲಿ ಹಲವು ವಿಶೇಷಚೇತನ ಮಕ್ಕಳು ಆಟಗಳಲ್ಲಿ, ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ತಮಗೆ ತೋಚಿದಂತೆ ಹಾಡಿ, ಕುಣಿದು ಕುಪ್ಪಳಿಸಿದರು. ಸದಾ ವ್ಹೀಲ್​ಚೇರ್​ಗೆ, ಅಥವಾ ಇನ್ನಿತರೆಗಳಿಗೆ ಬಂಧಿಯಾಗಿದ್ದ ಅವರು ಸ್ವಾತಂತ್ರ್ಯದ ರುಚಿ ಅನುಭವಿಸಿದರು. ಇದಕ್ಕೆಲ್ಲ ಕಾರಣ 18 ನಾಟೌಟ್ ಮತ್ತು ಇತರೆ ಸಮಾನ ಮನಸ್ಕ ಸಂಸ್ಥೆಗಳು ಮತ್ತು ಜನರು.

ವಿಶೇಷ ಚೇತನ ಮಕ್ಕಳಿಗಾಗಿಯೇ ಕಬ್ಬನ್ ಪಾರ್ಕ್​ನ ಬಾಲಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು. ಈ ಸ್ವಾತಂತ್ರ್ಯೋತ್ಸವಕ್ಕೆ ‘ಇನ್​ಕ್ಲೂಸಿವ್ ಇಂಡಿಪೆಂಡೆನ್ಸ್ ಡೇ’ ಎಂಬ ವಿಶೇಷ ಹೆಸರಿಡಲಾಗಿತ್ತು. ವಿಶೇಷಚೇತನ ಮಕ್ಕಳು, ದಿವ್ಯಾಂಗ ಮಕ್ಕಳು ತಮ್ಮ ಪೋಷಕರು, ಅತಿಥಿಗಳು, ಸ್ವಯಂ ಸೇವಕರೊಟ್ಟಿಗೆ ಸೇರಿ ದೊಡ್ಡ ಭಾರತದ ಧ್ವಜ ರಚಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ನಕ್ಕು-ನಲಿದು ಸಂಭ್ರಮಿಸಿದರು. ಎಲ್ಲರಂತೆ ತಾವೂ ಎಂಬ ಭಾವನೆ ಮೂಡಿಸಿಕೊಂಡರು. ಕಾರ್ಯಕ್ರಮದ ಉದ್ದೇಶವೂ ಅದೇ ಆಗಿತ್ತು. ಸುಮಾರು 9 ವಿಶೇಷ ಶಾಲೆಯ 150ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Mobile in India: ಭಾರತದ ಮೊದಲ ಮೊಬೈಲ್ ಕಾಲ್ ಮಾಡಿದ ವ್ಯಕ್ತಿ ಈತ, ಆಗ ಒಂದು ಕಾಲ್ ಗೆ ಎಷ್ಟಿತ್ತು ಬೆಲೆ?

18 ನಾಟೌಟ್ ಸಂಸ್ಥೆ ಕೆಲ ವರ್ಷಗಳಿಂದಲೂ ದಿವ್ಯಾಂಗ, ವಿಶೇಷ ಚೇತನ ಮಕ್ಕಳಿಗಾಗಿ ಈ ರೀತಿಯ ಕಾರ್ಯಕ್ರಮವನ್ನು ಮಾಡುತ್ತ ಬಂದಿದೆ. ಲಿಗಿ ಮತ್ತು ಸುನಿಲ್ ಅವರು ತಮ್ಮ ಮಗ ಜೇಡನ್​ನ ಸ್ಮರಣೆಯಲ್ಲಿ ಈ ಸಂಸ್ಥೆ ಪ್ರಾರಂಭಿಸಿದರು. ವಿಶೇಷ ಚೇತನ ಮಗುವಾಗಿದ್ದ ಚೇತನ್ 18 ವರ್ಷಕ್ಕೆ ಇಹಲೋಕ ತ್ಯಜಿಸಿದರು. ಆ ಮಗುವಿನ ನೆನಪಿನಲ್ಲಿ ದಿವ್ಯಾಂಗ ಹಾಗೂ ವಿಶೇಷ ಚೇತನ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಲಿಗಿ ಮತ್ತು ಸುನಿಲ್ ದಂಪತಿ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಈ ಹಿಂದೆ 18 ನಾಟೌಟ್ ಸಂಸ್ಥೆ, ದಿವ್ಯಾಂಗ ಮತ್ತು ವಿಶೇಷ ಚೇತನ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದೆ. ವಜ್ರ ಬಸ್​ನಲ್ಲಿ ಪ್ರಯಾಣ, ಮೆಟ್ರೋನಲ್ಲಿ ಓಡಾಡಿಸಿದೆ. ಮಾಲ್​ಗಳಿಗೆ ಕರೆದುಕೊಂಡು ಹೋಗಿದೆ. ಕಾಫಿ ಶಾಪ್​ಗಳಿಗೆ ಕರೆದುಕೊಂಡು ಹೋಗಿದೆ. ವಿಶೇಷ ಮಕ್ಕಳನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದೆ. ಸಂಗೀತ ಮ್ಯೂಸಿಯಂ ಇನ್ನೂ ಹಲವು ಕಡೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಗೆ ಭಿನ್ನ ಅನುಭೂತಿ ಮೂಡಲು ಕಾರಣವಾಗಿದೆ. ಇದೀಗ ಇದೇ ಸಂಸ್ಥೆಯು ವಿಶೇಷ ಮಕ್ಕಳನ್ನು ಮಂಗಳೂರು ಹಾಗೂ ಕೇರಳಕ್ಕೆ ಪ್ರವಾಸ ಕರೆದುಕೊಂಡು ಹೋಗಲು ಸಜ್ಜಾಗಿದೆ.

LEAVE A REPLY

Please enter your comment!
Please enter your name here