Beer: ಕರ್ನಾಟಕಕ್ಕೆ ಕಾಲಿಟ್ಟ ಮತ್ತೊಂದು ಬಿಯರ್ ಕಂಪೆನಿ, ಬೆಲೆ ಎಷ್ಟು?

0
114

Beer

ಕರ್ನಾಟಕದ್ದೇ ಆದ ಕಿಂಗ್ ಫಿಶರ್ ಬಿಯರ್ ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತದೆ. ದೇಶದ ಬಿಯರ್ ಕ್ಯಾಪಿಟಲ್ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ವಿಶ್ವದ ಹಲವು ಅತ್ಯುತ್ತಮ ಬಿಯರ್​ಗಳು ಲಭ್ಯವಿವೆ. ಈಗಾಗಲೇ ಕರ್ನಾಟಕದ ಬಿಯರ್ ಮಾರುಕಟ್ಟೆ ಕ್ರೌಡೆಡ್ ಆಗಿದೆ. ಕಡಿಮೆ ಬೆಲೆಯಿಂದ ಆರಂಭಿಸಿ ದುಬಾರಿ ಬೆಲೆಯ ಸೆಗ್ಮೆಂಟ್ ವರೆಗೆ ಹಲವು ವಿಭಾಗಗಳಲ್ಲಿ ಬಿಯರ್​ಗಳು ಲಭ್ಯವಿದೆ. ಇದರ ನಡುವೆ ಇದೀಗ ಮತ್ತೊಂದು ಹೊಸ ಬಿಯರ್ ಕಂಪೆನಿ ಕರ್ನಾಟಕಕ್ಕೆ ಕಾಲಿಟ್ಟಿದೆ.

ಎಸ್​ಓಎಂ ಬ್ರೀವರಿಸ್ ಅವರು ‘ವೂಡ್​ಪೆಕರ್’ ಹೆಸರಿನ ಬಿಯರ್ ಅನ್ನು ಕರ್ನಾಟಕ ಮಾರುಕಟ್ಟೆಗೆ ಪರಿಚಯಿಸಿದೆ. ಸರ್ಕಾರದೊಂದಿಗೆ ಪರವಾನಗಿ ಪಡೆದುಕೊಂಡಿದ್ದು ಕರ್ನಾಟಕದಲ್ಲಿ ಎರಡು ಬಿಯರ್​ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಜನಜನಿತವಾಗಿರುವ ಎರಡು ಮಾದರಿಗಳಾದ ಪ್ರೀಮಿಯಮ್ ಹಾಗೂ ಸ್ಟ್ರಾಂಗ್ ಮಾದರಿಗಳಲ್ಲಿ ಬಿಯರ್ ಬಿಡುಗಡೆ ಮಾಡಲಾಗಿದೆ. ವೂಡ್​ಪೆಕರ್ ಗ್ಲೈಡ್ ಪ್ರೀಮಿಯಂ ಬಿಯರ್ ಆಗಿದ್ದು, ವೂಡ್​ಪೆಕರ್ ಕ್ರೆಸ್ಟ್ ಸ್ಟ್ರಾಂಗ್ ಬಿಯರ್ ಆಗಿದೆ. ಬಿಯರಿನ 650 ಎಂಎಲ್ ಬಾಟಲಿಗೆ 240 ರೂಪಾಯಿ, ಕ್ಯಾನ್​ಗೆ 180 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

650 ಎಂಎಲ್, 330 ಎಂಎಲ್ ಬಾಟಲಿ, 500 ಎಂಎಲ್, 300 ಎಂಎಲ್​ ಕ್ಯಾನ್​ಗಳ ಜೊತೆಗೆ 50 ಲೀಟರ್ ಹಾಗೂ 30 ಲೀಟರ್​ನ ಡ್ರಾಟ್​ ಕ್ಯಾನ್​ಗಳು ಸಹ ಲಭ್ಯವಿದೆ. ವೂಡ್​ಪೆಕರ್​ನ ಸಿಇಓ ಮಾತನಾಡಿದ್ದು, ‘ವೂಡ್​ಪೆಕರ್ ಭಾರತದ ಮೊಟ್ಟ ಮೊದಲ ಎರಡು ಮಾಲ್ಟ್ ಬಿಯರ್ ಆಗಿದೆ. ಇದನ್ನು ಕ್ರಾಫ್ಟ್ ಮಾಡಲು ಜರ್ಮನ್ ಹಾಪ್, ಭಾರತದ ಕಾಳುಗಳು, ಡಬಲ್ ಬಾರ್ಲಿಗಳನ್ನು ಬಳಸಲಾಗುತ್ತದೆ. 30 ದಿನಗಳ ಒಳಗಾಗಿ ಬಿಯರ್ ಅನ್ನು ಬ್ರೀವ್ ಮಾಡಿ ಒಂದು ಬ್ಯಾಚ್​ನ ಬಿಯರ್ ತಿಂಗಳಿಗೆ ಒಂದು ಬಾರಿ ಮಾತ್ರ ಮಾಡಲಾಗುತ್ತದೆ. ಇದು ಬಿಯರ್ ಗುಣಮಟ್ಟದಿಂದ ಕೂಡಿರಲು ಸಹಾಯ ಮಾಡುತ್ತದೆ’ ಎಂದಿದ್ದಾರೆ.

Beer: 600 ಕೋಟಿ ವೆಚ್ಚದಲ್ಲಿ‌ ನಿರ್ಮಾಣ ಆಗಲಿದೆ ಭಾರತದ ಅತಿ ದೊಡ್ಡ ಬಿಯರ್ ಫ್ಯಾಕ್ಟರಿ

2025ರ ವೇಳೆಗೆ ಈ ಕಂಪೆನಿಯು 1500 ಕೋಟಿ ವ್ಯವಹಾರ ಮಾಡುವ ನಿರೀಕ್ಷೆಯಲ್ಲಿದೆ. ಅಲ್ಲದೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಬಿಯರ್ ನಿರ್ಮಾಣ ಘಟಕ ಸ್ಥಾಪನೆ ಮಾಡುವ ಉದ್ದೇಶವನ್ನು ಸಹ ಹೊಂದಿದೆ. ಅಂದಹಾಗೆ ಇದರ ಹೆಸರು ನೋಡಿದರೆ ಕರ್ನಾಟಕದ ಕಿಂಗ್​ಫಿಶರ್​ಗೆ ಠಕ್ಕರ್ ಕೊಡಲೆಂದೇ ಕರ್ನಾಟಕಕ್ಕೆ ಬರುತ್ತಿರುವಂತಿದೆ. ಆದರೆ ಕಿಂಗ್ ಫಿಶರ್ ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಟಾಪ್ ಸೆಲ್ಲಿಂಗ್ ಬಿಯರ್​ಗಳಲ್ಲಿ ಒಂದಾಗಿದೆ.

LEAVE A REPLY

Please enter your comment!
Please enter your name here