2011 world cup
ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಪ್ರಿಯರು ಎಂದಿಗೂ ಮರೆಯದ ಹೆಸರು. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿನ್ಸ್ ಟ್ರೋಫಿ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಧೋನಿ. ಅದರಲ್ಲಿಯೂ 2011 ರ ಏಕದಿನ ವಿಶ್ವಕಪ್ ಜಯವಂತೂ ಅವಿಸ್ಮರಣೀಯ. ಕೊನೆಯಲ್ಲಿ ಧೋನಿ ಭಾರಿಸಿದ ಸಿಕ್ಸ್ ಅನ್ನು ಮರೆಯಲು ಸಾಧ್ಯವೆ? ಅಂದಹಾಗೆ ಧೋನಿ ಅಂದು ಆಡಿದ ಬ್ಯಾಟ್ ಅನ್ನು ಆಗಲೆ ಹರಾಜು ಹಾಕಲಾಗಿತ್ತು. ಆ ಬ್ಯಾಟು ಭಾರಿ ಮೊತ್ತಕ್ಕೆ ಮಾರಾಟವಾಗಿತ್ತು.
ಭಾರತ 2011 ರ ವಿಶ್ವಕಪ್ ಗೆದ್ದ ಕೇವಲ ಮೂರು ತಿಂಗಳ ಬಳಿಕ ಲಂಡನ್ ನಲ್ಲಿ ಆ ಬ್ಯಾಟನ್ನು ಹರಾಜು ಹಾಕಲಾಯ್ತು. ಆ ಬ್ಯಾಟನ್ನು ಮುಂಬೈನ ಬ್ರೊಕರೇಜ್ ಸಂಸ್ಥೆ ಆರ್ ಕೆ ಗ್ಲೋಬಲ್ ಬರೋಬ್ಬರಿ 72 ಲಕ್ಷ ರೂಪಾಯಿಗೆ ಖರೀದಿ ಮಾಡಿತು. ಈಗ ಆ ಬ್ಯಾಟು RK global ಸಂಸ್ಥೆಯ ಸಂಗ್ರಹದಲ್ಲಿದೆ. 13 ವರ್ಷದ ಹಿಂದೆಯೇ ಆ ಬ್ಯಾಟು 72 ಲಕ್ಷಕ್ಕೆ ಮಾರಾಟವಾಗಿತ್ತು, ಈಗ ಆಗಿದಿದ್ದರೆ 7 ಕೋಟಿಗೆ ಹರಾಜಾಗುತ್ತಿತ್ತೊ ಏನೋ.
ಮೈಸೂರು ರಾಜಮನೆತನಕ್ಕೆ ಶಾಕ್ ಕೊಟ್ಟ ಸರ್ಕಾರ, ಕೋರ್ಟ್ ಮೆಟ್ಟಿಲೇರಿದ ರಾಜ ಕುಟುಂಬ
ಆಗ ಆ ಬ್ಯಾಟನ್ನು ಹರಾಜು ಹಾಕಲು ಕಾರಣವೂ ಇತ್ತು. ಧೋನಿಯ ಪತ್ನಿ ಸಾಕ್ಷಿ ಸಮಾಜ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಅದರ ಹೆಸರು ದಿ ಸಾಕ್ಷಿ ಫೌಂಡೇಶನ್. ಆ ಸಂಸ್ಥೆಯ ಸಾಜಿಕ ಕಾರ್ಯಗಳಿಗೆ ನೆರವು ಒದಗಿಸಲೆಂದು ಧೋನಿಯ ಬ್ಯಾಟನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಸಾಕ್ಷಿ ಫೌಂಡೇಶನ್ ಗೆ ನೀಡಲಾಗಿತ್ತು.
ಧೋನಿ 2011 ರ ವಿಶ್ವಕಪ್ ಗೆದ್ದ ಬಳಿಕ ಭಾರತ ಯಾವುದೇ ವಿಶ್ವಕಪ್ ಗೆದ್ದಿರಲಿಲ್ಲ. ಈಗ 2024 ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದು ಭಾರತೀಯರು ದಾಖಲೆ ಬರೆದಿದ್ದಾರೆ. ಆ ಮೂಲಕ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದಿದೆ ಭಾರತ ತಂಡ.