Paetongtarn Shinawatra
ನೋಡಲು ಚೆಂದ ಕಾಣುವ ಬಟ್ಟೆಗಳನ್ನು ಧರಿಸಿ, ಫೋಟೊಕ್ಕೆ ಫೋಸು ನೀಡುತ್ತಿರುವ ಈ ಚೆಲುವೆ ಯಾವುದೋ ಸಿನಿಮಾ ನಟಿಯೋ, ಇನ್ಸ್ಟಾಗ್ರಾಂ ಮಾಡೆಲ್ ಅಥವಾ ಇನ್ಫ್ಲ್ಯುಯೆನ್ಸರ್ ಅಲ್ಲ ಬದಲಿಗೆ ಈಕೆ ಕೋಟ್ಯಂತರ ಜನಸಂಖ್ಯೆ ಇರುವ ಏಷ್ಯಾದ ಪ್ರಮುಖ ದೇಶವೊಂದರ ಪ್ರಧಾನ ಮಂತ್ರಿ. ಅದೂ ಆ ದೇಶದ ಅತ್ಯಂತ ಕಿರಿಯ ಮತ್ತು ಜನಪ್ರಿಯ ಪ್ರಧಾನ ಮಂತ್ರಿ.
ಬಹುತೇಕ ಭಾರತೀಯರ ಮೆಚ್ಚಿನ ಪ್ರವಾಸಿ ದೇಶವಾಗಿರುವ ಥಾಯ್ಲೆಂಡ್ನ ಅತ್ಯಂತ ಕಿರಿಯ ಪ್ರಧಾನಿ ಈಕೆ. ಈ ಚೆಲುವೆಯ ಹೆಸರು ಪೆಟೊಂಗ್ಟಾರ್ನ್ ಶಿನಾವಾಟ್ರ. ಈ ಹಿಂದೆ ಪದಚ್ಯುತಗೊಂಡ ಮಾಜಿ ಪ್ರಧಾನ ಮಂತ್ರಿ ತಾಕ್ಸಿನ್ ಶಿನಾವಾಟ್ರ ಅವರ ಪುತ್ರಿ ಈಕೆ. ಆಗಸ್ಟ್ 18 ರಂದು ಪೆಟೊಂಗ್ಟಾರ್ನ್ ಶಿನಾವಾಟ್ರ ಥಾಯ್ಲೆಂಡ್ನ ನೂತನ ಪ್ರಧಾನಿಯಾಗಿ ದೇಶದ ಸಂಸತ್ತು ಆಯ್ಕೆ ಮಾಡಿದೆ. ಈ ಹಿಂದಿನ ಪ್ರಧಾನಿ ಅಂದರೆ ಪೆಟೊಂಗ್ಟಾರ್ನ್ ಶಿನಾವಾಟ್ರ ತಂದೆಯ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದು ಉಚ್ಛ ನ್ಯಾಯಾಲಯವು ಅವರನ್ನು ದೋಷಿ ಎಂದು ಪರಿಗಣಿಸಿದ ಕಾರಣ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಥಾಯ್ಲೆಂಡ್ ಸಂಸತ್ತಿನ ಮುಕ್ಕಾಲು ಮತಗಳನ್ನು ಪಡೆದುಕೊಂಡು ಪೆಟೊಂಗ್ಟಾರ್ನ್ ಶಿನಾವಾಟ್ರ ಪ್ರಧಾನಿ ಆಗಿದ್ದಾರೆ. ಥಾಯ್ಲೆಂಡ್ನ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ದೇಶದ ಎರಡನೇ ಮಹಿಳಾ ಪ್ರಧಾನಿ ಹಾಗೂ ಶಿನಾವಾಟ್ರ ಕುಟುಂಬದ ಮೂರನೇ ಪ್ರಧಾನಿ ಇವರಾಗಿದ್ದಾರೆ.
ಪೆಟೊಂಗ್ಟಾರ್ನ್ ಶಿನಾವಾಟ್ರ, ಚುನಾವಣೆ ಗೆದ್ದು ಸಂಸದೆಯಾಗಿದ್ದರಾದರೂ ಪ್ರಧಾನಿ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. 37 ವಯಸ್ಸಿನ ಪೆಟೊಂಗ್ಟಾರ್ನ್ ಶಿನಾವಾಟ್ರ, 30ರ ಆಸುಪಾಸಿನ ಮಹಿಳೆಯರಂತೆ ತಮ್ಮ ಪಾಡಿಗೆ ತಾವಿದ್ದವರು. ಇನ್ಸ್ಟಾಗ್ರಾಂನಲ್ಲಿ ಸುಂದರ ಫೋಟೊಗಳನ್ನು ಅಪ್ಲೋಡ್ ಮಾಡುತ್ತಾ, ಪ್ರವಾಸಗಳಿಗೆ ಹೋಗುತ್ತಾ ತಮ್ಮಿಷ್ಟದವರ ಜೊತೆಗೆ, ಕುಟುಂಬದವರ ಜೊತೆಗೆ ರೀಲ್ಸ್ ಮಾಡುತ್ತಾ ಆರಾಮವಾಗಿದ್ದರು. ಅಂದಹಾಗೆ ಅವರ ಇನ್ಸ್ಟಾಗ್ರಾಂ ಐಡಿ ಸಹ ಅವರ ಅಧಿಕೃತ ಹೆಸರಲ್ಲಿ ಅಲ್ಲ ಬದಲಿಗೆ ಅವರ ಅಡ್ಡ ಹೆಸರಿನ ಮೇಲಿದೆ.
Bharat Bandh: ನಾಳೆ ಭಾರತ ಬಂದ್: ಕರೆ ನೀಡಿದ್ದಯ ಯಾರು? ಏನಿರುತ್ತೆ? ಏನಿರಲ್ಲ?
ಪೆಟೊಂಗ್ಟಾರ್ನ್ ಶಿನಾವಾಟ್ರ, ಪ್ರಧಾನಿ ಆಗಿ ಆಯ್ಕೆ ಆದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಲ್ಲದೆ, ಒಟ್ಟಿಗೆ ಕೆಲಸ ಮಾಡೋಣವೆಂದು ಸಹ ಹೇಳಿದ್ದಾರೆ. ನರೇಂದ್ರ ಮೋದಿ ಅವರ ಸಂದೇಶಕ್ಕೆ ಪೆಟೊಂಗ್ಟಾರ್ನ್ ಶಿನಾವಾಟ್ರ ಪ್ರತಿಕ್ರಿಯೆ ನೀಡಿದ್ದಾರೆ.