Andhra Pradesh
ಆಂಧ್ರ ಪ್ರದೇಶದಲ್ಲಿ ಇತ್ತೀಚೆಗಷ್ಟೆ ಸರ್ಕಾರ ಬದಲಾಗಿದೆ. ವೈಸಿಪಿ ಆಡಳಿತದ ಜಗನ್ ಸರ್ಕಾರ ಹೋಗಿ ಚಂದ್ರಬಾಬು ನಾಯ್ಡು ಅವರ ಸರ್ಕಾರ ಬಂದಿದೆ. ಜಗನ್ ಸರ್ಕಾರವಿದ್ದಾಗ ಆಂಧ್ರದ ಕುಡುಕರು ಸರ್ಕಾರ ಕೊಟ್ಟಿದ್ದನ್ನಷ್ಟೆ ಕುಡಿಯಬೇಕಿತ್ತು. ರಾಜ್ಯದಲ್ಲಿ ಮದ್ಯದ ದರಗಳು ಗಗನಕ್ಕೆ ಏರಿ ಕುಳಿತಿದ್ದವು. ಆದರೆ ಈಗ ಹೊಸ ಸರ್ಕರ ಬಂದ ಬಳಿಕ ಮದ್ಯದ ನೀತಿಯಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಆಂಧ್ರದ ಮದ್ಯ ಪ್ರಿಯರಿಗೆ ಖುಷಿ ಸುದ್ದಿ ನೀಡುತ್ತಿದೆ.
ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿದ್ದ ಚಂದ್ರಬಾಬು ನಾಯ್ಡು, ಜಗನ್ ಸರ್ಕಾರದ ಅಬಕಾರಿ ನೀತಿಯಿಂದ ರಾಜ್ಯಕ್ಕೆ 18.80 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದರು. ಈ ಹಿಂದೆ ಇದ್ದ ಅಬಕಾರಿ ನೀತಿಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಹ ಹೇಳಿದ್ದಾರೆ. ಜೊತೆಗೆ ಸರ್ಕಾರವು ಶೀಘ್ರವೇ ಹೊಸ ಅಬಕಾರಿ ನೀತಿಯನ್ನು ಜಾರಿ ಮಾಡಲಿದೆ ಎಂದು ಹೇಳಿದ್ದಾರೆ.
ಜಗನ್ ಸರ್ಕಾರ, ಯಾವುದೇ ಜನಪ್ರಿಯ ಬ್ರ್ಯಾಂಡ್ ನ ಮದ್ಯವನ್ನು ರಾಜ್ಯದಲ್ಲಿ ಮಾರಾಟ ಮಾಡಲು ಅವಕಾಶ ನೀಡಿರಲಿಲ್ಲ. ಕೇವಲ ಸ್ಥಳೀಯವಾಗಿ ತಯಾರಿಸಲಾಗುತ್ತಿದ್ದ ಮದ್ಯಕ್ಕಷ್ಟೆ ಅವಕಾಶ ನೀಡಿದ್ದರು. ಸ್ಥಳೀಯ ಮದ್ಯದ ಡಿಸ್ಟೆಲಿರಿಗಳು ಬಹುತೇಕ ಜಗನ್ ಆಪ್ತರಿಗೆ, ಜಗನ್ ಪಕ್ಷದ ನಾಯಕರಿಗೆ ಸೇರಿದ್ದಾಗಿದ್ದು ಉತ್ತಮ ಗುಣಮಟ್ಟದ್ದಾಗಿರಲಿಲ್ಲ ಆದರೆ ಆಂಧ್ರದ ಮದ್ಯ ಪ್ರಿಯರು ವಿಧಿ ಇಲ್ಲದೆ ಅದೇ ಮದ್ಯವನ್ನು ಇಷ್ಟು ವರ್ಷಗಳಿಂದ ಸೇವಿಸುತ್ತಾ ಬಂದಿದ್ದರು. ಆದರೆ ಇನ್ನು ಮುಂದೆ ಪರಿಸ್ಥಿತಿ ಬದಲಾಗಲಿದೆ.
ಹೊಸ ಅಬಕಾರಿ ತರಲು ಮುಂದಾಗಿರುವ ಚಂದ್ರಬಾಬು ನಾಯ್ಡು ಸರ್ಕಾರ, ಕಿಂಗ್ ಫಿಶರ್ ಮಾಲೀಕ ಯುನೈಟೆಡ್ ಬ್ರಿವರೀಸ್ ಸೇರಿದಂತೆ ಭಾರತದ ಜನಪ್ರಿಯ ಬಿಯರ್, ವಿಸ್ಕಿ ಇನ್ನಿತರೆ ಮದ್ಯಗಳನ್ನು ತಯಾರು ಮಾಡುವ ಕಂಪೆನಿಗಳಿಂದ ಮದ್ಯ ಖರೀದಿಸಿ ವಿತರಣೆ ಮಾಡಲಿದೆ. ಬೆಲೆಯೂ ಸಹ ಸಾಧಾರಣವಾಗಿಯೇ ಇರಲಿದೆ. ಆ ಮೂಲಕ ವರ್ಷಗಳ ಬಳಿಕ ಆಂಧ್ರದ ಜನ ಮತ್ತೆ ಮದ್ಯವನ್ನು ಸವಿಯಲಿದ್ದಾರೆ.
https://samasthanews.com/high-value-lithium-deposits-found-in-mandya-and-yadgir-of-karnataka/
ಚಂದ್ರಬಾಬು ನಾಯ್ಡು ಅವರು ಅಬಕಾರಿ ನೀತಿಯಲ್ಲಿ ಬದಲಾವಣೆ ಮಾಡಲಿರುವ ಸುದ್ದಿ ಹರಡುತ್ತಿದ್ದಂತೆ. ಯುನೈಟೆಡ್ ಬ್ರಿವರೀಸ್ ಸೇರಿದಂತೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಹಲವು ಮದ್ಯ ತಯಾರಿಕಾ ಕಂಪೆನಿಗಳು ಷೇರು ಮೌಲ್ಯದಲ್ಲಿ ಏರಿಕೆ ಕಂಡಿವೆ. ಆಂಧ್ರದ ಮದ್ಯ ಪ್ರಿಯರಂತೂ ಚಂದ್ರಬಾಬು ನಾಯ್ಡು ಅವರ ಹೊಸ ಅಬಕಾರಿ ನೀತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.