Young Business Men: 21 ವರ್ಷ ವಯಸ್ಸಿಗೆ 11 ಸಾವಿರ ಕೋಟಿ ಸಂಸ್ಥೆಯ ಮಾಲೀಕ‌ ಈ ಯುವಕ

0
206
Young Business Men

Young Business Men

21 ವರ್ಷದ ಬಹುತೇಕ ಯುವಕರು ರೀಲ್ಸ್ ನೋಡುತ್ತ, ರೀಲ್ಸ್ ಮಾಡುತ್ತ, ಮೊಬೈಲ್‌ಗಳಲ್ಲಿ ಗೇಮ್ ಆಡುತ್ತ ಸಮಯ ಕಳೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ 21 ವರ್ಷದ ಯುವಕ ಬರೋಬ್ಬರಿ‌ 11 ಸಾವಿರ ಕೋಟಿ ಮೌಲ್ಯದ ಸಂಸ್ಥೆ ಕಟ್ಟಿದ್ದಾನೆ. ಅದೃಷ್ಟದಿಂದಲ್ಲ‌ ಬದಲಿಗೆ ಶ್ರಮದಿಂದ, ಪ್ರತಿಭೆಯಿಂದ.

ಮುಂಬೈ ಮೂಲದ ಆದಿತ್ ಪಲಿಚಾ ಈ ಸಾಧನೆ ಮಾಡಿದ ಯುವಕ. ದೇಶದಾದ್ಯಂತ ಸಿಬ್ಬಂದಿಯನ್ನು ಹೊಂದಿರುವ ಆನ್ ಲೈನ್ ಗ್ರೋಸರಿ (ದಿನಸಿ) ಡೆಲಿವರಿ ಸಂಸ್ಥೆ ಜೆಪ್ಟೋದ ಮಾಲೀಕ. ಈತನ ಕಂಪೆನಿ ಪ್ರಾರಂಭವಾದ ಮೊದಲ‌ ವರ್ಷವೇ 7400 ಕೋಟಿ ಮೌಲ್ಯವನ್ನು ಪಡೆದುಕೊಂಡಿತ್ತು, ಈಗ ಕಂಪೆನಿಯ ಮೌಲ್ಯ 11 ಸಾವಿರ ಕೋಟಿ ರೂಪಾಯಿ. ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲೇ ಇಷ್ಟು ಸಣ್ಣ ವಯಸ್ಸಿಗೆ ಇಷ್ಟು ದೊಡ್ಡ ಮೌಲ್ಯದ ಕಂಪೆನಿ ಕಟ್ಟಿದ ಇನ್ನೊಂದು ಉದಾಹರಣೆ ಇಲ್ಲ.

ಆದಿತ್ ಯಶಸ್ಸಿನ ಹಾದಿ ಅದ್ಭುತವಾದುದು. 2001 ರಲ್ಲಿ ಮುಂಬೈನಲ್ಲಿ ಜನಿಸಿದ ಆದಿತ್, ಎಳವೆಯಲ್ಲೇ ತಂತ್ರಜ್ಞಾನದ ಕಡೆ ಆಕರ್ಷಿತರಾದರು. 17  ನೇ ವಯಸ್ಸಿಗೆ ಆದಿತ್ ತನ್ನ ಮೊದಲ ಸಂಸ್ಥೆ ಗೋ ಪೂಲ್ ಸ್ಥಾಪಿಸಿದರು. ಬಳಿಕ ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರದ ಎಂಜಿನಿಯರ್ ಕಲಿಯಲು ತೆರಳಿದರು. ಅಮೆರಕದಲ್ಲಿ‌ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕೋವಿಡ್ ಬಂತು, ಆಗ ಗಟ್ಟಿ‌ ನಿರ್ಧಾರ ಮಾಡಿ ಶಿಕ್ಷಣ ಮೊಟಕುಗೊಳಿಸಿ ಅಮೆರಿಕದಿಂದ ಭಾರತಕ್ಕೆ ಮರಳಿ ಬಂದು ಉದ್ಯಮಿಯಾಗುವ ತನ್ನದೇ ಕನಸಿಗೆ ನೀರೆರೆಯಲು ಆರಂಭಿಸಿದರು.

ತಮ್ಮ ಬಾಲ್ಯದ ಗೆಳೆಯ ಕೈವಲ್ಯ ವೊಹ್ರಾ ಅವರನ್ನು ಜೊತೆಗೆ ಸೇರಿಸಿಕೊಂಡು ಕಿರಾನಾ ಕಾರ್ಟ್ ಎಂಬ ಆನ್ ಲೈನ್ ದಿನಸಿ ಡೆಲಿವರಿ ಸಂಸ್ಥೆ ಪ್ರಾರಂಭಿಸಿದರು. ಆದರೆ ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಈ ಸಂಸ್ಥೆ ಕೇವಲ ಹತ್ತು ತಿಂಗಳಲ್ಲೆ ಮುಚ್ಚಬೇಕಾಯ್ತು. ಬಳಿಕ ಛಲ ಬಿಡದೆ 2021 ರಲ್ಲಿ ಜೆಪ್ಟೋ ಸ್ಥಾಪಿಸಿದರು. ಈ ಹಿಂದೆ ಮಾಡಿದ್ದ ತಪ್ಪುಗಳಿಂದ ಪಾಠ ಕಲಿತಿದ್ದ ಆದಿತ್, ಆರಂಭದಲ್ಲಿಯೇ ಅದಕ್ಕೆ ಹೂಡಿಕೆದಾರರನ್ನು ಹುಡುಕಿ, ಹೂಡಿಕೆ ತಂದು, ಬ್ಯುನಿಸೆನ್ ಅನ್ನು ಬೆಳೆಸಿದರು.

Bangladesh: ಹೊತ್ತಿ ಉರಿಯುತ್ತಿದೆ ಬಾಂಗ್ಲಾದೇಶ, ಕಾರಣವೇನು? 

ಜೆಪ್ಟೋ ಕೇವಲ ಒಂದು ವರ್ಷದಲ್ಲಿ ಅದ್ಭುತವಾದ ಬೆಳವಣಿಗೆ ಕಂಡಿತು. ಜೆಪ್ಟೋದಷ್ಟು ವೇಗವಾಗಿ ಬೆಳೆದ ಇನ್ನೊಂದು ಸಂಸ್ಥೆ ಭಾರತದಲ್ಲಿಲ್ಲ. ಈಗ ಸಂಸ್ಥೆಯ ಒಟ್ಟು ಮೌಲ್ಯ 11 ಸಾವಿರ ಕೋಟಿಗೂ ಹೆಚ್ಚಿದೆ. ಆದಿತ್, ಭಾರತದ ಬಿಲಿಯನೇರ್ ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಬಾಲ್ಯದ ಗೆಳೆಯ, ಕಂಪೆನಿ ಪಾರ್ಟನರ್ ಕೈವಲ್ಯಕುಮಾರ್ ಮೌಲ್ಯ ಈಗ 1000 ಕೋಟಿಗೂ ಹೆಚ್ಚಿದೆ.

LEAVE A REPLY

Please enter your comment!
Please enter your name here