Akkineni Nagarjuna: 65 ವರ್ಷವಾದರೂ ಯಂಗ್ ಆಗಿರುವುದು ಹೇಗೆ? ನಟ ನಾಗಾರ್ಜುನ ಬಿಚ್ಚಿಟ್ಟರು ಆರೋಗ್ಯದ ಗುಟ್ಟು

0
199
Akkineni Nagarjuna

Akkineni Nagarjuna

ತೆಲುಗಿನ ಸ್ಟಾರ್ ನಟ ಬಾಗಾರ್ಜುನಗೆ ಈಗ 65 ವರ್ಷ ವಯಸ್ಸು. ಈಗಲೂ‌ ನೋಡಲು 35 ವರ್ಷ ವಯಸ್ಸಿನ ವ್ಯಕ್ತಿಯಂತೆ ಕಾಣುತ್ತಾರೆ. ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಡ್ಯಾನ್ಸು ಫೈಟ್ ಮಾಡುತ್ತಾರೆ. 65 ವರ್ಷ ವಯಸ್ಸಾಗಿದ್ದರೂ ಸಹ ಸ್ವಲ್ಪವೂ ಹೊಟ್ಟೆ ಬಂದಿಲ್ಲ, ಮುಖದ ಚರ್ಮ ಸುಕ್ಕು ಗಟ್ಟಿಲ್ಲ. ಸುಸ್ತಾಗಿ ಉಸ್ಸಪ್ಪ ಅನ್ನುವುದಿಲ್ಲ. ಕೋಲು ಹಿಡಿದು ನಡೆಯುವುದಿಲ್ಲ. ಇಂದಿಗೂ ಯುವಕರಂತೆ ಕಾಣುತ್ತಾರೆ. ಇದು ಹೇಗೆ ಸಾಧ್ಯ? ಸ್ವತಃ ನಾಗಾರ್ಜುನ ಈ ಬಗ್ಗೆ ಮಾತನಾಡಿದ್ದಾರೆ.

ನಾಗಾರ್ಜುನ ಹೇಳಿರುವಂತೆ ಅವರ ಆರೋಗ್ಯ, ಅಂದದ ಗುಟ್ಟು ಅವರು ಮಾಡುವ ವ್ಯಾಯಾಮ ಮತ್ತು ತಿನ್ನುವ ಆಹಾರ. ನಾಗಾರ್ಜುನ ವಾರದ 5 ಅಥವಾ 6 ದಿನ ತಪ್ಪದೆ ವ್ಯಾಯಾಮ ಮಾಡುತ್ತಾರೆ. ಜಿಮ್ ಗೆ ಹೋಗುತ್ತಾರೆ ಇಲ್ಲವಾದರೆ ವಾಕಿಂಗ್, ಜಾಗಿಂಗ್ ಅಥವಾ ಸ್ವಿಮ್ಮಿಂಗ್ ಮಾಡುತ್ತಾರೆ. ಜಿಮ್ ಜೊತೆಗೆ ಕಾರ್ಡಿಯೋ ಎಕ್ಸರ್ಸೈಸ್ ಆಗಿರುವ ವಾಕಿಂಗ್, ಜಾಗಿಂಗ್ ಮತ್ತು ಸ್ವಿಮ್ಮಿಂಗ್ ಅತ್ಯಂತ ಅವಶ್ಯಕ ಎನ್ನುತ್ತಾರೆ ನಾಗಾರ್ಜುನ.

