April 2025 Horoscope: ಏಪ್ರಿಲ್ ತಿಂಗಳ ರಾಶಿ-ಭವಿಷ್ಯ: ಮೂರು ರಾಶಿಯವರ ಅದೃಷ್ಟ ಬದಲು

0
37
April 2025 Horoscope

April 2025 Horoscope

ಯುಗಾಗಿ ಹಬ್ಬದ ಮರುದಿನವೇ ಬರುವ ಏಪ್ರಿಲ್ ತಿಂಗಳಲ್ಲಿ ಸೂರ್ಯ ಮತ್ತು ಶನಿಯ ಸ್ಥಾನ ಬದಲಾವಣೆ ಆಗುವುದರಿಂದ ಹಲವು ರಾಶಿಗಳ ಮೇಲೆ ಇದರ ನೇರ ಮತ್ತು ಪರೋಕ್ಷ ಪರಿಣಾಮ ಬೀರಲಿದೆ. ಈ ತಿಂಗಳು ಕೆಲವು ರಾಶಿಯವರ ಅದೃಷ್ಟವೇ ಬದಲಾವಣೆ ಆಗಲಿದೆ. ಏಪ್ರಿಲ್ ತಿಂಗಳ ರಾಶಿ-ಭವಿಷ್ಯ ನೋಡೋಣ ಬನ್ನಿ.

ಮೇಷ ರಾಶಿ

ಈ ತಿಂಗಳು ಮೇಷ ರಾಶಿವರಿಗೆ ಶುಭ ಸಮಯ ಇದೆ. ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ, ಸಂಬಳ ಹೆಚ್ಚಳ ಆಗಲಿವೆ. ಎಲ್ಲೋ ಹಳಿ ತಪ್ಪಿದಂತಿದ್ದ ಜೀವನವನ್ನು ಸರಿ ದಾರಿಗೆ ತರಲು ಇದು ಸಕಾಲ. ಮೇಷ ರಾಶಿಯವರಿಗೆ ಸಾಮಾಜಿಕ ಗೌರವದ ಜೊತೆಗೆ, ಅವರ ಮಾತಿಗೆ ಬೆಲೆಯೂ ಬರಲಿದೆ. ಆದರೆ ಮಾತನಾಡುವಾಗ ಎಚ್ಚರಿಕೆ ಇದ್ದಷ್ಟೂ ಒಳ್ಳೆಯದೆ. ಹನುಮಂತ ದೇವರ ಆರಾಧನೆಯಿಂದ ಸಂಕಷ್ಟಗಳು ದೂರಾಗಲಿವೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲ ಇರಲಿದೆ. ಕುಟುಂಬದ ಹಿರಿಯರಿಗೆ ತುಸು ಸಂಕಷ್ಟ ಕಾಡಲಿದೆ. ಹಣ ಖರ್ಚಾಗಲಿದೆ. ಮುಖ್ಯವಾದ ಕೆಲ ಕೆಲಸಗಳು ಪೂರ್ಣ ಆಗವುದಿಲ್ಲ. ನಿಮ್ಮ ಮೇಲೆ ನಿಮಗೆ ಅನುಮಾನ ಕಾಡಲಿದೆ. ಧೈರ್ಯದ ಕೊರತೆ ಇರಲಿದೆ. ಈ ತಿಂಗಳು ನೆಮ್ಮದಿಯ ಕೊರತೆ, ಒತ್ತಡ ನಿಮ್ಮನ್ನು ಕಾಡಲಿದೆ. ಹಣದ ಹರಿವು ಇರಲಿದೆ ಆದರೆ ಖರ್ಚುಗಳು ಸಹ ಇರಲಿದೆ. ಕೆಲವರಿಗೆ ಹೊಸ ಹೂಡಿಕೆ ಅವಕಾಶ ಗೋಚರಿಸಲಿದೆ. ಶುಕ್ರದಶೆಯೂ ಇದೆ. ಈ ರಾಶಿಯವರು ಧ್ಯಾನದಲ್ಲಿ ತೊಡಗಿಕೊಂಡಲ್ಲಿ ಮಾನಸಿಕ ಒತ್ತಡ ತುಸು ಕಡಿಮೆ ಆಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಏಪ್ರಿಲ್ ತಿಂಗಳು ಅಷ್ಟೇನೂ ಶುಭವಲ್ಲ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಅವಮಾನಗಳು ಉಂಟಾಗಲಿವೆ. ಕೆಲಸ ಬಿಟ್ಟು ಬಿಡುವ ಮನಸ್ಸಾಗಲಿದೆ. ಈ ತಿಂಗಳು ಮಿಥುನ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು, ಆರೋಗ್ಯ ಪದೇ ಪದೇ ಕೈಕೊಡುವ ಸಾಧ್ಯತೆ ಇದೆ. ಕುಟುಂಬದ ಹಿರಿಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಉದ್ಯೋಗದಲ್ಲಿ ತೀವ್ರ ಹಿನ್ನಡೆ ನಿಮಗೆ ಎದುರಾಗಲಿದೆ. ನಿಮ್ಮ ಹತ್ತಿರದವರಿಗೆ ನೀವು ನೋವುಂಟು ಮಾಡುವ ಸಂಭವ ಇದೆ. ಜಾಗರೂಕತೆಯಿಂದ ಮಾತುಗಳನ್ನಾಡಿ. ವಿನಾಕಾರಣ ಸುಳ್ಳು ಹೇಳಿ ಸಿಕ್ಕಿಕೊಳ್ಳಲಿದ್ದೀರಿ. ದೈಹಿಕ ಕ್ಷಮತೆ ಕುಂಟಿತವಾದಂತೆ ಭಾಸವಾಗಲಿದೆ. ದೇವರ ಪ್ರಾರ್ಥನೆ ಮಾಡಿ.

