Young Woman
ಯೂಟ್ಯೂಬ್, ಇನ್’ಸ್ಟಾಗ್ರಾಂ ವಿಡಿಯೋ, ರೀಲ್ಸ್ ಗಳನ್ನು ಮಾಡಲು, ಅದರಿಂದ ಲೈಕ್ ಪಡೆದು ವೈರಲ್ ಆಗಲು ಯುವಕರು ಏನು ಬೇಕಾದರೂ ಮಾಡುವ ಹಂತ ತಲುಪಿದ್ದಾರೆ. ಯೂಟ್ಯೂಬ್ ವಿಡಿಯೋ ಮಾಡಲೆಂದು ಯುವತಿಯೊಬ್ಬಾಕೆ ಅಶ್ಲೀಲ ಬಟ್ಟೆ ಧರಿಸಿ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಓಡಾಡಿದ್ದಾಳೆ. ಆಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜೊತಗೆ ಆಕೆಯ ವಿರುದ್ಧ ದೂರು ಸಹ ದಾಖಲಾಗಿದೆ.
ಮಧ್ಯ ಪ್ರದೇಶದ ಇಂಧೋರ್ ನಲ್ಲಿ ಯುವತಿಯೊಬ್ಬಾಕೆ ಅಶ್ಲೀಲ ಉಡುಗೆ ತೊಟ್ಟು ಇಂಧೋರ್ ನಗರದ ಬ್ಯುಸಿ ರಸ್ತೆಯಾದ 56 ಮಾರ್ಕೆಟ್ ರಸ್ತೆಯಲ್ಲಿ ರಾತ್ರಿ ಸಮಯ ಓಡಾಡಿದ್ದಾಳೆ. ರಸ್ತೆಯಲ್ಲಿ ಹೋಗುವವರೆಲ್ಲ ಆಕೆಯನ್ನು ನೋಡುತ್ತಾ ನಂತಿದ್ದಾರೆ. ಕೆಲ ಯುವಕರು ಆ ಯುವತಿಯ ‘ಅವತಾರ’ ವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಸಹ ಮಾಡಿದ್ದಾರೆ. ಇದೀಗ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಯುವತಿ ವಿರುದ್ಧ ದೂರು ಸಹ ದಾಖಲಾಗಿದೆ.
ಒಂದು ಬಾರಿ ಮಾತ್ರವಲ್ಲದೆ ಹಲವು ಬಾರಿ ಈ ಯುವತಿ ಹೀಗೆ ಅರೆಬೆತ್ತಲಾಗಿ ರಸ್ತೆಯಲ್ಲಿ ಓಡಾಡಿದ್ದಾಳೆ. ಆಕೆ ಓಡಾಡುವಾಗ ಆಕೆಯದ್ದೇ ತಂಡದ ಇನ್ನು ಕೆಲವರು ಆಕೆಯನ್ನು ಜನ ಹೇಗೆ ನೋಡುತ್ತಾರೆ ಎಂಬುದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ‘ಪಬ್ಲಿಕ್ ರಿಯಾಕ್ಷನ್ ವಿಡಿಯೋ’ ಹೆಸರಿನಲ್ಲಿ ಯೂಟ್ಯೂಬ್, ಇನ್’ಸ್ಟಾಗ್ರಾಂ ಇನ್ನಿತರೆ ಕಡೆ ಅಪ್’ಲೋಡ್ ಮಾಡಿದ್ದಾರೆ.
ಆದರೆ ಇತ್ತೀಚೆಗೆ ಈ ಯುವತಿ ಹೀಗೆ ಅರೆಬೆತ್ತಲಾಗಿ ಓಡಾಡುವಾಗ ಕೆಲವು ಜವಾಬ್ದಾರಿಯುತ ನಾಗರೀಕರು ಆಕೆಯನ್ನು ಅಡ್ಡಗಟ್ಟಿದ್ದು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಪ್ರಶ್ನೆಗಳಿಗೆ ಉತ್ತರ ಕೊಡದೆ ಮೌನವಾದ ಯುವತಿ, ನನ್ನನ್ನು ಬೈದರೆ, ನನ್ನ ವಿರುದ್ಧ ದೂರು ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.
Success Story: ಪೇಪರ್ ಹಾಕುತ್ತಿದ್ದ ಈ ವ್ಯಕ್ತಿ ಈಗ ದುಬೈನ ನಂಬರ್ 1 ಶ್ರೀಮಂತರ ಭಾರತೀಯ
ಯುವತಿಯ ವಿಡಿಯೋ ವೈರಲ್ ಆಗಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ಬುದ್ಧಿ ಹೇಳಿದ್ದಾರೆ. ಕೊನೆಗೆ ಯುವತಿ ತನ್ನ ಕೃತ್ಯಕ್ಕೆ ಕ್ಷಮೆ ಕೇಳಿದ್ದಾಳೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ‘ಪಬ್ಲಿಕ್ ರಿಯಾಕ್ಷನ್ ವಿಡಿಯೊ’ಗಳು ಜನಪ್ರಿಯವಾಗುತ್ತಿವೆ. ಕೆಲವು ಯುವಕರು ಇದನ್ನು ಮಾಡುತ್ತಿದ್ದರು. ಬಾಡಿ ಬಿಲ್ಡ್ ಮಾಡಿರುವ ಯುವಕರು ತಮ್ಮಗಸೌಷ್ಟವ ಕಾಣುವಂತೆ ಟೈಟ್ ಆದ ಉಡುಗೆ ಧರಿಸಿ ಜನನಿಬಿಡ ಪ್ರದೇಶದಲ್ಲಿ ಹೋಗುವುದು ಅವರನ್ನು ಜನ ಹೇಗೆ ನೋಡುತ್ತಾರೆ, ನೋಡಿ ಹೇಗೆ ಮುಖಭಾವ ಬದಲಿಸುತ್ತಾರೆ ಎಂಬುದನ್ನು ವಿಡಿಯೋ ಮಾಡಿ ‘ಪಬ್ಲಿಕ್ ರಿಯಾಕ್ಷನ್’ ಹೆಸರಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ಅದೇ ರೀತಿ ಮಾಡಲು ಮುಂದಾಗಿ ಈ ಯುವತಿ ಅವಾಂತರಕ್ಕೆ ಸಿಲುಕಿಕೊಂಡಿದ್ದಾಳೆ.