Mobile Network: ಶೀಘ್ರ ಹೆಚ್ಚಾಗಲಿದೆ ನಿಮ್ಮ ಫೋನ್ ಬಿಲ್, ಕಾರಣ ಇಲ್ಲಿದೆ

0
151
Mobile Network

Mobile Network

ಲೋಕಸಭೆ ಚುನಾವಣೆ ಮುಗಿದ ಕೂಡಲೆ ಕೆಲವು ವಸ್ತುಗಳ ಬೆಲೆ ಏರಿಕೆ ಆಗಲಿದೆ. ಪೆಟ್ರೋಲ್ ಅದರಲ್ಲಿ ಪ್ರಮುಖವಾದುದು. ಇನ್ನುಳಿದಂತೆ LPG ಸಿಲಿಂಡರ್, ಅಡುಗೆ ಎಣ್ಣೆ ಬೆಲೆಗಳು ಏರಿಕೆ ಆಗುವುದು ಖಾತ್ರಿ ಎನ್ನಲಾಗತ್ತಿದೆ‌. ಇದರ ಜೊತೆಗೆ ಮೊಬೈಲ್ ಫೋನ್ ಬಿಲ್ ಗಳು ಸಹ ಏರಿಕೆ ಆಗಲಿವೆ. ಅದೂ ಈಗಿರುವ ಬೆಲೆಗಿಂತಲೂ ಸುಮಾರು 25% ಬೆಲೆಗಳು ಏರಿಕೆ ಆಗಲಿವೆ. 100 ರೂಪಾಯಿಗೆ ಇದ್ದ ರೀಚಾರ್ಜ್ ಚುನಾವಣೆ ಫಲಿತಾಂಶದ ಬಳಿಕ 125 ರೂಪಾಯಿ ಆಗಲಿದೆ. 200 ಇದ್ದ ರೀಚಾರ್ಜ್ 250 ಆಗಲಿದೆ.

ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ಜಿಯೋ, ವೊಡಾಫೋನ್ ನವರು ಕಳೆದ ಕೆಲ ತಿಂಗಳಿನಿಂದಲೂ ಬೆಲೆ ಏರಿಕೆಗೆ ಕಾದು ಕುಳಿತಿದ್ದರು‌. ಜೂನ್ ತಿಂಗಳು ಮುಗಿಯುವ ಮುಂಚೆಯೇ ಬೆಲೆ ಏರಿಕೆ ಆಗಲಿದ್ದು, ಟ್ರಾಯ್ (ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ) ಸಹ ಬೆಲೆ ಏರಿಕೆ ಅನುಮೋದನೆ ನೀಡಿದೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ಏರ್ಟೆಲ್ 55% ಬೆಲೆ ಹೆಚ್ಚಿಸಿದರೆ ಜಿಯೋ 38%, ವೊಡಾಫೋನ್ 33% ಬೆಲೆ ಹಚ್ಚಳ ಮಾಡಲಿದೆ. ಈ ಟೆಲಿಕಾಂ ಸಂಸ್ಥೆಗಳು ಟ್ರಾಯ್ ಗೆ ನೀಡಿರುವ ಮಾಹಿತಿಯಂತೆ 2023 ರಲ್ಲಿ ಏರ್ಟೆಲ್ ಒಬ್ಬ ಬಳಕೆದಾರನಿಂದ ವಾರ್ಷಿಕ ಸರಾಸರಿ 208 ರೂಪಾಯಿ ಲಾಭವನ್ನು ಪಡೆಯುತ್ತಿದೆ. ಜಿಯೋ 181 ರೂಪಾಉಲಯಿ ಹಾಗೂ ವೋಡಾಫೋನ್ 145 ರೂಪಾಯಿ ಲಾಭ ಪಡೆಯುತ್ತಿದೆ. ಈಗ ಬೆಲೆ ಹೆಚ್ಚಳದಿಂದ ಪ್ಋಇ ಬಳಕೆದಾರನಿಂದ ಕಂಪೆನಿಗೆ ಸಿಗುವ ಲಾಭದ ಮೊತ್ತ ಹೆಚ್ಚಾಗಲಿದೆ.

ವೇಗವಾಗಿ ಹರಡುತ್ತಿರುವ ಡೆಂಘಿಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ, ಈ ಕ್ರಮಗಳನ್ನು ಅನುಸರಿಸಿ

ಪ್ರಸ್ತುತ ಭಾರತದಲ್ಲಿ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಸಂಸ್ಥೆಗಳು ಪ್ರಮುಖ ನೆಟ್ ವರ್ಕ್ ಪ್ರೊವೈಡರ್ ಗಳಾಗಿವೆ. ವೊಡಾಫೋನ್ ಸಂಸ್ಥೆ ಈಗಾಗಲೆ ನಷ್ಟದಲ್ಲಿದೆಯಾದ್ದರಿಂದ ಈ ಬೆಲೆ ಏರಿಕೆ ಅದಕ್ಕೆ ತುಸು ಅನುಕೂಲ ತರಬಹುದು. ಆದರೆ ಬೆಲೆ ಏರಿಕೆಯಿಂದ ಸಾಮಾನ್ಯ ಗ್ರಾಹಕನ ಜೇಬಿಗೆ ಹೊರೆ ಆಗಲಿದೆ.

LEAVE A REPLY

Please enter your comment!
Please enter your name here