Nostradamus: 2025 ರಲ್ಲಿ ನಡೆಯಲಿದೆ ಘೋರಾತಿ ಘೋರ ಘಟನೆಗಳು, ನಾಸ್ಟ್ರೊಡಾಮಸ್ ಭವಿಷ್ಯ

ಕರ್ಕಾಟಕ ರಾಶಿ

ಕರ್ನಾಟಕ ರಾಶಿಯವರಿಗೆ ಈ ತಿಂಗಳು ಶುಭ ಎನ್ನಬಹುದು. ಈ ರಾಶಿಯವರಿಗೆ ಗುರುಬಲ ಇದೆ. ಕೆಲ ನಕ್ಷತ್ರಗಳವರಿಗೆ ಗುರುದಶೆಯೂ ಇದ್ದು, ಅದೃಷ್ಟಶಾಲಿಗಳಾಗಿದ್ದಾರೆ. ಅಂದುಕೊಂಡ ಕೆಲಸಗಳು ಸುಸೂತ್ರವಾಗಿ ನಡೆಯಲಿದೆ. ಹೊಸ ಉದ್ಯಮ ಸ್ಥಾಪನೆ ಮಾಡುವವರಿಗೆ, ಹೊಸ ವಾಹನ ಖರೀದಿಗೆ, ಮನೆ ನಿರ್ಮಾಣ ಮಾಡುವ ಮನಸಿರುವವರಿಗೆ ಇದು ಒಳ್ಳೆಯ ಸಮಯವೆಂದೇ ಹೇಳಬೇಕು. ವ್ಯಾಪಾರಿಗಳಿಗೂ ಸಹ ಬಹಳ ಒಳ್ಳೆಯ ಲಾಭ ಇದೆ. ಬಂಗಾರದ ವ್ಯಾಪಾರಿಗಳಿಗೆ ಭಾರಿ ಅದೃಷ್ಟವೇ ಇದೆ. ಆಗಾಗ್ಗೆ ಮಾನಸಿಕ ಒತ್ತಡಗಳು ಸಹ ಇರಲಿವೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಕಲಹಗಳು ಸಹ ಇರಲಿವೆ. ಅವಿವಾಹಿತರಿಗೆ ವಿವಾಹ ಭಾಗ್ಯ ಬರಲಿದೆ. ಧ್ಯಾನದಿಂದ ಮಾನಸಿಕ ಶಾಂತಿ ಪಡೆದುಕೊಳ್ಳಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ತಿಂಗಳು ಸಾಮಾನ್ಯವಾಗಿರಲಿದೆ. ಕೆಲವು ವೃತ್ತಿಯಲ್ಲಿ ಇರುವವರಿಗೆ ಗೌರವಗಳು ಸಿಗಲಿವೆ. ಸಾಮಾಜಿಕವಾಗಿ ಗುರುತು, ಸನ್ಮಾನಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ ಆಗಿದ್ದು, ಶ್ರಮಕ್ಕೆ ತಕ್ಕ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ. ಅನಾರೋಗ್ಯಕ್ಕೆ ಈಡಾಗುವ ಸಂಭವ ಇದೆ. ಸಂಗಾತಿಯೊಟ್ಟಿಗೆ ಕಲಹ ಸಹ ಆಗಲಿದೆ. ತಾಳ್ಮೆಯಿಂದ ಇದ್ದರಷ್ಟೆ ಒಳಿತಾಗುವುದು. ಮುಖಕ್ಕೆ ಪೆಟ್ಟಾಗುವ ಸಾಧ್ಯತೆ ಇದೆ. ಅನವಶ್ಯಕವಾಗಿ ಸುಳ್ಳು ಹೇಳಿ ಅವಮಾನಿತರಾಗುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ, ಮುಂದೆ ಒಳ್ಳೆಯ ದಿನಗಳು ಕಾದಿವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಆಗಲಿದೆ. ನೆಚ್ಚಿನ ಉದ್ಯೋಗ ಸಿಗುವ ಸಾಧ್ಯತೆ ಇದೆ. ಈಗಿರುವ ಉದ್ಯೋಗದಲ್ಲಿ ಬಡ್ತಿಯೂ ಸಿಗಬಹುದು. ಕುಟುಂಬದಿಂದ ಸಹಕಾರ ಸಿಗಲಿದೆ. ಹಳೆ ಗೆಳೆಯರ ಭೇಟಿ ಆಗಲಿದೆ. ಸಂಬಂಧಿಗಳೊಂದಿಗೆ ಕಲಹ ಮಾನಸಿಕ ನೆಮ್ಮದಿ ಕಸಿಯಲಿದೆ. ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ಪ್ರಯಾಣಿಸುವಾಗ ಎಚ್ಚರಿಕೆಯಿಂದ ಇರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ತರಲು ಪ್ರಯತ್ನ ಮಾಡುವಿರಿ. ಹಣ ಗಳಿಸುವ ಹೊಸ ದಾರಿಗಳನ್ನು ಹುಡುಕುವ ಪ್ರಯತ್ನ ಮಾಡುವಿರಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ತಿಂಗಳು ಅಷ್ಟೋಂದು ಶುಭಕರವಾಗಿಲ್ಲ. ಈ ರಾಶಿಯವರಿಗೆ ಈ ತಿಂಗಳು ಶತ್ರು ಕಾಟ ಇರಲಿದೆ. ಜಾಗರೂಕರಾಗಿ ಇರಬೇಕಾಗುತ್ತದೆ. ಅಪರಿಚತರಿಂದ ಸಮಸ್ಯೆ ಆಗುವ ಸಾಧ್ಯತೆಯೂ ಇದೆ. ಕೆಲ ಅನಾರೋಗ್ಯಗಳು ಕಾಣಿಸಿಕೊಳ್ಳುವುದು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ವಿವಾಹ ಮಾತುಕತೆ ಅರ್ಧಕ್ಕೆ ಮೊಟಕಾಗಲಿವೆ. ಸಂಗಾತಿಯೊಟ್ಟಿಗೆ ಜಗಳ, ಅಸಹನೆ ಎದ್ದು ಕಾಣಲಿದೆ. ಗೆಳೆಯರಿಂದ ಅವಮಾನಗಳು ಆಗಲಿವೆ. ವ್ಯಾಪಾರಿಗಳಿಗೆ ಸಹ ಈ ತಿಂಗಳು ಅಷ್ಟೋಂದು ಶುಭವಾಗಿಲ್ಲ. ಮೋಸ ಹೋಗುವ ಸಾಧ್ಯತೆ ಇದೆ. ಶುಕ್ರ ದಶೆಯವರಿಗೆ ಈ ತಿಂಗಳು ಅನುಕೂಲವಲ್ಲ. ನಿಮ್ಮ ಸಾಮರ್ಥ್ಯದ ಸದುಪಯೋಗ ಆಗುವುದಿಲ್ಲ. ಪ್ರತಿಭೆಗೆ ತಕ್ಕ ಕಾರ್ಯಗಳು ಸಹ ಸಿಗುವುದಿಲ್ಲ. ದೇವರ ಆರಾಧನೆ ಮತ್ತು ತಾಳ್ಮೆ ಇರಲಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ತಿಂಗಳ ಸಾಧಾರಣವಾಗಿದೆಯಷ್ಟೆ. ವೃಶ್ಚಿಕ ರಾಶಿಯವರಿಗೆ ಸಾಮಾಜಿಕ ಗೌರವಗಳು ಪ್ರಾಪ್ತಿ ಆಗಲಿವೆ. ಕೆಲವು ಆತುರದ ನಿರ್ಧಾರಗಳಿಂದ ನಷ್ಟ ಆಗುವ ಸಾಧ್ಯತೆ ಇದೆ. ವಿನಾಕಾರಣ ಕೋಪದಿಂದ ಮನೆಯಲ್ಲಿ ಕಲಹ ಏರ್ಪಡಲಿದೆ. ಮಕ್ಕಳ ಮೇಲೆ ಕೋಪಗೊಳ್ಳುವಿರಿ. ವಾಹನ ಖರೀದಿ ಮಾಡುವಿರಿ. ಭೋಗವಸಸ್ತುಗಳನ್ನು ಬಳಸುವಿರಿ. ತಂದೆಯ ಜೊತೆ ಜಗಳ. ವಿವಾಹ ಯೋಗ ಈಗ ಇದೆ. ಅನವಶ್ಯಕ ಯೋಚನೆಗಳಿಂದ ದೂರ ಬನ್ನಿ. ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಉದ್ಯೋಗ ತೊರೆಯುವ ಮನಸ್ಸು ಆಗಲಿದೆ. ಮಾತನಾಡುವಾಗ ಎಚ್ಚರ ಇರಲಿ. ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಕುಟುಂಬದವರ ಬಗ್ಗೆ ತಾಳ್ಮೆ ಇರಲಿ.

