CM Siddaramaiah: ಇದು ಅನ್ಯಾಯ’ ಬಾರ್ ಮಾಲೀಕರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ

0
110
C M Siddaramaiah

CM Siddaramaiah’

ರಾಜ್ಯದಲ್ಲಿ ಮತ್ತೊಮ್ಮೆ ಮದ್ಯದ ದರಗಳು ಏರಿಕೆ ಆಗಿವೆ. ಸರ್ಕಾರ ನೀಡುತ್ತಿರುವ ವಿವಿಧ ಭಾಗ್ಯಗಳು, ಉಚಿತ ಬಸ್ ಪ್ರಯಾಣ, ವಿದ್ಯುತ್  ಇನ್ನಿತರೆಗಳ ಕಾರಣಕ್ಕೆ ಸರ್ಕಾರ ಹಣಕಾಸು ಕೊರತೆ ಎದುರಿಸುತ್ತಿದ್ದು, ಈ ಕೊರತೆ ತುಂಬಲು ಪದೇ ಪದೇ ಮದ್ಯದ ಬೆಲೆ ಏರಿಸಲಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೆ ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆ ಆಗಿತ್ತು ಈಗ ಮತ್ತೆ ಬಿಯರ್ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಆಲ್ಕೋಹಾಲ್ ಪರ್ಸೆಂಟೇಜ್ ಹೆಚ್ಚು ಹೊಂದಿರುವ ಬಿಯರ್’ಗಳ ಮೇಲೆ 10 ರಿಂದ 20% ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಬೆಂಗಳೂರನ್ನು ರಾಜ್ಯದ ಬಿಯರ್ ಕ್ಯಾಪಿಟಲ್ ಎಂದು ಕರೆಯಲಾಗುತ್ತದೆ. ಇಡೀ ದೇಶದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಮಾಣದ ಬಿಯರ್ ಮಾರಾಟ ಆಗುತ್ತದೆ. ಹೀಗಿರುವಾಗ ಬಿಯರ್ ಬೆಲೆ ಏರಿಕೆ ಮಾಡಿದಲ್ಲಿ ರಾಜ್ಯದ ಬಿಯರ್ ಮಾರಾಟದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.

ಇದೇ ಕಾರಣಕ್ಕೆ ಬಾರ್ ಮಾಲೀಕರ ಸಂಘ ಮತ್ತು ಬಿಯರ್ ಅಸೋಸಿಯೇಷನ್ ಆಫ್ ಇಂಡಿಯಾ ಸರ್ಕಾರದ ಬಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಜನಪ್ರಿಯ ಮತ್ತು ಪ್ರೀಮಿಯಂ ಸೆಗ್ಮೆಂಟ್ ನ ಬಿಯರ್ ಗಳ ಬೆಲೆ ಏರಿಕೆ ಮಾಡುವ‌ ನಿರ್ಧಾರದಿಂದ ಬಿಯರ್ ಮಾರುಕಟ್ಟೆ ಮೇಲೆ ಹೊಡೆತ ಬೀಳಲಿದೆ. ಈ ನಿರ್ಧಾರದಿಂದ ಬಿಯರ್ ಹೆಚ್ಚಿನ ಜನರಿಗೆ ಖರೀದಿಸಲಾಗದ ಐಶಾರಾಮಿ ಉತ್ಪನ್ನವಾಗಿ ಬದಲಾಗಲಿದೆ’ ಎಂದಿದ್ದಾರೆ.

Ratan Tata: ಅಮಿತಾಬ್ ಬಚ್ಚನ್ ಬಳಿ ಸಾಲ ಮಾಡಿದ್ದ ರತನ್ ಟಾಟಾ

ಬಿಯರ್ ಖರೀದಿ ಕಡಿಮೆ ಆಗುವುದರಿಂದ ತೆರಿಗೆ ಜಮಾವಣೆ ಸಹ ಕಡಿಮೆ ಆಗಲಿದೆ. ನಮ್ಮ ಅಂದಾಜಿನ ಪ್ರಕಾರ ಬೆಲೆ ಏರಿಕೆಯಿಂದ ಸುಮಾರು 400 ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಬಾರದೇ ಹೋಗಬಹುದು. ಅಲ್ಲದೆ ಯುನೈಟೆಡ್ ಬ್ರೀವರೀಸ್, ಎಬಿಐ ಬ್ರೀವರಿ, ಕಾರ್ಲ್ಸ್ ಬರ್ಗ್ ಇನ್ನೂ ಕೆಲವು ಟಾಪ್ ಬಿಯರ್ ಬ್ರ್ಯಾಂಡ್ ಗಳು ರಾಜ್ಯದಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಿವೆ. ನಿರ್ಮಾಣ ಘಟಕಗಳನ್ನು ಸಹ ಹೊಂದಿವೆ. ಹೀಗಿರುವಾಗ ದರ ಏರಿಕೆ ಮಾಡಿದರೆ ಆ ಸಂಸ್ಥೆಗಳು ಮುಮನದೆ ಈ ರಾಜ್ಯದಲ್ಲಿ ಹೂಡಿಕೆ ಮಾಡಲು ಹಿಂಜರಿಯವೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here