DK Shivakumar
ಹೆಡ್ ಲೈನ್ ಓದಿ, ಹಣ ಎಲ್ಲಿ ಸುರಿಯುತ್ತಿದ್ದಾರೆಂದು ಹುಡುಕಲು ತೊಡಗಬೇಡಿ. 660 ಕೋಟಿ ಹಣ ಸುರಿಯುತ್ತಿರುವುದು ಬೆಂಗಳೂರಿನ ಹದಗೆಟ್ಟ ರಸ್ತೆ ರಿಪೇರಿ ಮಾಡಲು. ಉಪಮುಖ್ಯ ಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು, ಬೆಂಗಳೂರಿನ ಹದಗೆಟ್ಟ ರಸ್ತೆ ರಿಪೇರಿಗೆ 660 ಕೋಟಿ ಖರ್ಚು ಮಾಡುವುದಾಗಿ ಘೋಷಿಸಿದ್ದಾರೆ.
ಈ ವರೆಗೆ ನಗರದಲ್ಲಿ 2795 ರಸ್ತೆ ಗುಂಡಿಗಳನ್ನು ಬಿಬಿಎಂಪಿ ಗುರುತಿಸಿದೆಯಂತೆ. ಈ ರಸ್ತೆ ಗುಂಡಿಗಳನ್ನು ಮುಂದಿನ 15 ದಿನಗಳ ಒಳಗಾಗಿ ಮುಚ್ಚಲಾಗುವುದು ಎಂದಿ ಡಿಕೆಶಿ ಹೇಳಿದ್ದು, ಅಧಿಕಾರಿಗಳಿಗೆ 15 ದಿನದ ಡೆಡ್ ಲೈನ್ ನೀಡಿದ್ದಾರಂತೆ. ಇದರ ಜೊತೆಗೆ ನಗರದಲ್ಲಿ ಕೆಲವು ಹೊಸ ರಸ್ತೆಗಳ ನಿರ್ಮಾಣ ಹಾಗೂ ಒರುವ ರಸ್ತೆಗಳ ಉನ್ನತೀಕರಣದ ಬಗ್ಗೆಯೂ ಕೆಲ ಘೋಷಣೆಗಳನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ.
ಸಿಟಿ ಸಿವಿಕ್ ಕಮೀಷನರ್ ತುಷಾರ್ ಗಿರಿ ನಾಥ್ ಮಾತನಾಡಿ, ‘ಈಗ ಬಿಡುಗಡೆ ಮಾಡಿರುವ 660 ಕೋಟಿ ಹಣವನ್ನು ಕೇವಲ ರಸ್ತೆ ಗುಂಡಿ ಮುಚ್ಚಲು ಮಾತ್ರವೇ ಬಳಸುವುದಿಲ್ಲ ಬದಲಿಗೆ ಕೆಲವು ರಸ್ತೆಗಳ ಅಗಲೀಕರಣ, ಉನ್ನತೀಕರಣವನ್ನು ಸಹ ಮಾಡಲಿದ್ದೇವೆ. ನಗರದ ಯಾವ ರಸ್ತೆಗಳು ಉನ್ನತೀಕರಣ ಆಗಲಿವೆ ಎಂಬುದನ್ನು ನಾವು ಮುಂದಿನ ದಿನದಲ್ಲಿ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಲಿದ್ದೇವೆ ಎಂದಿದ್ದಾರೆ.
300 ಕಿ.ಮೀ ಸ್ಟ್ರೋಮ್ ವಾಟರ್ ಡ್ರೈನ್ ನ ನಿರ್ಮಾಣದ ಯೋಜನೆಯನ್ನೂ ಸಹ ಡಿಕೆಶಿ ಘೋಷಣೆ ಮಾಡಿದ್ದಾರೆ. ಆದರೆ ಆ ಯೋಜನೆಯ ಅಂದಾಜು ವೆಚ್ಚದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ನಗರದಲ್ಲಿ ಈಗಾಗಲೇ 829 ಕಿ.ಮೀಗಳ ಸ್ಟ್ರೋಮ್ ವಾಟರ್ ಡ್ರೈನ್ ನೆಟ್ ವರ್ಕ್ ಇದೆ.
Vladimir Putin: ರಷ್ಯಾ ಅಧ್ಯಕ್ಷ ಪುತಿನ್ ವಿರುದ್ಧ ಅಂತರಾಷ್ಟ್ರೀಯ ಅರೆಸ್ಟ್ ವಾರೆಂಟ್, ಬಂಧಿಸುವ ಧೈರ್ಯ ಯಾರಿಗಿದೆ?
ಈ ಹಿಂದೆ ಬಿಬಿಎಂಪಿ ಕೆ100 ಪ್ರಾಜೆಕ್ಟ್ ಅನ್ನು ಘೋಷಣೆ ಮಾಡಿತ್ತು, ಕೋರಮಂಗಲ ರಾಜಕಾಲುವೆಯಿಂದ ಬೆಳ್ಳಂದೂರು ಕೆರೆವರೆಗಿನ ರಾಜಕಾಲುವೆ ಮಾರ್ಗವನ್ನು ಉನ್ನತೀಕರಿಸುವ ಯೋಜನೆ ಇದಾಗಿತ್ತು. ಆದರೆ ಇದು ಪೂರ್ಣವಾಗಿಲ್ಲ, ಇದರ ನಡುವೆ ಈಗ 300 ಕಿ.ಮೀಗಳ ವಾಟರ್ ಡ್ರೈನ್ ಯೋಜನೆ ಘೋಷಣೆ ಮಾಡಿದೆ.