Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

0
135
Allu Arjun
Allu Arjun_Sukumar

Allu Arjun

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾಕ್ಕೆ ಅಲ್ಲು ಅರ್ಜುನ್ ಗೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿದೆ. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಈ ನಡುವೆ ಅಲ್ಲು ಅರ್ಜುನ್ ಹಾಗೂ ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿತ್ತು. ಇದರ ಸತ್ಯಾಂಶ ಏನೆಂಬುದು ಈಗ ಹೊರಬಿದ್ದಿದೆ.

‘ಪುಷ್ಪ’ ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಗಡ್ಡ ಮತ್ತು ಉದ್ದ ಕೂದಲು ಬಿಟ್ಟಿದ್ದರು. ಆದರೆ ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್. ಕ್ಲೀನ್ ಶೇವೆ ಮಾಡಿಸಿದ್ದರು. ಸುಕುಮಾರ್ ಜೊತೆಗಿನ ಭಿನ್ನಾಭಿಪ್ರಾಯದಿಂದಲೇ ಅಲ್ಲು ಅರ್ಜುನ್ ಹೀಗೆ ಮಾಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ನಿಜ ಸಂಗತಿ ಬೇರೆಯೇ ಇದೆ.

ಅಲ್ಲು ಅರ್ಜುನ್ ಗೆ ಬಹು ಆಪ್ತರಾಗಿರುವ ಬನ್ನಿ ವಾಸು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಲ್ಲು ಅರ್ಜುನ್ ಹಾಗೂ ಸುಕುಮಾರ್ ದಶಕಗಳಿಂದಲೂ ಆಪ್ರ‌ಮಿತ್ರರು ಅವರ ನಡುವೆ ಭಿನ್ನಾಭಿಪ್ರಾಯ ಬರಲು ಸಾಧ್ಯವೇ ಇಲ್ಲ. ಸಿನಿಮಾಕ್ಕಾಗಿಯೇ ಅವರು ಗಡ್ಡ ತೆಗೆದಿದ್ದಾರೆ ಎಂದಿದ್ದಾರೆ. ಆ ಮೂಲಕ ಸಿನಿಮಾದ ಕತೆಯ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಸುಕುಮಾರ್, ‘ಪುಷ್ಪ’ ಸಿನಿಮಾಕ್ಕಾಗಿ ಸುದೀರ್ಘವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ಇದರಿಂದ ಬೇಸತ್ತು ಅಲ್ಲು ಅರ್ಜುನ್ ಗಡ್ಡ ತೆಗೆದಿದ್ದಾರೆ ಎನ್ನಲಾಗಿತ್ತು. ಆದರೆ ಇದಕ್ಕೂ ಸ್ಪಷ್ಟನೆ ನೀಡಿರುವ‌ ಬನ್ನಿ ವಾಸು, ಅಲ್ಲು ಅರ್ಜುನ್ ಇನ್ನೂ ಒಂದು ವರ್ಷ ಬೇಕಾದರು ಪುಷ್ಪ ಸಿನಿಮಾಕ್ಕಾಗಿ ಶೂಟಿಂಗ್ ಮಾಡಲಿದ್ದಾರೆ. ‘ಪುಷ್ಪ’ ಸಿನಿಮಾ ಮತ್ತು ಸುಕುಮಾರ್ ಮೇಲೆ ಅವರಿಗೆ ಅಷ್ಟು ನಂಬಿಕೆ ಇದೆ ಎಂದಿದ್ದಾರೆ.

Karnataka Airports:ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳ ಹೆಸರು ಬದಲಿಸಲು ಮುಂದಾದ ರಾಜ್ಯ ಸರ್ಕಾರ

ಕೆಲವು ಸುದ್ದಿಗಳ ಪ್ರಕಾರ, ಬಾಲಿವುಡ್ ನ ಖ್ಯಾತ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದು, ಆ ಸಿನಿಮಾದ ಲುಕ್ ಟೆಸ್ಟ್ ಗಾಗಿ ಅಲ್ಲು ಅರ್ಜುನ್ ಗಡ್ಡ ತೆಗೆಸಿ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೆಲವು‌ ಮೂಲಗಳ ಪ್ರಕಾರ, ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ‌ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಅಲ್ಲು ಅರ್ಜುನ್. ಈ ಸುದ್ದಿ ಇನ್ನೂ ಖಾತ್ರಿಯಾಗಿಲ್ಲ.

LEAVE A REPLY

Please enter your comment!
Please enter your name here