2011 world cup: ವಿಶ್ವಕಪ್ ಗೆದ್ದುಕೊಟ್ಟ ಧೋನಿಯ ಬ್ಯಾಟು ಹರಾಜು, ಮಾರಾಟವಾಗಿದ್ದು ಭಾರಿ ಮೊತ್ತಕ್ಕೆ

0
257
2011 world cup
2011 world cup Bat

2011 world cup

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಪ್ರಿಯರು ಎಂದಿಗೂ ಮರೆಯದ ಹೆಸರು. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿನ್ಸ್ ಟ್ರೋಫಿ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಧೋನಿ. ಅದರಲ್ಲಿಯೂ 2011 ರ ಏಕದಿನ‌ ವಿಶ್ವಕಪ್ ಜಯವಂತೂ ಅವಿಸ್ಮರಣೀಯ. ಕೊನೆಯಲ್ಲಿ ಧೋನಿ ಭಾರಿಸಿದ ಸಿಕ್ಸ್ ಅನ್ನು ಮರೆಯಲು ಸಾಧ್ಯವೆ? ಅಂದಹಾಗೆ ಧೋನಿ ಅಂದು ಆಡಿದ ಬ್ಯಾಟ್ ಅನ್ನು ಆಗಲೆ ಹರಾಜು ಹಾಕಲಾಗಿತ್ತು. ಆ ಬ್ಯಾಟು ಭಾರಿ‌ ಮೊತ್ತಕ್ಕೆ ಮಾರಾಟವಾಗಿತ್ತು.

ಭಾರತ 2011 ರ ವಿಶ್ವಕಪ್ ಗೆದ್ದ ಕೇವಲ ಮೂರು ತಿಂಗಳ ಬಳಿಕ ಲಂಡನ್ ನಲ್ಲಿ ಆ ಬ್ಯಾಟನ್ನು ಹರಾಜು ಹಾಕಲಾಯ್ತು. ಆ ಬ್ಯಾಟನ್ನು ಮುಂಬೈನ ಬ್ರೊಕರೇಜ್ ಸಂಸ್ಥೆ ಆರ್ ಕೆ ಗ್ಲೋಬಲ್ ಬರೋಬ್ಬರಿ 72 ಲಕ್ಷ ರೂಪಾಯಿಗೆ ಖರೀದಿ ಮಾಡಿತು. ಈಗ ಆ ಬ್ಯಾಟು RK global ಸಂಸ್ಥೆಯ ಸಂಗ್ರಹದಲ್ಲಿದೆ. 13 ವರ್ಷದ ಹಿಂದೆಯೇ ಆ ಬ್ಯಾಟು‌ 72 ಲಕ್ಷಕ್ಕೆ ಮಾರಾಟವಾಗಿತ್ತು, ಈಗ ಆಗಿದಿದ್ದರೆ 7 ಕೋಟಿಗೆ ಹರಾಜಾಗುತ್ತಿತ್ತೊ ಏನೋ.

ಮೈಸೂರು ರಾಜಮನೆತನಕ್ಕೆ ಶಾಕ್ ಕೊಟ್ಟ ಸರ್ಕಾರ, ಕೋರ್ಟ್ ಮೆಟ್ಟಿಲೇರಿದ ರಾಜ ಕುಟುಂಬ

ಆಗ ಆ ಬ್ಯಾಟನ್ನು ಹರಾಜು ಹಾಕಲು ಕಾರಣವೂ ಇತ್ತು. ಧೋನಿಯ ಪತ್ನಿ ಸಾಕ್ಷಿ ಸಮಾಜ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಅದರ ಹೆಸರು ದಿ ಸಾಕ್ಷಿ ಫೌಂಡೇಶನ್. ಆ ಸಂಸ್ಥೆಯ ಸಾಜಿಕ ಕಾರ್ಯಗಳಿಗೆ ನೆರವು ಒದಗಿಸಲೆಂದು ಧೋನಿಯ ಬ್ಯಾಟನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಸಾಕ್ಷಿ ಫೌಂಡೇಶನ್ ಗೆ ನೀಡಲಾಗಿತ್ತು.

ಧೋನಿ 2011 ರ ವಿಶ್ವಕಪ್ ಗೆದ್ದ ಬಳಿಕ ಭಾರತ ಯಾವುದೇ ವಿಶ್ವಕಪ್ ಗೆದ್ದಿರಲಿಲ್ಲ. ಈಗ 2024 ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದು ಭಾರತೀಯರು ದಾಖಲೆ ಬರೆದಿದ್ದಾರೆ. ಆ ಮೂಲಕ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದಿದೆ ಭಾರತ ತಂಡ.

LEAVE A REPLY

Please enter your comment!
Please enter your name here