Hindu: ನಮಾಜ್ ಸಮಯದಲ್ಲಿ ದುರ್ಗಾ ಪೂಜೆ ಬೇಡ: ಹಿಂದೂಗಳಿಗೆ ಮನವಿ

0
135
Hindu

Hindu

ದೇಶದಲ್ಲಿ ಗಣೇಶನ ಹಬ್ಬ ಚಾಲ್ತಿಯಲ್ಲಿದೆ. ಪ್ರತಿಷ್ಠಾಪಿಸಲಾಗಿರುವ ಗಣಪತಿಯ ವಿಸರ್ಜನೆ ಬಾಕಿ ಇದೆ. ಸಾಮಾನ್ಯವಾಗಿ ಗಣಪತಿ ಹಬ್ಬದ ಸಂದರ್ಭದಲ್ಲಿ ಅಲ್ಲಲ್ಲಿ ಕೋಮು ಗಲಭೆ ಆಗುತ್ತಲೇ ಇರುತ್ತವೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೆ ಗಲಭೆಯೊಂದು ನಡೆದಿದೆ. ಗಣಪತಿ ಬಳಿಕ ದುರ್ಗಾಷ್ಟಮಿ ನಡೆಯಲಿದೆ, ಒಂಬತ್ತು ದಿನಗಳ ಕಾಲ ನಡೆಯುವ ಅದ್ಧೂರಿ ಮಹೋತ್ಸವವಿದು. ಆದರೆ ದಿನದ ನಮಾಜಿನ ಸಮಯದಲ್ಲಿ ದುರ್ಗಾ ಪೂಜೆ ಮಾಡದಂತೆ ಹಿಂದೂಗಳಲ್ಲಿ ಮನವಿ ಮಾಡಲಾಗಿದೆ.ದುರ್ಗಾ ಪೂಜೆ ಮಾಡದಂತೆ ಮನವಿ ಮಾಡಿರುವುದು ಭಾರತದಲ್ಲಿ ಅಲ್ಲ ಬದಲಿಗೆ ಬಾಂಗ್ಲಾದೇಶದಲ್ಲಿ. ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಮೊಹಮ್ಮದ್ ಯೂನಸ್ ಮುಂದಾಳತ್ವದ ಸರ್ಕಾರವು, ನಮಾಜಿನ ಸಮಯದಲ್ಲಿ ದುರ್ಗಾ ಪೂಜೆ ಮಾಡದಂತೆ ವಿಶೇಷವಾಗಿ ಯಾವುದೇ

ವಾದ್ಯಗಳನ್ನು ಭಾರಿಸದಂತೆ ಹಿಂದೂಗಳಲ್ಲಿ ವಿಶೇಷ ಮನವಿ ಮಾಡಿದೆ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಆಜಾನ್ ಪ್ರಾರಂಭಕ್ಕೆ ಮುನ್ನಾ ಹಾಗೂ ನಮಾಜ್ ನಡೆಯುವ‌ ಸಮಯದಲ್ಲಿ ಯಾವುದೇ ವಾದ್ಯಗಳನ್ನು ಬಾರಿಸುವುದು, ಮೈಕುಗಳಲ್ಲಿ ಮಂತ್ರ ಪಠಿಸುವುದು ಮಾಡಬೇಡಿ, ನಮಾಜ್ ಸಮಯದಲ್ಲಿ ಇವೆಲ್ಲವೂ ನಿಷಿದ್ಧ ಎಂದು ಅಲ್ಲಿನ ಸರ್ಕಾರ ಹೇಳಿದೆ. ಬಾಂಗ್ಲಾದೇಶದ ಗೃಹ ಇಲಾಖೆ ನೀಡೊರುವ ಮಾಹಿತಿಯಂತೆ, ಸರ್ಕಾರದ ಈ ಮನವಿಯನ್ನು ದುರ್ಗಾ ಪೂಜಾ ಸಮಿತಿಗಳು ಸ್ವೀಕರಿಸಿದ್ದು, ಮನವಿಯನ್ನು ಪಾಲಿಸುವುದಾಗಿ ಹೇಳಿವೆ ಎಂದಿದೆ.

Engineer: 5 ವರ್ಷದಲ್ಲಿ ಇದೇ ಮೊದಲು, ಎಂಜಿನಿಯರಿಂಗ್ ದಾಖಲಾತಿಯಲ್ಲಿ ಕುಸಿತ

ಮಾತ್ರವಲ್ಲದೆ, ಬಾಂಗ್ಲಾದೇಶ ಸರ್ಕಾರವು ದೇಶದ ಎಲ್ಲ ಸಾರ್ವಜನಿಕ ದುರ್ಗಾ ಪೂಜಾ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವುದಾಗಿ ಹೇಳಿದೆ. ಅಕ್ಟೋಬರ್ 9 ರಿಂದ ದುರ್ಗಾ ಪೂಜೆ ಆರಂಭವಾಗಲಿದ್ದು, ಮೂರ್ತಿ ನಿರ್ಮಾಣಕ್ಕೂ ಸಹ ಬಾಂಗ್ಲಾ ಸರ್ಕಾರ ಭದ್ರತೆಯ ಭರವಸೆ ನೀಡಿದೆ. ಈ ಹಿಂದೆ ಬಾಂಗ್ಲಾದೇಶದಲ್ಲಿ ದುರ್ಗಾಷ್ಟಮಿ ಸಂದರ್ಭದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ನಡೆದ ಉದಾಹರಣೆಗಳಿವೆ. ಹಾಗಾಗಿ ಈಗ ಹೆಚ್ಚುವರಿ ಭದ್ರತೆಯ ಭರವಸೆ ನೀಡಲಾಗಿದೆ.

LEAVE A REPLY

Please enter your comment!
Please enter your name here