Allu Arjun
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಭಾರಿ ಬಜೆಟ್’ನ ಈ ಸಿನಿಮಾವನ್ನು ಹಿಂದೆ ಯಾವ ಸಿನಿಮಾವನ್ನೂ ಸಹ ಬಿಡುಗಡೆ ಮಾಡದೇ ಇದ್ದ ರೀತಿಯಲ್ಲಿ ಬಲು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದರ ನಡುವೆ ಪುಷ್ಪ 2 ಸಿನಿಮಾಕ್ಕೆ ಅಲ್ಲು ಅರ್ಜುನ್ ಪಡೆಯುತ್ತಿರುವ ಭಾರಿ ಮೊತ್ತದ ಸಂಭಾವನೆ ಸದ್ದು ಮಾಡುತ್ತಿದೆ.
ಭಾರತದ ಯಾವ ನಟನೂ ಪಡೆಯದಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಅಲ್ಲು ಅರ್ಜುನ್ ಈ ಸಿನಿಮಾಕ್ಕೆ ಪಡೆಯುತ್ತಿದ್ದಾರೆ. ‘ಪುಷ್ಪ 2’ ಸಿನಿಮಾಕ್ಕೆ ಅಲ್ಲು ಅರ್ಜುನ್ 300 ಕೋಟಿ ಸಂಭಾವನೆ ಪಡೆದಿದ್ದಾರೆ. ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಸೇರಿದಂತೆ ಭಾರತದ ಇನ್ಯಾವ ನಟರೂ ಸಹ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಕೇವಲ ಒಂದು ಸಿನಿಮಾಕ್ಕೆ ಪಡೆದಿದ್ದಿಲ್ಲ.
ಅಲ್ಲು ಅರ್ಜುನ್’ಗೇನೋ ಭಾರಿ ದೊಡ್ಡ ಸಂಭಾವನೆಯನ್ನು ನೀಡಿರುವ ‘ಪುಷ್ಪ 2’ ತಂಡ ಅದೇ ಸಿನಿಮಾದ ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಅವರುಗಳಿಗೆ ಬಹುತೇಕ ಅನ್ಯಾಯವನ್ನೇ ಮಾಡಿದೆ. ಸಿನಿಮಾದಲ್ಲಿ ಫಹಾದ್ ಫಾಸಿಲ್ ಹಾಗೂ ರಶ್ಮಿಕಾ ಅವರದ್ದೂ ಸಹ ಬಹಳ ಪ್ರಮುಖ ಪಾತ್ರವೇ ಆಗಿದ್ದು, ಅವರಿಗೆ ಅಲ್ಲು ಅರ್ಜುನ್’ಗೆ ನೀಡುತ್ತಿರುವ ಸಂಭಾವನೆಯ 5% ಸಹ ನೀಡಲಾಗುತ್ತಿಲ್ಲ.
ರಶ್ಮಿಕಾ ಮಂದಣ್ಣಗೆ ಕೇವಲ 6 ಕೋಟಿ ಸಂಭಾವನೆ ನೀಡಿದ್ದರೆ, ಫಹಾದ್ ಫಾಸಿಲ್’ಗೆ 10 ಕೋಟಿ ಸಂಭಾವನೆ ನೀಡಲಾಗುತ್ತಿದೆ. ಆದರೆ ಈ ಇಬ್ಬರೂ ಸಹ ಪುಷ್ಪ 2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲು ಅರ್ಜುನ್’ಗೆ ದೊಡ್ಡ ಅಭಿಮಾನಿ ವರ್ಗ ಇದೆಯೆಂಬ ಕಾರಣಕ್ಕೆ ಇಷ್ಟು ದೊಡ್ಡ ಸಂಭಾವನೆಯನ್ನು ಅವರಿಗೆ ನೀಡಲಾಗುತ್ತಿದೆ. ನಟನಾ ಪ್ರತಿಭೆಯನ್ನು ಮಾನದಂಡವಾಗಿ ಬಳಸಿದ್ದರೆ ಫಹಾದ್ ಫಾಸಿಲ್’ಗೆ ಹೆಚ್ಚು ಸಂಭಾವನೆ ಕೊಡಬೇಕಾಗುತ್ತಿತ್ತು.
Samantha: ಸಮಂತಾ ಧರಿಸಿರುವ ಈ ವಾಚಿನ ಬೆಲೆಗೆ ಒಂದು ಮನೆ ಕಟ್ಟಿಸಬಹುದು
‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್, ಪೊಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಕನ್ನಡದ ಡಾಲಿ ಧನಂಜಯ್, ಸುನಿಲ್, ಜಗಪತಿ ಬಾಬು, ಪ್ರಕಾಶ್ ರೈ ಇನ್ನು ಹಲವರು ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗಲಿದೆ.