Real Estate: ಹೊಸಕೋಟೆಯಲ್ಲಿ ಬೃಹತ್ ಟೌನ್’ಶಿಪ್, 500 ಕೋಟಿ ವೆಚ್ಚ, ಕಟ್ಟುವ‌ ಮುಂಚೆಯೇ ಎಲ್ಲವೂ ಸೇಲ್!

0
85
Real Estate

Real Estate

ಬೆಂಗಳೂರು ದಿನದಿಂದ ದಿನಕ್ಕೆ ಇಕ್ಕಟ್ಟಿನ ಪ್ರದೇಶ ಆಗುತ್ತಿದ್ದು, ಬೆಂಗಳೂರು ಹೊರವಲಯದಲ್ಲಿ ಅಭಿವೃದ್ಧಿ ಕಾರ್ಯಗಳು ಗರಿಗೆದರಿವೆ. ಏರ್ ಪೋರ್ಟ್ ರಸ್ತೆ ಮತ್ತು ಹೊಸಕೋಟೆ ಪ್ರದೇಶಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಆಗುತ್ತಿದ್ದು, ಅನೇಕ ಬೃಹತ್ ಯೋಜನೆಗಳು, ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಇದೀಗ ಹೊಸಕೋಟೆಯಲ್ಲಿ ಬೃಹತ್ ಟೌನ್ ಶಿಪ್ ನಿರ್ಮಾಣ ಆಗುತ್ತಿದೆ. ಇದಕ್ಕಾಗಿ 500 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಪ್ರಸಿದ್ಧ ಬಿಸಿಡಿ ಗ್ರೂಪ್ ನವರು ಹೊಸಕೋಟೆ ಬಳಿ 79 ಎಕರೆ ಪ್ರದೇಶದಲ್ಲಿ ಬೃಹತ್ ಟೌನ್ ಶಿಪ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬೃಹತ್ ಟೌನ್’ಶಿಪ್ 900 ಮನೆ, ಕಚೇರಿಗಳನ್ನು ಒಳಗೊಂಡಿರಲಿದೆ. ಇನ್ನೂ ನಿರ್ಮಾಣ ಆರಂಭ ಆಗುವ ಮುಂಚೆಯೇ ಎಲ್ಲ 900 ಮನೆಗಳೂ ಸಹ ದೊಡ್ಡ ಕಂಪೆನಿಯೊಂದಕ್ಕೆ ಲೀಸ್’ಗೆ ನೀಡಲಾಗಿದೆ.

900 ಮನೆಗಳು 45 ಕ್ಕಿಂತಲೂ ಕಡಿಮೆ ಬೆಲೆಯನ್ನು ಹೊಂದಿರಲಿವೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ ನಿರ್ಮಾಣ ಆಗುವ‌ ಎಲ್ಲ ಮನೆಗಳನ್ನು ಆಪಲ್ ಫೋನ್’ಗಳನ್ನು ನಿರ್ಮಾಣ ಮಾಡುವ ಫಾಕ್ಸಾನ್ ಸಂಸ್ಥೆಗೆ ಎರೆಡು‌ ವರ್ಷಕ್ಕೆ ಲೀಸ್’ಗೆ ನೀಡಿದೆ ಬಿಸಿಡಿ ಸಂಸ್ಥೆ.

Bandh: ನವೆಂಬರ್ 20ಕ್ಕೆ ರಾಜ್ಯದಲ್ಲಿ ಮದ್ಯ ಮಾರಾಟ ಇಲ್ಲ, ಕಾರಣ ಏನು?

ಬಿಸಿಡಿ ನಿರ್ಮಾಣ ಮಾಡುತ್ತಿರುವ ಈ ಟೌನ್ ಶಿಪ್ ಅತ್ಯುತ್ತಮ ಸೌಲಭ್ಯ, ಸೌಕರ್ಯ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರಲಿದೆ. ಅಲ್ಲದೆ, ಐಟಿ ಹಬ್ ಆಗಿರುವ ವೈಟ್ ಫೀಲ್ಡ್, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ‌ನಿಲ್ದಾಣಗಳಿಗೆ ಅತ್ಯಂತ ಹತ್ತಿರದಲ್ಲಿಯೇ ಇರಲಿದೆ. ನಮ್ಮ ಈ ಪ್ರಾಜೆಕ್ಟ್’ಗಳ ಮೇಲೆ ಈಗಾಗಲೇ ಹೂಡಿಕೆ ಮಾಡುತ್ತಿದ್ದಾರೆ. ಇಂಥಹುದೇ ಪ್ರಾಜೆಕ್ಟ್’ಗಳನ್ನು ನಾವು ಬೆಂಗಳೂರಿನ ಇತರೆ ಭಾಗಗಳಿಗೂ ವಿಸ್ತರಣೆ ಮಾಡಲಿದ್ದೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here