Ambani Family: 50 ಜೋಡಿಗಳ ಅದ್ಧೂರಿ ವಿವಾಹ ಮಾಡಿದ ಅಂಬಾನಿ, ಚಿನ್ನದ ಆಭರಣ, ನಗದು ಉಡುಗೊರೆ

0
131
Ambani Family
50 ಜೋಡಿಗಳ ಅದ್ಧೂರಿ ವಿವಾಹ ಮಾಡಿದ ಅಂಬಾನಿ

Ambani Family

ವಿಶ್ವದ ಟಾಪ್‌ 10 ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ ಹನ್ನೆರಡನೇ ತಾರೀಖಿನಂದು ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಇಂದು (ಜುಲೈ 2) ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಘರ್ ಪ್ರದೇಶದಲ್ಲಿನ ರಿಲಯನ್ಸ್‌ ಕಾರ್ಪೊರೇಟ್‌ ಪಾರ್ಕ್‌ ನಲ್ಲಿ ಐವತ್ತಕ್ಕೂ ಹೆಚ್ಚು ಜೋಡಿಗಳಿಗೆ, ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ವಧು- ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಂಬಾನಿ ಕುಟುಂಬ ಆಯೋಜಿಸಿತ್ತು. ವಧು ಹಾಗೂ ವರರಿಗೆ ಅಂಬಾನಿ ಕುಟುಂಬ ಭಾರಿ ಉಡುಗೊರೆಗಳನ್ನು ನೀಡಿ ಸತ್ಕರಿಸಿದ್ದು ವಿಶೇಷ.

ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ನಲ್ಲಿ ನಡೆದ ವಿವಾಹ ಸಮಾರಂಭವದಲ್ಲಿ ವಧು-ವರರ ಜೊತೆಗೆ ಸುಮಾರು 800 ಜನರು ಭಾಗವಹಿಸಿದ್ದರು. ಅನಂತ್- ರಾಧಿಕಾ ಮದುವೆಗೆ ಇದು ಆರಂಭಿಕ ಕಾರ್ಯಕ್ರಮವಾಗಿದ್ದು, ಮುಂದಿನ ಮದುವೆ ಋತುವಿನಲ್ಲಿ ದೇಶದಾದ್ಯಂತ ಈ ರೀತಿಯಾಗಿ ನೂರಕ್ಕೂ ಹೆಚ್ಚು ವಿವಾಹಗಳಿಗೆ ಅಂಬಾನಿ ಕುಟುಂಬದ ಬೆಂಬಲ ದೊರೆಯಲಿದೆ. ಈ ಸಂಕಲ್ಪವನ್ನು ಅಂಬಾನಿ ಕುಟುಂಬ ಮಾಡಿಕೊಂಡಿದೆ. ಅದನ್ನು ನೆರವೇರಿಸುತ್ತಿದೆ.

ಅಂಬಾನಿ ಮನೆ ಮಂದಿ ಕುಡಿಯುವ ಹಾಲಿನ ಬೆಲೆ ಎಷ್ಟು ಗೊತ್ತೆ?

ಅಂದ ಹಾಗೆ ಮುಂಬೈನಲ್ಲಿ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು. ವಿವಾಹದ ಸಂದರ್ಭದಲ್ಲಿ ಪ್ರತಿ ಜೋಡಿಗೂ ಮಂಗಳ ಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿದಂತೆ ಚಿನ್ನಾಭರಗಳನ್ನು ನೀಡಲಾಯಿತು. ಜೊತೆಗೆ ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣಗಳನ್ನು ಸಹ ನೀಡಲಾಯಿತು. ಇದರ ಜತೆಗೆ ಪ್ರತಿ ವಧುವಿಗೆ ರೂ. 1.01 ಲಕ್ಷ (ಒಂದು ಲಕ್ಷದ ಒಂದು ಸಾವಿರ) ರೂಪಾಯಿಯನ್ನು ತವರು ಮನೆಯಿಂದ ನೀಡುವಂಥ ಸ್ತ್ರೀಧನದ ರೂಪದಲ್ಲಿ ಕೊಡಲಾಯಿತು. ಇದೆಲ್ಲದರ ಜೊತೆಗೆ ಪ್ರತಿ ದಂಪತಿಗೂ ಒಂದು ವರ್ಷಕ್ಕೆ ಸಾಕಾಗುವಷ್ಟು ದಿನಸಿ, ಗೃಹೋಪಯೋಗಿ ವಸ್ತುಗಳನ್ನು ಕೊಡಲಾಯಿತು. ಈ ಗೃಹೋಪಯೋಗಿ ವಸ್ತುಗಳಲ್ಲಿ 36 ಅಗತ್ಯ ವಸ್ತುಗಳು ಮತ್ತು ಪಾತ್ರೆಗಳು, ಗ್ಯಾಸ್ ಸ್ಟೌ, ಮಿಕ್ಸರ್ ಮತ್ತು ಫ್ಯಾನ್, ಹಾಗೆಯೇ ಹಾಸಿಗೆ ಮತ್ತು ದಿಂಬುಗಳು ಸೇರಿದ್ದವು.

ವಧು-ವರರ ಕುಟುಂಬ ಸದಸ್ಯರು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸದಸ್ಯರು ಸೇರಿದಂತೆ 800 ಕ್ಕೂ ಹೆಚ್ಚು ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ನಂತರ, ಹಾಜರಿದ್ದ ಎಲ್ಲರಿಗೂ ಭವ್ಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದುವೆ ಕಾರ್ಯಕ್ರಮದಲ್ಲಿ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಆಹ್ವಾನಿತರು ವೀಕ್ಷಿಸಿದರು. ಈ ಹಿಂದೆ ಕೂಡ ಕುಟುಂಬದಲ್ಲಿ ಮದುವೆ ನಡೆದ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಜನರಿಗೆ ಮತ್ತು ಎನ್‌ಜಿಒಗಳ ಸಹಕಾರದೊಂದಿಗೆ ಅನ್ನ ದಾನ ಸೇವೆ ಮಾಡುತ್ತಾ ಬರುತ್ತಿದ್ದಾರೆ.

LEAVE A REPLY

Please enter your comment!
Please enter your name here