Site icon Samastha News

Australia Cricket: ಆಸ್ಟ್ರೇಲಿಯಾ ಕ್ರಿಕೆಟ್ಟಿಗರಿಗೆ ವಿರಾಟ್ ಕೊಹ್ಲಿಗಿಂತ ಈ ಆಟಗಾರನ ಕಂಡರೆ ಭಯ ಹೆಚ್ಚು

Australia Cricket

Australia Cricket

ಆಸ್ಟ್ರೇಲಿಯಾ ತಂಡವೆಂದರೆ ಅದೊಂದು ರೌಡಿಗಳ ತಂಡ, ಆ ರೌಡಿಗಳ ತಂಡದ ನಾಯಕ ಮಾಫಿಯಾ ಡಾನ್ ರಿಕ್ಕಿ ಪಾಂಟಿಂಗ್ ಎಂದು ಕರೆಯುತ್ತಿದ್ದ ಕಾಲವಿತ್ತು. ಸೈಮಂಡ್ಸ್, ರಿಕ್ಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ಮೆಕ್​ಗ್ರಾ, ಶೇನ್ ವಾರ್ನ್, ಗಿಲ್ ಕ್ರಿಸ್ಟ್ ಯಾರೂ ಸಹ ಮೈದಾನಕ್ಕೆ ಬಂದ ಎದುರಾಳಿ ಆಟಗಾರರನ್ನು ನಿಂದಿಸದೆ ಕಳಿಸುತ್ತಿರಲಿಲ್ಲ. ಸ್ಲೆಡ್ಜಿಂಗ್ ಆಟದಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲ. ಎಷ್ಟೋ ಮಂದಿ ಆಟಗಾರರ ಆಸ್ಟ್ರೇಲಿಯನ್ನರ ಸ್ಲೆಡ್ಜಿಂಗ್ (ಎದುರಾಳಿ ಆಟಗಾರನ ನಿಂದಿಸುವುದು) ತಾಳಲಾರದೆ ಔಟ್ ಆಗಿ ಮರಳಿದ್ದು ಇದೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ.

ವಿರಾಟ್ ಕೊಹ್ಲಿ ಎಂದರೆ ಎಲ್ಲ ತಂಡದ ಆಟಗಾರರು ಭಯ ಪಡುತ್ತಾರೆ. ಕೊಹ್ಲಿ ಮಾತ್ರವಲ್ಲ ಭಾರತದ ಎಲ್ಲ ಆಟಗಾರರು ಸಹ ಸ್ಲೆಡ್ಜಿಂಗ್ ಕಲೆಯಲ್ಲಿ ನಿಪುಣರಾಗಿದ್ದಾರೆ. ಅದರಲ್ಲೂ ಕೊಹ್ಲಿಯ ಆನ್​ಫೀಲ್ಡ್ ಅಗ್ರೆಷನ್ ಎಂದರೆ ಎದುರಾಳಿಗಳಿಗೆ ನಡುಕ ಹುಟ್ಟುತ್ತದೆ. ಆದರೆ ಆಸ್ಟ್ರೇಲಿಯಾ ಆಟಗಾರರಿಗೆ ಮಾತ್ರ ಕೋಹ್ಲಿ ಎಂದರೆ ಭಯವಿಲ್ಲ, ಬದಲಿಗೆ ಭಾರತದ ಇನ್ನೊಬ್ಬ ಕ್ರಿಕೆಟಿಗನ ಸ್ಲೆಡ್ಜಿಂಗ್ ಎಂದರೆ ಬಹಳ ಭಯವಂತೆ.

ಆಸ್ಟ್ರೇಲಿಯಾದ ಆಟಗಾರರಿಗೆ ಭಾರತದ ಯಾವ ಆಟಗಾರನ ಸ್ಲೆಡ್ಜಿಂಗ್ ಎಂದರೆ ನಿಮಗೆ ಭಯ ಅಥವಾ ಯಾರು ಬಹಳ ಪರಿಣಾಮಕಾರಿಯಾಗಿ ಸ್ಲೆಡ್ಜಿಂಗ್ ಮಾಡುತ್ತಾರೆ ಎಂದು ಪ್ರಶ್ನೆ ಕೇಳಲಾಯ್ತು. ಒಬ್ಬರಿಗೊಬ್ಬರು ಚರ್ಚಿಸದೆ ಉತ್ತರವನ್ನು ಬೋರ್ಡ್​ ಮೇಲೆ ಬರೆಯಬೇಕಿತ್ತು, ಈ ಆಟದಲ್ಲಿ ಬಹುತೇಕ ಆಸ್ಟ್ರೇಲಿಯಾ ಆಟಗಾರರು ಬರೆದ ಆಟಗಾರನ ಹೆಸರು ರಿಷನ್ ಪಂತ್. ಹೌದು, ಆಸ್ಟ್ರೇಲಿಯಾ ಆಟಗಾರರಿಗೆ ವಿರಾಟ್ ಕೊಹ್ಲಿಗಿಂತಲೂ ರಿಷಬ್ ಪಂತ್​ ಸ್ಲೆಡ್ಜಿಂಗ್ ಎಂದರೆ ಭಯವಂತೆ.

ಆನ್​ಫೀಲ್ಡ್​ನಲ್ಲಿ ಭಾರತದ ಆಟಗಾರರ ಮನಸ್ಥಿತಿ ಬದಲಾಗುವಲ್ಲಿ ವಿರಾಟ್ ಕೊಹ್ಲಿಯ ಪಾತ್ರ ದೊಡ್ಡದು. ಆನ್​ಫೀಲ್ಡ್​ನಲ್ಲಿ ಎದುರಾಳಿ ಆಟಗಾರರ ಮೇಲೆ ಏರಿ ಹೋಗುವ, ನಿಂದಿಸುವ ಅವರಲ್ಲಿ ಭಯ ಹುಟ್ಟಿಸುವ ಪ್ರಯತ್ನವನ್ನು ಕೊಹ್ಲಿ ಮಾಡುತ್ತಲೇ ಇರುತ್ತಾರೆ. ಇದೇ ಗುಣವನ್ನು ಇತರೆ ಆಟಗಾರರು ಸಹ ರೂಢಿಸಿಕೊಂಡಿದ್ದಾರೆ. ಬ್ಯಾಟ್ಸ್​ಮ್ಯಾನ್​ಗೆ ಬಹಳ ಹತ್ತಿರವೇ ನಿಲ್ಲುವ ರಿಷಬ್ ಪಂತ್ ಅಂತೂ ಸ್ಕ್ರೀಜ್​ಗೆ ಬರುವ ಪ್ರತಿ ಆಟಗಾರನನ್ನೂ ಕಾಡಿಸುತ್ತಾರೆ. ಒಂದಲ್ಲ ಒಂದು ಮಾತನಾಡುತ್ತಾ ಅವರ ಏಕಾಗ್ರತೆ ಭಂಗ ಮಾಡುವ ಪ್ರಯತ್ನ ಮಾಡುತ್ತಿರುತ್ತಾರೆ.

BCCI ವಾರ್ಷಿಕ ಆದಾಯವೆಷ್ಟು? ಐಪಿಎಲ್​ನಿಂದ ಗಳಿಸಿದ ಹಣವೆಷ್ಟು?

ಇನ್ನೇನು ಆಸ್ಟ್ರೇಲಿಯಾ ಹಾಗೂ ಭಾರತದ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಪ್ರಾರಂಭ ಆಗಲಿದೆ. ನವೆಂಬರ್ 22 ರಿಂದ ಈ ಟೆಸ್ಟ್ ಸರಣಿ ಪ್ರಾರಂಭವಾಗಲಿದ್ದು, ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್​ಬೋರ್ನ್ ಮತ್ತು ಸಿಡ್ನಿಗಳಲ್ಲಿ ಪಂದ್ಯಗಳು ನಡೆಯಲಿವೆ. ಟೆಸ್ಟ್​ನಲ್ಲಿ ಅಜೇಯರಾಗಿ ಉಳಿದಿರುವ ಭಾರತೀಯರು ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯನ್ನರನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Exit mobile version