2025 prediction: ನಾಸ್ಟ್ರೋಡಾಮಸ್, ಬಾಬಾ ವಂಗಾ ನುಡಿದಿದ್ದಾರೆ ಕರಾಳ ಭವಿಷ್ಯ, 2025 ಕ್ಕೆ ಏನಾಗಲಿದೆ?

0
277
2025 Prediction

2025 prediction

ಜ್ಯೋತಿಷ್ಯ ಶಾಸ್ತ್ರದಲ್ಲಿ ಭಾರತದ ವಿಶ್ವಗುರುವೇ ಹೌದು. ಆದರೆ ವಿಶ್ವದಾದ್ಯಂತ ಪ್ರಚಲಿತದಲ್ಲಿರುವುದು ಬಾಬಾ ವಂಗಾ ಮತ್ತು ನಾಸ್ಟ್ರೋಡಾಮಸ್ ಅವರುಗಳ ಭವಿಷ್ಯವಾಣಿ. ಬಾಬಾ ವಂಗಾ ಹಾಗೂ ನಾಸ್ಟ್ರೋಡಾಮಸ್ ಅವರುಗಳ ಭವಿಷ್ಯ ವಾಣಿ ಬಗ್ಗೆ ಹಲವು ದೇಶಗಳಲ್ಲಿ ಕಾಲದಿಂದ ಕಾಲಕ್ಕೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ 2025 ನೇ ವರ್ಷಕ್ಕೆ ಈ ಇಬ್ಬರು ನುಡಿದಿರುವ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.

ನಾಸ್ಟ್ರೋಡಾಮಸ್ ಮತ್ತು ಬಾಬಾ ವಂಗಾ ಇಬ್ಬರೂ ಸಹ 2025 ಕ್ಕೆ ಕರಾಳ ಭವಿಷ್ಯವನ್ನು ಮಾನವರು ನೋಡಬೇಕಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ಎರಡು ಮಹಾನ್ ದೇಶಗಳು ಅಥವಾ ಎರಡು ಬೃಹತ್ ಭೂ ಪ್ರದೇಶಗಳು ಭಾರಿ ಯುದ್ಧದಲ್ಲಿ ತೊಡಗಿಕೊಳ್ಳಲಿವೆ. ಇದರಿಂದಾಗಿ ಭೂಮಿಯ ಮೇಲಿನ ಎಲ್ಲರೂ ಸಮಸ್ಯೆ ಎದುರಿಸಲಿದ್ದಾರೆ ಎಂದಿದೆ ಈ ಭವಿಷ್ಯ. ಮಾತ್ರವಲ್ಲದೆ, 2025 ರಲ್ಲಿ ಪ್ರಾರಂಭ ಆಗುವ ಈ ಯುದ್ಧ ಅತ್ಯಂತ ಕ್ರೂರ ಯುದ್ಧ ಆಗಿರಲಿದೆಯಂತೆ. ಅದರಲ್ಲೂ ಯೂರೋಪಿಯನ್ ದೇಶಗಳು ಭಾರಿ ಸಮಸ್ಯೆಯನ್ನು ಎದುರಿಸಲಿವೆಯಂತೆ. ಇದು ನಾಸ್ಟ್ರಾಡಾಮಸ್ ನುಡಿದಿರುವ ಭವಿಷ್ಯ.

1996 ರಲ್ಲಿ ನಿಧನರಾದ ಅಂಧ ಮಹಿಳೆ ಬಾಬಾ ವಂಗಾ, ಯೂರೋಪಿಯನ್ ದೇಶಗಳು ಭಾರಿ ಸಮಸ್ಯೆ ಎದುರಿಸಲಿದ್ದು ಈ ಸಮಸ್ಯೆಗಳು ಯುದ್ಧಕ್ಕಿಂತಲೂ ಭೀಕರ ಆಗಿರಲಿವೆ ಎಂದಿದ್ದಾರೆ. ಜೊತೆಗೆ ತಂತ್ರಜ್ಞಾನ ಸಹ ಬಹಳ ಮುಂದುವರೆಯಲಿದ್ದು, ಅದು ಅಂಕೆಗೆ ಸಿಗದೆ ಬೆಳೆಯಲಿದೆ ಎಂದಿದ್ದಾರೆ. ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾ ಅವರುಗಳ ಭವಿಷ್ಯ ಈ ಹಿಂದೆ ಹಲವು ಬಾರಿ‌ ನಿಜವಾಗಿವೆ. ಸುಳ್ಳಾಗಿದ್ದೂ ಸಹ ಇದೆ.

