Athlete Ashwini: ದಕ್ಷಿಣ ಕೊರಿಯಾದ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಏಕೈಕ ಕ್ರೀಡಾಪಟು

0
366
Athlete Ashwini
Athlete Ashwini

Athlete Ashwini

ದಕ್ಷಿಣ ಕೊರಿಯಾದ ಉಲ್ಜುನಲ್ಲಿ 2024 ರ ಅಕ್ಟೋಬರ್ 23 ರಿಂದ 27 ರವರೆಗೆ ನಡೆಯಲಿರುವ ಏಷ್ಯಾ ಪೆಸಿಫಿಕ್ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾತಿ ಅಶ್ವಿನಿ ಗಣಪತಿ(ಭಟ್) ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಂದಹಾಗೆ ಈ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕರ್ನಾಟಕದ ಕ್ರೀಡಾಪಟು ಎಂಬ ಹೆಮ್ಮೆಗೆ ಇವರು ಪಾತ್ರವಾಗಿದ್ದಾರೆ.

ಭಾರತ ತಂಡವು 80 ಕಿಮೀ ಉದ್ದದ ಟ್ರಯಲ್ ವಿಭಾಗದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ 3 ಪುರುಷರು ಮತ್ತು ಒಬ್ಬ ಮಹಿಳೆ ಒಳಗೊಂಡಿದ್ದಾರೆ. ಆ ಒಬ್ಬ ಮಹಿಳೆ ಕರ್ನಾಟಕದ ಅಶ್ವಿನಿ ಆಗಿದ್ದಾರೆ. 40 ಕಿಲೋಮೀಟರ್‌ಗಳ ಶಾರ್ಟ್ ಟ್ರಯಲ್ ವಿಭಾಗದಲ್ಲಿ 5 ಪುರುಷರು ಮತ್ತು ಒಬ್ಬ ಮಹಿಳೆ ಇದ್ದಾರೆ.

ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಅರ್ಹತಾ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸ್ಪರ್ಧೆಗಳ ಆಯ್ಕೆಗಾಗಿ ITRA ಅಂಕಗಳನ್ನು ಮಾನದಂಡವಾಗಿ ಬಳಸಿದೆ. ಎಎಫ್‌ಐ ವೆಬ್‌ಸೈಟ್‌ನಲ್ಲಿ ಸ್ಪರ್ಧಿಗಳ ಹೆಸರುಗಳನ್ನು ಪ್ರಕಟಿಸಲಾಗಿತ್ತು.

RCB ಗೆ ಬಂದ ರಾಹುಲ್‌ದ್ರಾವಿಡ್, ಈ ಬಾರಿಯಾದರೂ ಕಪ್ ನಮ್ಮದಾಗುತ್ತ?

ಟ್ರಯಲ್ ಓಟ ಸಾಮಾನ್ಯ ಓಟದಂತೆ ಅಲ್ಲ. ಬದಲಿಗೆ ಬಹಳ ಕಠಿಣವಾದ ಓಟವಾಗಿದೆ. ಒರಟು ನೆಲ, ಕಾಡು ಪ್ರದೇಶ, ಪರ್ವತಗಳ ಪ್ರದೇಶಗಳಂಥಹಾ ಕಠಿಣ ಸ್ಥಳಗಳಲ್ಲಿ ಸ್ಪರ್ಧಿಗಳು ಓಡಬೇಕಾಗಿರುತ್ತದೆ. ಇದೇ ಕಾರಣಕ್ಕೆ ಈ ಓಟವನ್ನು ದಕ್ಷಿಣ ಕೊರಿಯಾದ ಪರ್ವತ ಪ್ರದೇಶದಲ್ಲಿ ಆಯೋಜಿಸಲಾಗಿದೆ. ತಾಜ್ಯದ ಅಶ್ವಿನಿ ಮತ್ತು ತಂಡ ಈ ಕಠಿಣವಾದ ಓಟದಲ್ಲಿ ಪಾಲ್ಗೊಳಲಿದ್ದಾರೆ.

ಅಶ್ವಿನಿ ಈ ಹಿಂದೆ ಕೆಲವು ಟ್ರ್ಯಾಕ್ ಮತ್ತು ಗುಡ್ಡಗಾಡು ಓಟಗಳಲ್ಲಿ ಭಾಗವಹಿಸಿದ್ದಾರೆ. ಏಷ್ಯಾ ಓಸೇನಿಯಾ ಚಾಂಪಿಯನ್ ಶಿಪ್ ನಲ್ಲಿ ಅಶ್ವಿನಿ ಭಾಗವಹಿಸಿದ್ದರು. 2022 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 400 ಮೀಟರ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here