Allu Arjun
ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ‘ಪುಷ್ಪ’ ಸಿನಿಮಾದಿಂದ ಅವರಿಗೆ ಈ ಪಟ್ಟ ದೊರೆತಿದೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಅವರು ‘ಪುಷ್ಪ 2’ ಸಿನಿಮಾಕ್ಕೆ ಪಡೆದಿದ್ದಾರೆ. ಆದರೆ ಅಲ್ಲು ಅರ್ಜುನ್ ಈ ಮಟ್ಟಕ್ಕೆ ಬೆಳೆಯಲು ಅವರ ತಂದೆ ಅಲ್ಲು ಅರವಿಂದ್ ಪ್ರಮುಖ ಕಾರಣ. ಅಲ್ಲು ಅರವಿಂದ್ ಭಾರತದ ಅತ್ಯುತ್ತಮ ನಿರ್ಮಾಪಕರಲ್ಲಿ ಒಬ್ಬರು. ಆದರೆ ಅಲ್ಲು ಅರ್ಜುನ್, ತಮ್ಮ ತಂದೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ ಎಂದು ನೆಟ್ಟಿಗರು ಆರೋಪ ಮಾಡಿದ್ದಾರೆ.
ಅಲ್ಲು ಅರವಿಂದ್ ಒಡೆತನದ ‘ಆಹಾ’ ಒಟಿಟಿಯಲ್ಲಿ ಪ್ರಸಾರ ಆಗುವ ಟಾಕ್ ಶೋಗೆ ಅಲ್ಲು ಅರ್ಜುನ್ ಅತಿಥಿಯಾಗಿ ಆಗಮಿಸಿದ್ದರು. ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಈ ಶೋನಲ್ಲಿ ಸಾಕಷ್ಟು ಹಾಸ್ಯ, ಕೆಲ ಗೇಮ್’ಗಳು ಇರುತ್ತವೆ. ಅತಿಥಿಗಳ ಸಿನಿಮಾ, ಖಾಸಗಿ ಜೀವನ, ಕುಟುಂಬದ ಬಗ್ಗೆ ನಂದಮೂರಿ ಬಾಲಕೃಷ್ಣ ಪ್ರಶ್ನೆ ಕೇಳುತ್ತಾರೆ. ಈ ವೇಳೆ ಅಲ್ಲು ಅರ್ಜುನ್ ತಮ್ಮ ತಂದೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ ಎಂದು ಶೋ ನೋಡಿದ ಕೆಲವರು ಆರೋಪಿಸಿದ್ದಾರೆ.
ತಂದೆಯ ಜೇಬಿನಲ್ಲಿ ಹಣ ಕದ್ದಿದ್ದೀರ ಎಂದು ಬಾಲಕೃಷ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಲ್ಲು ಅರ್ಜುನ್, ‘ಅಯ್ಯೋ ಆ ವ್ಯಕ್ತಿಮಹಾ ಜಿಪುಣ, ‘ಜಿಪುಣ ಸುಬ್ಬಾರಾವು’ ಜೇಬಿನಲ್ಲಿ ಹಣವೇ ಇಡುತ್ತಿರಲಿಲ್ಲ. ಬೀರು ಒಳಗೂ ಇಡುತ್ತಿರಲಿಲ್ಲ. ಬೀರು ಒಳಗಿನ ಬಟ್ಟೆಗಳ ಮಧ್ಯೆ ಎಲ್ಲೋ ಅಡಗಿಸಿ ಇಡುತ್ತಿದ್ದರು’ ಎಂದು ನಕ್ಕಿದ್ದಾರೆ.
ಅದಾದ ಬಳಿಕ ಅಪ್ಪ ತಮಗೆ ಕಾರು ಕೊಡಿಸಿದ್ದರ ಬಗ್ಗೆಯೂ ಮಾತನಾಡಿದ ಅಲ್ಲು ಅರ್ಜುನ್ ಆಗಲೂ ಸಹ ತಂದೆ ಅಲ್ಲು ಅರವಿಂದ್ ಅವರನ್ನು ವ್ಯಂಗ್ಯ ಮಾಡಿದರು. ‘ನನಗೆ ಹದಿನೆಂಟು ವರ್ಷ ಆದಮೇಲೆ ಕಾರು ಕೊಡಿಸುತ್ತೀನಿ ಎಂದಿದ್ದರು. ಆದರೆ ಆಮೇಲೆ ಮರೆತು ಹೋದರು. ಕೊನೆಗೆ ಪೀಡಿಸಿದಾಗ, ಯಾವುದೋ 40-50ನೇ ಹ್ಯಾಂಡ್ ಹಳೆಯ ಕಾರೊಂದನ್ನು ಕೊಡಿಸಿದರು. ಮೊದಲೇ ‘ಜಿಪುಣ ಸುಬ್ಬಾರವು’ ಅಲ್ಲವಾ, ಅದೇ ಅವರ ಬುದ್ಧಿ. ಆ ಕಾರನ್ನು ನಾನು ಓಡಿಸಿರೋದಕ್ಕಿಂತ ತಳ್ಳಿರೋದೆ ಹೆಚ್ಚು’ ಎಂದು ತಮಾಷೆ ಮಾಡಿದ್ದಾರೆ ಅಲ್ಲು ಅರ್ಜುನ್.
Bhushan Kumar: ಹಣ್ಣು ಮಾರುತ್ತಿದ್ದ ಈ ಕುಟುಂಬ ಇಂದು ಬಾಲಿವುಡ್’ನ ಅತ್ಯಂತ ಶ್ರೀಮಂತ ಕುಟುಂಬ
ಮತ್ತೊಂದು ಸಂದರ್ಭದಲ್ಲಿ ‘ಆಹಾ’ ಒಟಿಟಿ ನಮ್ಮಂದೆ ಇರಬಹುದು ಆದರೆ ಇಲ್ಲಿ ನನ್ನದೇ ನಡೆಯೋದು, ಅವರೆಲ್ಲ ಸುಮ್ಮನೆ ಹೆಸರಿಗೆ ಮಾತ್ರ’ ಎಂದು ಸಹ ಅಲ್ಲು ಅರ್ಜುನ್ ಹೇಳಿದ್ದಾರೆ. ಅದೇ ಶೋನಲ್ಲಿ ‘ನಮ್ಮ ಅಪ್ಪ ನನಗೆ ಹಣ ನೀಡೇ ಇಲ್ಲ, ಎಲ್ಲ ನಾನೇ ಸಂಪಾದಿಸಿದ್ದು’ ಎಂದು ಸಹ ಹೇಳಿದ್ದಾರೆ. ಅದಕ್ಕೆ ಬಾಲಕೃಷ್ಣ ‘ನಿಮ್ಮ ಅಪ್ಪ ನಿನಗೆ ನೀಡಲಿಲ್ಲ, ನಮ್ಮ ಅಪ್ಪ (NTR) ನನಗೆ ನೀಡಲಿಲ್ಲ. ಆದರೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ್ದಾರೆ. ಅದಕ್ಕೆ ಇಂದು ನಾವು ನಮ್ಮ ಕಾಲ ಮೇಲೆ ನಿಂತಿದ್ದೇವೆ’ ಎಂದರು.