Weekly Astrology: ಈ ವಾರ ಮೂರು ರಾಶಿಗಳಿಗೆ ಇದೆ ಭರ್ಜರಿ ಅದೃಷ್ಟ

450 ವರ್ಷಗಳ‌ ಹಿಂದೆಯೇ ಭವಿಷ್ಯ ಬರೆದು ಪ್ರಕಟಿಸಿದ್ದ ನಾಸ್ಟ್ರಾಡಾಮಸ್ ಅಡಾಲ್ಫ್ ಹಿಟ್ಲರ್, ಜಾನ್ ಎಫ್ ಕೆನಡಿ ಹತ್ಯೆ, ಕೋವಿಡ್ 19 ಇನ್ನೂ ಕೆಲವು ಮಹತ್ವದ ಘಟನೆಗಳ ಬಗ್ಗೆ ಪುಸ್ತಕದಲ್ಲಿ ದಾಖಲಿಸಿದ್ದರು. ಇನ್ನು ಬಾಬಾ ವಂಗಾ ಸಹ, 9/11 ದಾಳಿ, ಪ್ರಿನ್ಸೆಸ್ ಡಯಾನಾ ಸಾವು, ಬರಾಕ್ ಒಬಾಮಾ ಚುನಾವಣೆ ಜಯ ಇನ್ನೂ ಕೆಲವು ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು.

2025 ರಲ್ಲಿ ಅತ್ಯಂತ ಕ್ರೂರ ಯುದ್ಧ ನಡೆಯಲಿದೆ ಎಂದು ಇಬ್ಬರುಯ ಜಗತ್ ಪ್ರಸಿದ್ಧ ಭವಿಷ್ಯಕಾರರು ಊಹಿಸಿದ್ದಾರೆ. ಈಗ ಸದ್ಯಕ್ಕೆ ವಿಶ್ವದಲ್ಲಿ ಎರಡು ಯುದ್ಧಗಳು ಚಾಲ್ತಿಯಲ್ಲಿವೆ. ರಷ್ಯಾ ಮತ್ತು ಉಕ್ರೇನ್ ಕಳೆದ ಒಂದು ವರ್ಷದಿಂದಲೂ ಯುದ್ಧದಲ್ಲಿ ನಿರತವಾಗಿದೆ. ರಷ್ಯಾ ಪರವಾಗಿ ಉತ್ತರ ಕೋರಿಯಾ ನಿಂತಿದೆ. ಈಗ ಉಕ್ರೇನ್ ಪರವಾಗಿ ಕೆಲ ಮಿತ್ರ ರಾಷ್ಟ್ರಗಳು ಮುಂದೆ ಬಂದರೆ ಇದು ವಿಶ್ವ ಯುದ್ಧವಾಗಿ ಮಾರ್ಪಡುವ ಸಾಧ್ಯತೆ ಇದೆ. ಇನ್ನು ಇರಾನ್ ಮತ್ತು ಇರಾಕ್ ನಡುವಿನ ಯುದ್ಧ ಸಹ ನಡೆಯುತ್ತಿದೆ. ಒಂದೊಮ್ಮೆ ಇರಾನ್ ಪರವಾಗಿ ಅರಬ್ ದೇಶಗಳು ನೆರವು ನೀಡಿದರೆ ಇದು ಸಹ ವಿಶ್ವ ಯುದ್ಧವಾಗಿ ಮಾರ್ಪಾಡಾಗಲಿದೆ.

LEAVE A REPLY

Please enter your comment!
Please enter your name here