ವ್ಯಾಯಾಮದ ಜೊತೆಗೆ ಕೆಲ ಆಟಗಳನ್ನು ಸಹ ಆಡುತ್ತಾರಂತೆ ನಾಗಾರ್ಜುನ. ಬ್ಯಾಡ್‌ಮಿಂಟನ್, ಗಾಲ್ಫ್ ಗಳನ್ನು ಆಡಿ ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸುತ್ತಾರಂತೆ. ಕಳೆದ 30 ರಿಂದ 35 ವರ್ಷಗಳಿಂದಲೂ ಅವರು ತಪ್ಪದೆ ವ್ಯಾಯಾಮ ಮಾಡುತ್ತಿದ್ದಾರಂತೆ. ಪ್ರತಿದಿನ 8 ರಿಂದ 9 ಗಂಟೆ ಕೆಲಸ ಸಹ ಮಾಡುವ ನಾಗಾರ್ಜುನ‌, ತಮ್ಮನ್ನು ತಾವು ಯಾವುದಾದರೂ ಒಂದು ಚಟುವಟಿಕೆಯಲ್ಲಿ ಬ್ಯುಸಿಯಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರಂತೆ. ವ್ಯಾಯಾಮದ ಜೊತೆಗೆ ಹೆಚ್ಚು ನೀರು ಕುಡಿಯುವುದು ಮತ್ತು 7 ರಿಂದ 8 ಗಂಟೆ ನಿದ್ದೆ ಮಾಡುವುದು ಸಹ ಬಲು ಮುಖ್ಯ ಎನ್ನುತ್ತಾರೆ ನಾಗಾರ್ಜುನ.

ಇನ್ನು ತಮ್ಮ ಊಟದ ಬಗ್ಗೆ ಮಾತನಾಡಿರುವ ನಾಗಾರ್ಜುನ, ಆರೋಗ್ಯವಾಗಿರಲು ವ್ಯಾಯಾಮಕ್ಕಿಂತಲೂ ಆಹಾರ ಅತ್ಯಂತ ಮುಖ್ಯ. ನಾಗಾರ್ಜುನ ಕರಿದ ಆಹಾರ ತಿನ್ನುವುದು ಬಹಳ ಕಡಿಮೆ. ಅದಕ್ಕಿಂತಲೂ ಮುಖ್ಯವಾಗಿ ನಾಗಾರ್ಜುನ ಒಮ್ಮೆ ಊಟ ಮಾಡಿದರೆ ಮತ್ತೊಮ್ಮೆ ಊಟ ಮಾಡುವುದು 12 ಗಂಟೆ ಆದ ಮೇಲೆ. ಅಂದರೆ ಅವರ ಪ್ರತಿ ಊಟದ ನಡುವೆ 12 ಗಂಟೆ ಅಂತರ ಇರುವಂತೆ ನೋಡಿಕೊಳ್ಳುತ್ತಾರೆ.

Rachita Ram: ರಚಿತಾ ರಾಮ್ ಮೊದಲ ಸಂಭಾವನೆ ಎಷ್ಟು? ಈಗ ಒಂದು ಸಿನಿಮಾಕ್ಕೆ ಪಡೆವ ಹಣ ಎಷ್ಟು?

ಸಾಧ್ಯವಾದಷ್ಟು ಫರ್ಮೆಂಟೆಡ್ ಅಂದರೆ ದೋಸೆ, ಇಡ್ಲಿ, ಹಿಂದಿನ ರಾತ್ರಿ ನೆನಸಿಟ್ಟ ಕ್ಯಾಬೇಜ್, ಬೀಟ್ ರೂಟ್ ಇಂಥಹುದನ್ನು ಅವರು ಹೆಚ್ಚಾಗಿ ತಿನ್ನುತ್ತಾರೆ. ಪ್ರತಿ ಭಾನುವಾರ ಸಿಹಿ, ಚಾಕಲೇಟ್, ಐಸ್ ಕ್ರೀಮ್ ಇತರೆಗಳನ್ನು ನಿಯಮಿತವಾಗಿ ಸೇವಿಸುತ್ತಾರೆ. ಬಲು ಮುಖ್ಯವಾಗಿ ಪ್ರತಿ ದಿನ ರಾತ್ರಿ 7 ಗಂಟೆಗೆ ಊಟ ಮುಗಿಸಿ ಬಿಡುತ್ತಾರೆ. ರಾತ್ರಿ 7 ರ ಬಳಿಕ ಏನನ್ನೂ ತಿನ್ನುವುದಿಲ್ಲ ಅವರು. ಹೀಗಾಗಿ ಈ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ ನಾಗಾರ್ಜುನ.

LEAVE A REPLY

Please enter your comment!
Please enter your name here