Food Safety: ಶುಂಠಿ-ಬೆಳ್ಳುಳ್ಳಿ‌ ಪೇಸ್ಟ್’ನಲ್ಲಿ‌ ಅಪಾಯಕಾರಿ ರಾಸಾಯನಿಕ ಪತ್ತೆ, 960 ಕೆಜಿ ಸೀಜ್

0
100
Food Safety

Food Safety

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇಲ್ಲದೆ ಮಸಾಲೆಯುಕ್ತ ಯಾವ ಅಡುಗೆಯೂ ಪೂರ್ಣ ಆಗುವುದೇ ಇಲ್ಲ. ಬಹುತೇಕ ಮಾಂಸದ ಅಡುಗೆಗಳಿಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕೇ ಬೇಕು. ಆದರೆ ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್’ನಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದ್ದು, ಹೈದರಾಬಾದ್ ಬಳಿಯ ಕಾರ್ಖಾನೆಯೊಂದರಿಂದ ಬರೋಬ್ಬರಿ 920 ಕೆಜಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆಹಾರ ಇಲಾಖೆ ಸಿಬ್ಬಂದಿ, ಸಿಖಂಧರಾಬಾದ್ ಪೊಲೀಸರ ಸಹಾಯದಿಂದ ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಮ್ಯಾಜಿಕ್ ಜಿಂಜರ್ ಗಾರ್ಲಿಕ್ ಪೇಸ್ಟ್’ ಕಾರ್ಖಾನೆ ಮೇಲೆ ದಾಳಿ ನಡೆಸಿ ಅಪಾಯಕಾರಿ ರಾಸಾಯನಿಕ ಬೆರೆತ ಬರೋಬ್ಬರಿ 920 ಕೆಜಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ವಶ ಪಡಿಸಿಕೊಂಡಿದ್ದಲ್ಲದೆ, ಕಾರ್ಖಾನೆಗೆ ಬೀಗ ಜಡಿದಿದ್ದಾರೆ. ಕಾರ್ಖಾನೆ ಮಾಲೀಕರ ಮೇಲೆ ದೂರು ಸಹ ದಾಖಲಾಗಿದೆ.

ತೆಲಂಗಾಣ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ಮ್ಯಾಜಿಕ್ ಜಿಂಜರ್ ಗಾರ್ಲಿಕ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕಾರ್ಖಾನೆಯಲ್ಲಿ ಸಾಕಷ್ಟು ನಿಯಮಗಳ ಉಲ್ಲಂಘನೆ ಆಗಿದ್ದು, ಎಸ್’ಎಸ್’ಎಸ್ಐ ನಿಯಮಗಳನ್ನು ಗಾಳಿಗೆ ತೂರಿ ಈ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿತ್ತು ಎಂದಿದೆ. ಆಹಾರ ಉತ್ಪನ್ನವನ್ನು ತಯಾರು ಮಾಡುವಲ್ಲಿ ಹಲವು ನಿಯಮಗಳನ್ನು ಮುರಿದಿರುವ ಜೊತೆಗೆ, ಅದರ ಪ್ಯಾಕಿಂಗ್’ನಲ್ಲಿಯೂ ಸಹ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೆ, ಅಗತ್ಯ ಮಾಹಿತಿಗಳನ್ನು ಪ್ರಿಂಟ್ ಸಹ ಮಾಡಿರಲಿಲ್ಲ ಎಂದು ಆಹಾರ ಸುರಕ್ಷತಾ ಇಲಾಖೆ ಹೇಳಿದೆ.

Jayanagar: 27 ಕೆಜಿ ಗಾಂಜಾ ಬೆಳೆದ ಬೆಂಗಳೂರಿನ ವ್ಯಕ್ತಿಯ ವಾದ ಕೇಳಿ ಜಡ್ಜ್ ಕಂಗಾಲು

ತಯಾರಿಸಿದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಅನೈರ್ಮಲ್ಯಕರ ರೀತಿಯಲ್ಲಿ ಶೇಖರಿಸಿ ಇಡಲಾಗಿತ್ತು, ಕೆಲವು ಅಪಾಯಕಾರಿ ರಾಸಯನಿಕಗಳು, ಸೋಪು ನೊರೆಯ ನಡುವೆ ಪ್ಯಾಕಿಂಗ್’ಗೆ ಸಿದ್ಧವಾದ ಜಿಂಜರ್-ಗಾರ್ಲಿಕ್ ಪೇಸ್ಟ್ ಅನ್ನು ಇಡಲಾಗಿತ್ತು ಎಂದು ರೇಡ್ ಮಾಡಿದ ಅಧಿಕಾರಿಗಳು ಹೇಳಿದ್ದಾರೆ. ಕಾರ್ಖಾನೆಯಲ್ಲಿ‌ ವಶಪಡಿಸಿಕೊಂಡಿರುವ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಲ್ಯಾಬ್’ಗೆ ಕಳಿಸಲಾಗಿದ್ದು, ಯಾವ ರಾಸಾಯನಿಕಗಳನ್ನು ಬಳಸಲಾಗಿದೆ ಎಂಬುದು ವರದಿ ಬಂದ ಬಳಿಕ ತಿಳಿಯಲಿದೆ.

LEAVE A REPLY

Please enter your comment!
Please enter your name here