Bigg Boss: ಬಿಗ್’ಬಾಸ್ ಹಂಸ ವಿರುದ್ಧ ನೀಡಿದ ನಿರ್ದೇಶಕ, ಕಾರಣವೇನು?

0
81
Bigg Boss

Bigg Boss

ಬಿಗ್ ಬಾಸ್ ಕನ್ನಡ ಸೀಸನ್ 11 ಚಾಲ್ತಿಯಲ್ಲಿದೆ. ಈಗಾಗಲೇ ಕೆಲವು ಸ್ಪರ್ಧಿಗಳು ಬಿಗ್’ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಬ್ಬರು ಹೊರತಳ್ಪಲ್ಪಟ್ಟಿದ್ದಾರೆ. ಬಿಗ್’ಬಾಸ್ ಮನೆಯಿಂದ ಎಲಿಮಿನೇಟ್ ಆದವರಲ್ಲಿ ಹಂಸ ಸಹ ಒಬ್ಬರು. ಆದರೆ ಬಿಗ್’ಬಾಸ್ ನಿಂದ ಹೊರಬಂದ ಮೇಲೆ ಹಂಸ ವಿರುದ್ಧ ದೂರು ದಾಖಲಾಗಿದೆ. ದೂರು ನೀಡಿರುವುದು ಜನಪ್ರಿಯ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್.

ಟಾಪ್ ಧಾರಾವಾಹಿಗಳಾದ ‘ಪುಟ್ಟಕ್ಕನ ಮಕ್ಕಳು’, ‘ಜೊತೆ ಜೊತೆಯಲಿ’ ಇನ್ನೂ ಹಲವು ಧಾರಾವಾಹಿ ನಿರ್ದೇಶನ ಮಾಡಿರುವ ಆರೂರು ಜಗದೀಶ್ ಅವರು ಇದೀಗ ನಟಿ ಹಂಸ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದರ ಬಳಿ ಮಾತನಾಡಿರುವ ಆರೂರು ಜಗದೀಶ್, ‘ಹಂಸ ಅವರ ವಿರುದ್ದ ಟಿವಿ ಅಸೋಸಿಯೇಷನ್’ಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.

ಆರೂರು ಜಗದೀಶ್ ನಿರ್ದೇಶನ ಮಾಡುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಹಂಸ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಅವರ ಪಾತ್ರಕ್ಕೆ ಒಳ್ಳೆಯ ಜನಪ್ರಿಯತೆ ಇತ್ತು, ಧಾರಾವಾಹಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು, ಆದರೆ ಹಂಸ ಅವರು ಬಿಗ್’ಬಾಸ್ ಗೆ ಹೋಗುವಾಗ ನಿರ್ದೇಶಕ, ನಿರ್ಮಾಪಕರೂ ಆಗಿರುವ ಆರೂರು ಜಗದೀಶ್’ಗೆ ಮಾಹಿತಿ ನೀಡಿರಲಿಲ್ಲವಂತೆ.

‘ವಿದೇಶದಲ್ಲಿ ಸಿನಿಮಾ ಒಂದರ ಶೂಟಿಂಗ್ ಇದೆ, 40 ದಿನ ಅಲ್ಲೇ ಇರಬೇಕು ಎಂದು ಹೇಳಿ ಹೊರಟು ಹೋದರು. ಆ ಬಳಿಕ ಬಿಗ್’ಬಾಸ್ ನಲ್ಲಿ ಅವರನ್ನು ನೋಡಿ ನನಗೆ ಶಾಕ್ ಆಯ್ತು. ನನ್ನ ಬಳಿ ನೇರವಾಗಿ ಬಿಗ್’ಬಾಸ್ ಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದಿದ್ದರೆ ನಾವು ಬೇಡ ಅನ್ನುತ್ತಿರಲಿಲ್ಲ. ಆದರೆ ಅವರು ಸುಳ್ಳು ಹೇಳಿದರು’ ಎಂದಿದ್ದಾರೆ.

Bigg Boss Kannada: ಯುವತಿಯನ್ನು ಕೆಟ್ಟದಾಗಿ ಮುಟ್ಟಿದ ಕನ್ನಡ ಬಿಗ್’ಬಾಸ್ ಸ್ಪರ್ಧಿ?

ಬಿಗ್’ಬಾಸ್ ನಿಂದ ಹೊರಗೆ ಬಂದ ಬಳಿಕ, ಕರೆ ಮಾಡಿ ಧಾರಾವಾಹಿ ಶೂಟಿಂಗ್’ಗೆ ಬನ್ನಿ ಎಂದು ಕರೆದೆ ಆದರೆ ಅವರು ಬರಲ್ಲ ಎಂದರು. ನಾನು ಕಲರ್ಸ್ ಚಾನೆಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದೀನಿ ನಾನು ಜೀ ಕನ್ನಡ ಧಾರಾವಾಹಿಯಲ್ಲಿ ನಟಿಸುವ ಹಾಗಿಲ್ಲ ಎಂದು ಹೇಳಿದರು‌. ಬಿಗ್’ಬಾಸ್ ನಲ್ಲಿ ನಿಮ್ಮ ಜೊತೆಗೆ ಇದ್ದ ಲಾಯರ್ ಜಗದೀಶ್, ಜೀ ಕನ್ನಡದ ಡಿಕೆಡಿಗೆ ಬಂದಿದ್ದರಲ್ಲ ಎಂದು ಕೇಳಿದ್ದಕ್ಕೆ, ಅವರೇನು ಲಾಯರ್, ಏನೋ ವಾದ ಮಾಡಿ ಗೆದ್ದುಕೊಳ್ಳುತ್ತಾರೆ ಆದರೆ ನನಗೆ ಅದೆಲ್ಲ ಮಾಡೋಕೆ ಆಗಲ್ಲ ಎಂದರು, ಹಾಗಾಗಿ ನಾವು ಟಿವಿ ಅಸೋಸಿಯೇಷನ್ ಗೆ ದೂರು ನೀಡಿದ್ದೇವೆ’ ಎಂದು ಆರೂರು ಜಗದೀಶ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here