ಧನು ರಾಶಿ

ಧನು ರಾಶಿಯವರಿಗೆ ಈ ತಿಂಗಳು ಶುಭವಲ್ಲ. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಈ ರಾಶಿಯವರು ಈ ತಿಂಗಳು ಇರಬೇಕಾಗಿದೆ. ಶತ್ರುಕಾಟ ಇರಲಿದೆ. ಆತ್ಮೀಯರಿಂದಲೇ ತೊಂದರೆಗೆ ಸಿಕ್ಕಿಕೊಳ್ಳಬಹುದು. ಕುಟುಂಬದ ಜೊತೆಗೆ ಹೊಂದಿಕೊಂಡು ಹೋಗಲಿದ್ದೀರಿ, ಮಕ್ಕಳೊಂದಿಗೆ ಸಮಯ ಕಳೆಯಲಿದ್ದೀರಿ. ಪತ್ನಿ/ಪತಿಯೊಟ್ಟಿಗೆ ಜಗಳ ನಡೆಯಲಿದೆ. ಆದರೆ ತಾಳ್ಮೆ ಇರಲಿ. ಉದ್ಯೋಗದ ಸ್ಥಳದಲ್ಲಿ ಮಾತಿನಿಂದ ತೊಂದರೆಗೆ ಸಿಕ್ಕಿಕೊಳ್ಳುವಿರಿ. ಎಚ್ಚರಿಕೆಯಿಂದ ಮಾತುಗಳನ್ನಾಡಿ. ಆಡುವ ಮಾತಿನ ಬಗ್ಗೆ ಎಚ್ಚರಿಕೆ ಇರಲಿ.

