Nitish Kumar: ಎಲ್ಲರ ಕಣ್ಣು ನಿತೀಶ್‌ ಕುಮಾರ್‌ ಮೇಲೆ, ಯಾರು ಈ ನಿತೀಶ್‌ ಕುಮಾರ್?‌ ರಾಜಕೀಯ ಹಿನ್ನೆಲೆ ಏನು?

0
157
Nitish Kumar

Nitish Kumar

ಲೋಕಸಭೆ ಚುನಾವಣೆ 2024 ರ ಫಲಿತಾಂಶ ಹೊರಬಿದ್ದಿದೆ. NDA ಗೆ ಸರಳ ಬಹುಮತ ಬಂದಿದೆಯಾದರೂ ಸರ್ಕಾರ ರಚನೆ ತೂಗುಯ್ಯಾಲೆಯಲ್ಲಿಯೇ ಇದೆ. ಮಿತ್ರ ಪಕ್ಷಗಳಾಗಿರುವ ಜೆಡಿಯು ಹಾಗೂ ಟಿಡಿಪಿ ಕೈಕೊಟ್ಟರೆ ಬಿಜೆಪಿ ಬದಲಿಗೆ ಕಾಂಗ್ರೆಸ್‌ ಗೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಹಾಗಾಗಿ ಈಗ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿಶೇಷವಾಗಿ ನಿತೀಶ್‌ ಕುಮಾರ್‌ ಹೆಸರು ತುಸು ಜೋರಾಗಿ ಕೇಳಿ ಬರುತ್ತಿದೆ. ಯಾರು ಈ ನಿತೀಶ್‌ ಕುಮಾರ್?‌ ಇವರ ರಾಜಕೀಯ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.

ನಿತೀಶ್‌ ಕುಮಾರ್‌ ಬಿಹಾರದ ಹಾಲಿ ಮುಖ್ಯಮಂತ್ರಿ. ಜೆಡಿಯು ಪಕ್ಷದ ನಾಯಕ. ಜೆಪಿ ಚಳುವಳಿ ಮೂಲಕ ರಾಜಕೀಯಕ್ಕೆ ಧುಮುಕಿದ ನಿತೀಶ್‌ ಕುಮಾರ್‌ ಆರಂಭದಲ್ಲಿ ಬಿಹಾರದ ನಾಯಕ ಲಾಲೂ ಪ್ರಸಾದ್‌ ಯಾದವ್‌ ಅವರೊಟ್ಟಿಗೆ ಜೊತೆಯಾಗಿ ರಾಜಕೀಯ ಮಾಡಿದವರು. ಲಾಲೂ ಪ್ರಸಾದ್ ಯಾದವ್‌ಗೆ ಬೆಂಬಲವಾಗಿದ್ದವರು. ಆದರೆ ಮೊದಲ ಬಾರಿಗೆ 1996 ರಲ್ಲಿ ನಿತೇಶ್‌ ಕುಮಾರ್‌ ಬಿಜೆಪಿಗೆ ಬೆಂಬಲ ಘೋಷಿಸಿದರು. ಇದು ಇವರ ಮೊದಲ ಪಕ್ಷಾಂತರ. ಅಲ್ಲಿಂದ ತೀರ ಇತ್ತೀಚೆಗಿನ ವರೆಗೂ ಪಕ್ಷ ನಿಷ್ಠೆಯನ್ನು ಬದಲಿಸುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಇವರಿಗೆ ʼಪಲ್ಟಾ ರಾಮ್‌ʼ ಎಂಬ ಹೆಸರು ಸಹ ಬಂದಿದೆ.

ಜನತಾ ಪಕ್ಷ ಹಲವು ಹೋಳುಗಳಾಗಿ ಒಡೆದ ಬಳಿಕ 1998 ರಲ್ಲಿ ಜನತಾ ದಳ ಹಾಗೂ ಸಮತಾ ಪಾರ್ಟಿಯನ್ನು ಒಂದು ಮಾಡಿ ಜನತಾ ದಳ (ಯು) ಎಂದು ನಿತೀಶ್‌ ಕುಮಾರ್‌ ಬದಲಾಯಿಸಿದರು. ಬಳಿಕ 2000 ದ ಬಿಹಾರ ವಿಧಾನಸಭೆ ಚುನಾವಣೆ ವೇಳೆಗೆ ತಮ್ಮದೇ ಪಕ್ಷದ ಮುಖಂಡರೊಡನೆ ಕಿತ್ತಾಡಿಕೊಂಡು ಸೇರಿಸಿಕೊಂಡಿದ್ದ ಸಮತಾ ಪಕ್ಷವನ್ನು ಹೊರಹಾಕಿದರು. ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡರು. ಈ ಕಿತ್ತಾಟಕ್ಕೆ ಕಾರಣವಾಗಿದ್ದು ಸಿಎಂ ಆಗಬೇಕೆನ್ನುವ ಆಸೆ. ಆದರೆ 2000 ವಿಧಾನಸಭೆ ಚುನಾವಣೆಯಲ್ಲಿ ಲಾಲೂ ಪ್ರಸಾದ್‌ ಯಾದವ್‌ರ ಪಕ್ಷಕ್ಕೆ ಮುನ್ನಡೆ ಇತ್ತು. ಬಿಜೆಪಿ ಜೊತೆ ಸೇರಿ ಸಿಎಂ ಆಗಲು ಯತ್ನಿಸಿದರಾದರೂ ಕೇವಲ ಏಳು ದಿನಗಳಿಗಷ್ಟೆ ಸಿಎಂ ಆಗಿದ್ದರು ನಿತೀಶ್.

