Site icon Samastha News

BDA: ಮೈಸೂರು ರಾಜಮನೆತನಕ್ಕೆ ಶಾಕ್ ಕೊಟ್ಟ ಸರ್ಕಾರ, ಕೋರ್ಟ್ ಮೆಟ್ಟಿಲೇರಿದ ರಾಜ ಕುಟುಂಬ

BDA

ದೇವನಹಳ್ಳಿ ಕಡೆಯಿಂದ ಬೆಂಗಳೂರು ಪ್ರವೇಶಿಸಿದರೆ ಮೊದಲು‌ ಸಿಗುವುದೇ ಬೆಂಗಳೂರು ಅರಮನೆ ಮೈದಾನ‌. 472 ಎಕರೆ ಬೃಹತ್ ಪ್ರದೇಶದ ಅರಮನೆ ಮೈದಾನದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮ, ಐಶಾರಾಮಿ ಮದುವೆ, ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹೆದ್ದಾರಿಯ ಪಕ್ಕದಲ್ಲೇ, ಬೆಂಗಳೂರಿನ ಅತ್ಯಂತ ಮಹತ್ವದ ಪ್ರದೇಶದಲ್ಲಿರುವ ಬೆಂಗಳೂರಿನ ಅರಮನೆ ಮೈದಾನದ ಈಗಿನ ಮೌಲ್ಯ ಎಷ್ಟಿರಬಹುದು? ಸಾವಿರಾರು ಕೋಟಿಗಳು ಎಂದು ನೀವಂದುಕೊಳ್ಳಬಹುದು. ಆದರೆ 472 ಎಕರೆ ಅರಮನೆ ಮೈದಾನದ ಬೆಲೆ ಕೇವಲ 11 ಕೋಟಿ ರೂಪಾಯಿಗಳಂತೆ!

ಹೌದು, ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರ (ಬಿಡಿಎ) ಪ್ರಕಾರ     ಬೆಂಗಳೂರು ಅರಮನೆ ಮೈದಾನದ ಈಗಿನ ಬೆಲೆ ಕೇವಲ 11 ಕೋಟಿ ರೂಪಾಯಿಗಳು. ರಸ್ತೆ ನಿರ್ಮಾಣ ಕಾರ್ಯಕ್ಕೆ ಅರಮನೆ ಮೈದಾನದ ಕೆಲ ಭಾಗವನ್ನು ವಶಪಡಿಸಿಕೊಳ್ಳಲು ಬಿಡಿಎ ಮುಂದಾಗಿದ್ದು, ಅರಮನೆ ಮೈದಾನದ ಈಗಿನ ಮೌಲ್ಯವನ್ನು ಚದರ ಅಡಿಗೆ ಕೇವಲ 120.68 ರೂಪಾಯಿಗೆ ನಿಗದಿಪಡಿಸಿದೆ‌. ಅಲ್ಲಿಗೆ ಒಟ್ಟು 472 ಎಕರೆ ಮೈದಾನದ ಒಟ್ಟು ಮೌಲ್ಯ ಕೇವಲ 11 ಕೋಟಿ ರೂಪಾಯಿಗಳಾಗುತ್ತದೆ.

ರಷ್ಯಾದಲ್ಲಿ‌’ಜೀತಕ್ಕಿದ್ದ’ ಭಾರತೀಯರಿಗೆ ಮೋದಿಯಿಂದ ಬಿಡುಗಡೆ

ರಸ್ತೆ ಅಭಿವೃದ್ಧಿಗೆ ಅರಮನೆ ಮೈದಾನದ 15 ಎಕರೆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲು ಬಿಡಿಎ ಮುಂದಾಗಿದ್ದು, ತಾನೇ ನಿಗದೊ ಪಡಿಸಿರುವ ಮೌಲ್ಯದ ಪ್ರಕಾರ ಆ ಹದಿನೈದು ಎಕರೆ ಸ್ಥಳದ ಬದಲಾಗಿ ರಾಜ ಕುಟುಂಬಕ್ಕೆ 1 ಕೋಟಿ ಹಣ ನೀಡುವಂತೆ ಟಿಡಿಆರ್ ಗೆ ಸೂಚನೆ ನೀಡಿದೆ. ಅರಮನೆ ಮೈದಾನಕ್ಕೆ ತಾವು ನೀಡಿರುವ ಅಂದಾಜು ಮೌಲ್ಯ ಸರಿಯಾಗಿಯೇ ಇದೆ ಎಂದು ವಾದಿಸಿರುವ ಬಿಡಿಎ, 1996 ರ ಸ್ವಾಧೀನ ಹಾಗೂ ವರ್ಗಾವಣೆ ಕಾಯ್ದೆಯ ಪ್ರಕಾರವೇ ತಾವು ಮೌಲ್ಯ ನಿಗದಿ ಪಡಿಸಿರುವುದಾಗಿ ಹೇಳಿಕೊಂಡಿದೆ.

ಅರಮನೆ ಮೈದಾನದ ಅಸಲಿ ಮಾರುಕಟ್ಟೆ ಮೌಲ್ಯ ಎಕರೆಗೆ 100 ಕೋಟಿಗೂ‌ ಅಧಿಕವಿದೆ. ಅಲ್ಲಿಗೆ 472 ಎಕರೆ ವಿಸ್ತೀರ್ಣದ ಅಸಲಿ ಮಾರುಕಟ್ಟೆ ಮೌಲ್ಯ 47,200 ಕೋಟಿಗಳಾಗುತ್ತವೆ. ಆದರೆ ಇಷ್ಟು ದುಬಾರಿ ಜಾಗದ ಒಂದು ಭಾಗವನ್ನು ಚಿಲ್ಲರೆ ಹಣಕ್ಕೆ ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಡಿಎ ಮಾಡಿರುವ ಈ ಅಪಮೌಲ್ಯದ ವಿರುದ್ಧ ಮೈಸೂರು ರಾಜ ಮನೆತನ ನ್ಯಾಯಾಲಯದ ಮೆಟ್ಟಿಲೇರಿದೆ. ತಪ್ಪಾಗಿ ಮಾರುಕಟ್ಟೆ ಮೌಲ್ಯ ಮಾಡಿ ನಷ್ಟ ಉಂಟು ಮಾಡಲು ಯತ್ನಿಸಿದ್ದಾರೆ ಎಂದು ಬಿಡಿಎ ಮೇಲೆ ದಾವೆ ಹೂಡಲಾಗಿದೆ.

Exit mobile version