Site icon Samastha News

Divorce: ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿ, ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?

Divorce

Divorce

ವಿಚ್ಚೇದನಗಳು ಈಗ ಸಾಮಾನ್ಯ ಆಗಿವೆ. ಕೆಲವು ವಿಚ್ಚೇದನಗಳಂತೂ ಕೇವಲ ಜೀವನಾಂಶ ಹಣಕ್ಕಾಗಿಯೇ ಆಗುತ್ತಿವೆ. ಜೀವನಾಂಶ ಮೊತ್ತ ಸಿಗುತ್ತದೆಂಬ ಕಾರಣಕ್ಕೆ ವಿಚ್ಚೇದನ ತೆಗೆದುಕೊಳ್ಳುವ ಮಹಿಳೆಯರೂ ಇದ್ದಾರೆ. ಆದರೆ ಅಂಥಹುದೇ ಒಬ್ಬ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಸರಿಯಾಗಿ‌ ಬುದ್ಧಿ ಕಲಿಸಿದೆ.

ಪತಿಯಿಂದ ವಿಚ್ಚೇದನ ಬಯಸಿದ್ದ ಯುವತಿಯೊಬ್ಬಾಕೆ ತನಗೆ ತನ್ನ ವಿಚ್ಚೇದಿತ ಪತಿಯಿಂದ ತಿಂಗಳಿಗೆ 6.16 ಲಕ್ಷ ಜೀವನಾಂಶ ಬೇಕೆಂದು‌ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು‌. ಆದರೆ ಅರ್ಜಿಯ ವಿಚಾರಣೆ ನಡೆಸಿದ ಮಹಿಳಾ ನ್ಯಾಯಮೂರ್ತಿಯೊಬ್ಬರು ಅರ್ಜಿದಾರ ಯುವತಿಗೆ ಸರಿಯಾಗಿ ತಪರಾಕಿ ಹಾಕಿದ್ದಾರೆ. ‘ಇಷ್ಟು ಹಣ ಬೇಕಿದ್ದರೆ ಆಕೆಗೆ ದುಡಿಯಲು ಹೇಳಿ’ ಎಂದಿದ್ದಾರೆ.

ಅರ್ಜಿಯಲ್ಲಿ ತಮ್ಮ ತಿಂಗಳ ಖರ್ಚುಗಳ ಬಗ್ಗೆ ಆ‌ ಮಹಿಳೆ ಲೆಕ್ಕ ಕೊಟ್ಟಿದ್ದು, ಪ್ರತಿ ತಿಂಗಳು ವಾಚು, ಶೂ, ಚಪ್ಪಲಿ ಖರೀದಿಸಲು 50 ಸಾವಿರ, ತಿಂಗಳ ಊಟಕ್ಕೆ 60 ಸಾವಿರ, ಇತರೆ ಖರ್ಚುಗಳಿಗೆ 50 ಸಾವಿರ ಹಾಗೂ ಆಕೆಯ ಮೊಣಕಾಲು ನೋವಿನ ಚಿಕಿತ್ಸೆಗೆ ಪ್ರತಿ ತಿಂಗಳು 5 ಲಕ್ಷ ಬೇಕಾಗಿದೆ ಎಂದು ಅರ್ಜಿಯಲ್ಲಿ ನಮೂದಿಸಿದ್ದರು.

Paetongtarn Shinawatra: ಈ ಸುಂದರ ಯುವತಿ ಕೋಟ್ಯಂತರ ಜನಸಂಖ್ಯೆಯ ದೇಶವೊಂದರ ಪ್ರಧಾನಿ

ಮಹಿಳೆಯ ಅರ್ಜಿ ಕಂಡೊಡನೆ ಗರಂ ಆದ ಹೈಕೋರ್ಟ್ ನ್ಯಾಯಾಧೀಶೆ, ಆಕೆಯ ಪರವಾಗಿ ವಕಾಲತ್ತು ವಹಿಸಿದ್ದ ವಕೀಲರಿಗೆ ತಪರಾಕಿ ಹಾಕ್ಕಿದ್ದಲ್ಲದೆ, ಮಗು ಇಲ್ಲ, ಯಾರನ್ನೂ ನೋಡಿ ಕೊಳ್ಳಬೇಕಿಲ್ಲ ಆದರೂ ಇಷ್ಟು ಹಣ ಕೇಳುತ್ತಿರುವುದು ಸರಿಯಲ್ಲ. ನೀವು ಆಕೆಗೆ ಅರ್ಥ ಮಾಡಿಸಿ, ಇಷ್ಟೋಂದು ಹಣ ಬೇಕೆಂದರೆ ಆಕೆಗೆ ಕೆಲಸಕ್ಕೆ ಹೋಗಿ ದುಡಿಯಲು ಹೇಳಿ ಎಂದು ಖಾರವಾಗಿ ನುಡಿದಿದ್ದಾರೆ. ನ್ಯಾಯಾಧೀಶೆ, ಮಹಿಳೆಯ ಅರ್ಜಿಯನ್ನು ತಳ್ಳಿ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ‌.

Exit mobile version