Bar Owners Association of Karnataka
ಸರ್ಕಾರಗಳ ಬೊಕ್ಕಸ ಬರಿದಾದಾಗೆಲ್ಲ ಅವರು ಬರೆ ಹಾಕುವುದು ಕುಡುಕರ ಮೇಲೆಯೇ. ಪ್ರತಿ ಬಜೆಟ್ ನಲ್ಲಿಯೂ ಬಾರಿಯೂ ಅಬಕಾರಿ ಸುಂಕ ಏರಿಸುತ್ತಲೇ ಹೋಗುತ್ತಾರೆ. ಆದರೆ ಈ ಏರಿದ ಅಬಕಾರಿ ಸುಂಕ ಬಾರ್ ಮಾಲೀಕರಿಗೂ ಸಿಗಲ್ಲ, ಸಿಬ್ಬಂದಿಗೂ ಸಿಗಲ್ಲ, ಪರೋಕ್ಷವಾಗಿ ಗ್ರಾಹಕರಿಗೂ ಸಿಗುವುದಿಲ್ಲ. ಇದರ ಜೊತೆಗೆ ಅಬಕಾರಿ ಇಲಾಖೆಯ ಪರಮ ಭ್ರಷ್ಟಾಚಾರವನ್ನು ಬೇರೆ ಬಾರ್ ಮಾಲೀಕರು ಸಹಿಸಿಕೊಳ್ಳಬೇಕು. ಇದೆಲ್ಲದರಿಂದ ರೋಸಿ ಹೋಗಿ ಬಾರ್ ಮಾಲೀಕರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಅಣಿಯಾಗಿದ್ದಾರೆ.
ಬಾರ್ ಮಾಲೀಕರ ಅಸೋಸಿಯೇಷನ್ ಜುಲೈ 26 ರಂದು ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಯಲ್ಲಿ ಬೆಂಗಳೂರು ಹಾಗೂ ರಾಜ್ಯದ ಬಾರ್ ಮಾಲೀಕರು ಪಾಲ್ಗೊಳ್ಳಲಿದ್ದಾರೆ. ಜುಳಯ 26 ರಂದು ಬೆಳಿಗ್ಗೆ 10:30 ಇಂದ ಸಂಜೆ 4:30 ವರೆಗೆ ಪ್ರತಿಭಟನೆ ನಡೆಯಲಿದೆ. ಆ ದಿನ ಮದ್ಯದ ಅಂಗಡಿಗಳನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡುವ ಆಲೋಚನೆಯಲ್ಲಿ ಬಾರ್ ಮಾಲೀಕರ ಸಂಘ ಇದ್ದು, ಈ ಬಗ್ಗೆ ಇನ್ನಷ್ಟೆ ನಿರ್ಧಾರ ಹೊರಬೀಳಬೇಕಿದೆ.
ಪ್ರತಿಭಟನೆ ಕುರಿತು ಮಾತನಾಡಿರುವ ರಾಜ್ಯ ಬಾರ್ ಮಾಲೀಕರ ಸಂಘದ ಕಾರ್ಯದರ್ಶಿ ಕರುಣಾಕರ್ ಹೆಗಡೆ, ‘ಜುಲೈ 26 ರಂದು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ 30 ಜಿಲ್ಲೆಗಳ ಬಾರ್ ಮಾಲೀಕರು ಭಾಗವಹಿಸಲಿದ್ದಾರೆ. ಅಂದು ಎಲ್ಲರೂ ಕಪ್ಪು ಪಟ್ಟಿ ಧರಿಸಿ, ನಮ್ಮ ಬೇಡಿಕೆಗಳನ್ನು ಫಲಕಗಳ ಮೂಲಕ ಪ್ರದರ್ಶಿಸಲಿದ್ದೇವೆ’ ಎಂದಿದ್ದಾರೆ.
ಬಾರ್ ನಡೆಸುವುದು ಎಂದರೆ ಸುಲಭದ ಕೆಲಸ ಎಂದು ಹಲವು ಅಂದುಕೊಂಡಿದ್ದಾರೆ ಆದರೆ ನಮ್ಮ ಕಷ್ಟ ನಮಗೆ ಮಾತ್ರವೇ ಗೊತ್ತು. ವಿವಿಧ ಇಲಾಖೆಗಳಿಂದ ನಮಗೆ ಎಷ್ಟು ದೌರ್ಜನ್ಯ ಆಗುತ್ತದೆ ಎಂಬುದನ್ನು ಹೇಳಲು ಸಹ ಆಗುವುದಿಲ್ಲ. ಇನ್ನು ಅಬಕಾರಿ ಇಲಾಖೆಯಂತೂ ಭ್ರಷ್ಟಾಚಾರದ ಕೂಪ. ಬಾರ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಳೆದ ಹತ್ತಾರು ವರ್ಷಗಳಿಂದಲೂ ನಾವು ಸರ್ಕಾರ, ಅಧಿಕಾರಿಗಳಿಗೆ ಹೇಳುತ್ತಲೇ ಬಂದಿದ್ದೇವೆ.
Muslim Population: ಭಾರತದ ಈ ರಾಜ್ಯಗಳಲ್ಲಿ ಮುಸ್ಲೀಂ ಜನಸಂಖ್ಯೆ ಹೆಚ್ಚಿದೆ: ಕರ್ನಾಟಕದಲ್ಲಿ ಎಷ್ಟು?
ಆದರೆ ನಮ್ಮ ಸಮಸ್ಯೆಯ ಬಗ್ಗೆ ಯಾರೂ ಗಮನ ಹರಿಸಿಲ್ಲ. ನಮ್ಮ ಬೇಡಿಕೆಗಳನ್ನು ಪುಸ್ತಕ ರೂಪದಲ್ಲಿ ಅಚ್ಚುಹಾಕಿ ಸಿಎಂಗೆ, ಉನ್ನತ ಅಧಿಕಾರಿಗಳಿಗೆ ನೀಡಿದ್ದೇವೆ ಆದರೆ ಅದರಿಂದಲೂ ಪ್ರಯೋಜನ ಆಗಿಲ್ಲ. ಹಾಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದಿದ್ದಾರೆ.
ಜುಲೈ 26 ರಂದು ರಾಜ್ಯದ ಎಲ್ಲ ಬಾರ್ ಗಳು ಬಂದ್ ಮಾಡುವ ಅಥವಾ ನಿಗದಿತ ಸಮಯದ ವರೆಗೆ ಬಂದ್ ಮಾಡುವ ಆಲೋಚನೆಯನ್ನು ಸಂಘ ಮಾಡುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.