ಮಕರ ರಾಶಿ

ಮಕರ ರಾಶಿಯವರಿಗೆ ಏಪ್ರಿಲ್ ತಿಂಗಳು ಶುಭ ತಿಂಗಳು ಆಗಲಿದೆ. ಹೊಸ ದಾರಿಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ. ಸಂಬಂಧಿಕರೊಟ್ಟಿಗೆ ಕಲಹ ನಡೆಯಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯತ್ನ ಮಾಡುವಿರಿ. ಸಹೋದರರೊಟ್ಟಿಗೆ ವಾಗ್ವಾದ ನಡೆಯಲಿದೆ. ಹಿತ ಶತ್ರುಗಳ ಬಗ್ಗೆ ಜಾಗರೂಕರಾಗಿ ಇರಿ. ಮದುವೆ ಮಾತುಕತೆ ಮುಂದುವರೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ. ಶನಿ ಪ್ರಭಾವ ಮುಗಿದಿದ್ದು ಒಳ್ಳೆಯ ದಿನಗಳು ಮುಂದೆ ಬರಲಿವೆ. ಆರೋಗ್ಯದ ಕಡೆಗೆ ಗಮನ ಕೊಡಬೇಕಾಗಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ತಿಂಗಳು ಮಿಶ್ರಫಲ ಇದೆ. ಬರಬೇಕಾದ ಹಣ ಬಾರದೇ ಹೋಗಬಹುದು. ಅನ್ಯಾಯದ ಅನುಭ ಆಗಲಿದೆ. ನಿಮ್ಮ ಮಾತುಗಳಿಂದ ಕೆಲವರಿಗೆ ನೋವಾಗಲಿದೆ, ಮಾತುಗಳಿಂದ ಅವಮಾನಕ್ಕೂ ಈಡಾಗುವಿರಿ. ಶತ್ರುಗಳಿಗೆ ಮೇಲುಗೈ ಆಗಲಿದೆ. ಆದಾಯ ಇರಲಿದೆ ಆದರೆ ಉಳಿತಾಯ ಕಷ್ಟ. ಉದ್ಯೋಗದಲ್ಲಿ ಬದಲಾವಣೆಯ ಮನಸ್ಸಾಗಲಿದೆ. ಉದ್ಯೋಗ ನಷ್ಟದ ಸಾಧ್ಯತೆಯೂ ಸಹ ಇದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ, ಪಟ್ಟ ಕಷ್ಟಕ್ಕೆ ಫಲಿತಾಂಶ ಬರಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಈ ತಿಂಗಳು ಸಾಧಾರಣವಾಗಿ ಇರಲಿದೆ. ಕೆಲಸದಲ್ಲಿ ಯಾವುದೇ ಉತ್ಸಾಹ ಇರದು. ಗೆಳೆಯರ ಭೇಟಿಗೂ ಉತ್ಸಾಹ ಇರದು. ಮಾನಸಿಕ ಒತ್ತಡ ಇರಲಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಲಿದ್ದೀರಿ. ಏಕಾಗ್ರತೆಯ ಕೊರತೆ, ಅನವಶ್ಯಕ ಚಿಂತೆಗಳು ಕಾಡಲಿವೆ. ವಿವಾಹ ಕಾರ್ಯಗಳಿಗೆ ಶ್ರಮದ ಅವಶ್ಯಕತೆ ಇದೆ. ಕುಟುಂಬದ ಜವಾಬ್ದಾರಿನಿಮ್ಮ ಹೆಗಲ ಮೇಲೆ ಏರಲಿದೆ. ಜವಾಬ್ದಾರಿಗಳನ್ನು ನಿರ್ವಹಿಸಲು ಹೆಣಗಾಡುವಿರಿ. ದೇವರ ಆರಾಧನೆ, ಧ್ಯಾನ ಮಾಡಿ.

LEAVE A REPLY

Please enter your comment!
Please enter your name here