Bank Strike
ಬ್ಯಾಂಕ್ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಇಂದು ಮತ್ತು ನಾಳೆ (ಮಾರ್ಚ್ 24 ಮತ್ತು ಮಾರ್ಚ್ 25) ರಂದು ಬ್ಯಾಂಕ್ ನೌಕರರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಬಹುತೇಕ ಬ್ಯಾಂಕ್ಗಳು ಬಂದ್ ಆಗಿರಲಿವೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ದೇಶದಾದ್ಯಂತ ಬ್ಯಾಂಕ್ ಬಂದ್ಗೆ ಕರೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಯುಎಫ್ಬಿಯು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಐಎಫ್ಎ (ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್) ಜೊತೆಗೆ ಸಭೆ ನಡೆಸಿತ್ತು. ಈ ಸಭೆ ವಿಫಲವಾದ ಬೆನ್ನಲ್ಲೆ ಬ್ಯಾಂಕ್ ನೌಕರರ ಮುಷ್ಕರಕ್ಕೆ ಕರೆ ನೀಡಿದೆ.
ಬ್ಯಾಂಕ್ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಂದೆ ಇರಿಸಿದೆ. ಎಲ್ಲ ಬ್ಯಾಂಕ್ಗಳಲ್ಲಿ ಖಾಲಿ ಇರುವ ನೌಕರರನ್ನು ಈ ಕೂಡಲೇ ಭರ್ತಿ ಮಾಡುವ ಮೂಲಕ ನೌಕರರ ಮೇಲೆ ಆಗುತ್ತಿರುವ ಹೊರೆಯನ್ನು ತಗ್ಗಿಸುವುದು ಮತ್ತು ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವುದು. ಈಗ ಬ್ಯಾಂಕ್ಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವುದು.
Maharashtra: ದಿನಕ್ಕೆ 8 ರೈತರ ಆತ್ಮಹತ್ಯೆ: ಏನಾಗುತ್ತಿದೆ ಮಹಾರಾಷ್ಟ್ರದಲ್ಲಿ?
ಇತ್ತೀಚೆಗೆ ಹೇರಲಾಗುತ್ತಿರುವ ಫರ್ಮಾರ್ಮೆನ್ಸ್ ರಿವ್ಯೂಸ್ (ಕಾರ್ಯಕ್ಷಮತೆ ಮಾಪನ) ಕಾರ್ಯಕ್ಷಮತೆ ಆಧಾರದಲ್ಲಿ ಸಂಬಳ ಹೆಚ್ಚು ಮಾಡುವ ನಿಯಮವನ್ನು ಹಿಂಪಡೆಯಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ. ವೈದ್ಯರಿಗೆ ನೀಡಿರುವಂತೆ, ಸಾರ್ವಜನಿಕರಿಂದ ಬ್ಯಾಂಕ್ ಅಧಿಕಾರಿಗಳು, ನೌಕರರ ಮೇಲಾಗುತ್ತಿರುವ ಹಲ್ಲೆಗಳನ್ನು ತಡೆಯಲು ಕಾನೂನು ರೂಪಿಸುವುದು. ಗ್ರಾಚುಯಿಟಿ ಕಾಯ್ದೆಗೆ ತಿದ್ದುಪಡಿ ತರುವುದು ಇವುಗಳ ಜೊತೆಗೆ ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸಲು ಬ್ಯಾಂಕ್ ನೌಕರರು ಒತ್ತಾಯಿಸಿದ್ದಾರೆ.
ಈಗ ಬಂದ್ಗೆ ಕರೆ ನೀಡಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, 11 ವಿವಿಧ ಬ್ಯಾಂಕ್ ನೌಕರರ ಸಂಘಗಳ ಗುಚ್ಛವಾಗಿದ್ದು ಎಂಟು ಲಕ್ಷಕ್ಕೂ ಹೆಚ್ಚು ನೌಕರರು ಇದರ ಅಡಿಯಲ್ಲಿದ್ದಾರೆ. ಬ್ಯಾಂಕ್ ನೌಕರರ ಮುಷ್ಕರದಿಂದ ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ಗಳು ಬಂದ್ ಆಗಿ ಇರಲಿವೆ. ಶನಿವಾರ, ಭಾನುವಾರ, ಸೋಮವಾರ ಮತ್ತು ಮಂಗಳವಾರಗಳಂದು ಬ್ಯಾಂಕ್ ಬಂದ್ ಇರಲಿದೆ. ಈ ಬಂದ್ಗೆ ಕೆಲವು ಖಾಸಗಿ ಬ್ಯಾಂಕ್ಗಳು ಬೆಂಬಲ ನೀಡಿಲ್ಲ ಎಂಬ ಸುದ್ದಿಯೂ ಇದೆ.