2004 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮತ್ತೆ ನಿತೀಶ್‌ ಕುಮಾರ್‌ ಕೈಜೋಡಿಸಿದರಾದರೂ ಹೆಚ್ಚಿನ ಉಪಯೋಗವಾಗಲಿಲ್ಲ. ಆದರೆ 2005 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿ ದೊಡ್ಡ ಗೆಲುವು ಸಾಧಿಸಿ ನಿತೀಶ್‌ ಕುಮಾರ್‌ ಎರಡನೇ ಬಾರಿಗೆ ಸಿಎಂ ಆದರು. ಅದಾದ ಬಳಿಕ 2010 ರಲ್ಲಿಯೂ ಸಹ ಬಿಜೆಪಿ ಜೊತೆ ಮೈತ್ರಿ ಮುಂದುವರೆಸಿ ಮತ್ತೆ ಗೆದ್ದು ಮೂರನೇ ಬಾರಿಗೆ ಸಿಎಂ ಆದರು.

ಆದರೆ 2014 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯ ಪ್ರದರ್ಶನ ತೋರಿದ್ದರಿಂದ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಆ ಬಳಿಕ ಮುಂಬರುವ ಬಿಹಾರ ಚುನಾವಣೆ ದೃಷ್ಟಿಯಿಂದ ಮತ್ತೆ ಸಿಎಂ ಆದರು. 2015 ರ ಚುನಾವಣೆಯಲ್ಲಿ ಬಿಜೆಪಿಯ ಕೈಬಿಟ್ಟ ನಿತೀಶ್‌ ಕುಮಾರ್‌, ಲಾಲೂ ಪ್ರಸಾದ್‌ ಯಾದವ್‌ ಹಾಗೂ ಕಾಂಗ್ರೆಸ್‌ ಜೊತೆ ಸೇರಿ ಮಹಾಘಟಬಂಧನ್‌ ಮಾಡಿ, ಬಿಜೆಪಿ ವಿರುದ್ಧ ಚುನಾವಣೆಗೆ ಸಿದ್ಧವಾದರು. ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್‌ ಕುಮಾರ್‌ ಹಾಗೂ ಲಾಲೂ ಪ್ರಸಾದ್‌ ಯಾದವ್ 178 ಕ್ಷೇತ್ರಗಳಲ್ಲಿ ಗೆದ್ದರು. ನಿತೇಶ್‌ ರ ಜೆಡಿಯುಗೆ ಲಾಲೂ ಪ್ರಸಾದ್‌ ಯಾದವ್‌ ಪಕ್ಷಕ್ಕಿಂತಲೂ ಕಡಿಮೆ ಸೀಟು ಬಂದಿತ್ತು. ಆದರೂ ಸಹ ನಿತೀಶ್‌ ಅವರನ್ನೇ ಮುಖ್ಯ ಮಂತ್ರಿ ಮಾಡಲಾಯ್ತು.

ಎರಡು ವರ್ಷಗಳ ಬಳಿಕ ಉಪಮುಖ್ಯ ಮಂತ್ರಿ ತೇಜಸ್ವಿ ಯಾದವ್‌ ಜೊತೆ ಭಿನ್ನಾಭಿಪ್ರಾಯದಿಂದ ಮಹಾಘಟಬಂಧನ್‌ ತ್ಯಜಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಎದುರಾಳಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಜೊತೆ ಸೇರಿಕೊಂಡು ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಜೆಡಿಯು ಪಕ್ಷವನ್ನು ಎನ್‌ಡಿಎ ಜೊತೆ ಸೇರಿಸಿದರು. ಅದಾದ ಬಳಿಕ 2020 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೇರಿ ಮತ್ತೆ ಬಹುಮತ ಸಾಧಿಸಿ ಸಿಎಂ ಆದರು. ಆದರೆ ಎರಡೇ ವರ್ಷಕ್ಕೆ ಬಿಜೆಪಿಗೆ ಗುಡ್‌ ಬೈ ಹೇಳಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜೊತೆ ಸೇರಿಕೊಂಡು ಸಿಎಂ ಆಗಿ ಮರು ಪ್ರಮಾಣ ವಚನ ಪಡೆದರು.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ನಿತೇಶ್‌ ಕುಮಾರ್‌ ಇದೇ ವರ್ಷದ ಆರಂಭದಲ್ಲಿ ಅಂದರೆ ಜನವರಿ 2024 ರಲ್ಲಿ ಆರ್‌ಜೆಡಿ, ಕಾಂಗ್ರೆಸ್‌ಗೆ ಕೈಕೊಟ್ಟು, ಮತ್ತೆ ಬಿಜೆಪಿ ಜೊತೆ ಸೇರಿಕೊಂಡು ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈಗ ಪ್ರಸ್ತುತ ಎನ್‌ಡಿಎ ಜೊತೆಗೇ ಇದ್ದಾರೆ. ಆದರೆ ಅತಿಯಾದ ಅಧಿಕಾರದ ಆಸೆಯುಳ್ಳ ನಿತೇಶ್‌ ಮತ್ತೆ ಬಿಜೆಪಿಗೆ ಕೈ ಕೊಡುವುದಿಲ್ಲ ಎಂಬ ಗ್ಯಾರೆಂಟಿ ಇಲ್ಲ.

LEAVE A REPLY

Please enter your comment!
Please enter your name here