Beer
ಕರ್ನಾಟಕದ್ದೇ ಆದ ಕಿಂಗ್ ಫಿಶರ್ ಬಿಯರ್ ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತದೆ. ದೇಶದ ಬಿಯರ್ ಕ್ಯಾಪಿಟಲ್ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ವಿಶ್ವದ ಹಲವು ಅತ್ಯುತ್ತಮ ಬಿಯರ್ಗಳು ಲಭ್ಯವಿವೆ. ಈಗಾಗಲೇ ಕರ್ನಾಟಕದ ಬಿಯರ್ ಮಾರುಕಟ್ಟೆ ಕ್ರೌಡೆಡ್ ಆಗಿದೆ. ಕಡಿಮೆ ಬೆಲೆಯಿಂದ ಆರಂಭಿಸಿ ದುಬಾರಿ ಬೆಲೆಯ ಸೆಗ್ಮೆಂಟ್ ವರೆಗೆ ಹಲವು ವಿಭಾಗಗಳಲ್ಲಿ ಬಿಯರ್ಗಳು ಲಭ್ಯವಿದೆ. ಇದರ ನಡುವೆ ಇದೀಗ ಮತ್ತೊಂದು ಹೊಸ ಬಿಯರ್ ಕಂಪೆನಿ ಕರ್ನಾಟಕಕ್ಕೆ ಕಾಲಿಟ್ಟಿದೆ.
ಎಸ್ಓಎಂ ಬ್ರೀವರಿಸ್ ಅವರು ‘ವೂಡ್ಪೆಕರ್’ ಹೆಸರಿನ ಬಿಯರ್ ಅನ್ನು ಕರ್ನಾಟಕ ಮಾರುಕಟ್ಟೆಗೆ ಪರಿಚಯಿಸಿದೆ. ಸರ್ಕಾರದೊಂದಿಗೆ ಪರವಾನಗಿ ಪಡೆದುಕೊಂಡಿದ್ದು ಕರ್ನಾಟಕದಲ್ಲಿ ಎರಡು ಬಿಯರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಜನಜನಿತವಾಗಿರುವ ಎರಡು ಮಾದರಿಗಳಾದ ಪ್ರೀಮಿಯಮ್ ಹಾಗೂ ಸ್ಟ್ರಾಂಗ್ ಮಾದರಿಗಳಲ್ಲಿ ಬಿಯರ್ ಬಿಡುಗಡೆ ಮಾಡಲಾಗಿದೆ. ವೂಡ್ಪೆಕರ್ ಗ್ಲೈಡ್ ಪ್ರೀಮಿಯಂ ಬಿಯರ್ ಆಗಿದ್ದು, ವೂಡ್ಪೆಕರ್ ಕ್ರೆಸ್ಟ್ ಸ್ಟ್ರಾಂಗ್ ಬಿಯರ್ ಆಗಿದೆ. ಬಿಯರಿನ 650 ಎಂಎಲ್ ಬಾಟಲಿಗೆ 240 ರೂಪಾಯಿ, ಕ್ಯಾನ್ಗೆ 180 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
650 ಎಂಎಲ್, 330 ಎಂಎಲ್ ಬಾಟಲಿ, 500 ಎಂಎಲ್, 300 ಎಂಎಲ್ ಕ್ಯಾನ್ಗಳ ಜೊತೆಗೆ 50 ಲೀಟರ್ ಹಾಗೂ 30 ಲೀಟರ್ನ ಡ್ರಾಟ್ ಕ್ಯಾನ್ಗಳು ಸಹ ಲಭ್ಯವಿದೆ. ವೂಡ್ಪೆಕರ್ನ ಸಿಇಓ ಮಾತನಾಡಿದ್ದು, ‘ವೂಡ್ಪೆಕರ್ ಭಾರತದ ಮೊಟ್ಟ ಮೊದಲ ಎರಡು ಮಾಲ್ಟ್ ಬಿಯರ್ ಆಗಿದೆ. ಇದನ್ನು ಕ್ರಾಫ್ಟ್ ಮಾಡಲು ಜರ್ಮನ್ ಹಾಪ್, ಭಾರತದ ಕಾಳುಗಳು, ಡಬಲ್ ಬಾರ್ಲಿಗಳನ್ನು ಬಳಸಲಾಗುತ್ತದೆ. 30 ದಿನಗಳ ಒಳಗಾಗಿ ಬಿಯರ್ ಅನ್ನು ಬ್ರೀವ್ ಮಾಡಿ ಒಂದು ಬ್ಯಾಚ್ನ ಬಿಯರ್ ತಿಂಗಳಿಗೆ ಒಂದು ಬಾರಿ ಮಾತ್ರ ಮಾಡಲಾಗುತ್ತದೆ. ಇದು ಬಿಯರ್ ಗುಣಮಟ್ಟದಿಂದ ಕೂಡಿರಲು ಸಹಾಯ ಮಾಡುತ್ತದೆ’ ಎಂದಿದ್ದಾರೆ.
Beer: 600 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ ಭಾರತದ ಅತಿ ದೊಡ್ಡ ಬಿಯರ್ ಫ್ಯಾಕ್ಟರಿ
2025ರ ವೇಳೆಗೆ ಈ ಕಂಪೆನಿಯು 1500 ಕೋಟಿ ವ್ಯವಹಾರ ಮಾಡುವ ನಿರೀಕ್ಷೆಯಲ್ಲಿದೆ. ಅಲ್ಲದೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಬಿಯರ್ ನಿರ್ಮಾಣ ಘಟಕ ಸ್ಥಾಪನೆ ಮಾಡುವ ಉದ್ದೇಶವನ್ನು ಸಹ ಹೊಂದಿದೆ. ಅಂದಹಾಗೆ ಇದರ ಹೆಸರು ನೋಡಿದರೆ ಕರ್ನಾಟಕದ ಕಿಂಗ್ಫಿಶರ್ಗೆ ಠಕ್ಕರ್ ಕೊಡಲೆಂದೇ ಕರ್ನಾಟಕಕ್ಕೆ ಬರುತ್ತಿರುವಂತಿದೆ. ಆದರೆ ಕಿಂಗ್ ಫಿಶರ್ ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಟಾಪ್ ಸೆಲ್ಲಿಂಗ್ ಬಿಯರ್ಗಳಲ್ಲಿ ಒಂದಾಗಿದೆ.