Beer
ಬೆಂಗಳೂರಿನಲ್ಲಿ ಈ ಬಾರಿ ನೀರಿಗೆ ತತ್ವಾರ ಶುರುವಾಗಿದೆ. ಕೆಲವು ಏರಿಯಾಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ದುಪ್ಪಟ್ಟು ಹಣ ಕೊಟ್ಟು ವಾಟರ್ ಟ್ಯಾಂಕರ್ ಖರೀದಿ ಮಾಡಲಾಗುತ್ತಿದೆ. ನೀರಿಗೆ ಬರ ಬಂದಿರುವ ಜೊತೆಗೆ ಅದರ ಜೊತೆಗೆ ಬೆಂಗಳೂರಿನಲ್ಲಿ ಬಿಯರಿಗೂ ಬರ ಬಂದಿದೆ.
ಬೆಂಗಳೂರನ್ನು ಭಾರತದ ಬಿಯರ್ ರಾಜಧಾನಿ ಎಂದು ಕರೆಯಲಾಗುತ್ತದೆ. ಭಾರತದಲ್ಲೇ ಅತಿ ಹೆಚ್ಚು ಬಿಯರ್ ಮಾರಾಟ ಆಗುತ್ತಿರುವುದು ಬೆಂಗಳೂರಿನಲ್ಲಿ. ಮಾತ್ರವಲ್ಲ ಅತಿ ಹೆಚ್ಚು ಬಿಯರ್ ಬ್ರೂವರಿಗಳು ಇರುವುದು ಸಹ ಬೆಂಗಳೂರಿನಲ್ಲೆ. ಇದೇ ಕಾರಣಕ್ಕೆ ಬೆಂಗಳೂರನ್ನು ಭಾರತದ ಬಿಯರ್ ಕ್ಯಾಪಿಟಲ್ ಎನ್ನಲಾಗಿತ್ತು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಬಿಯರ್ ಬರ ಶುರು ಆಗಲಿಕ್ಕಿದೆ. ಬೆಂಗಳೂರಿನಲ್ಲಿ ಬಿಸಿಲ ಬೇಗೆಯಿಂದಾಗಿ ಈ ಬಾರಿ ಭಾರಿ ಸಂಖ್ಯೆಯಲ್ಲಿ ಬಿಯರ್ ಮಾರಾಟವಾಗಿದೆ. ಅಲ್ಲದೆ ಐಪಿಎಲ್ ಸಹ ಇದೇ ಸಮಯದಲ್ಲಿರುವ ಕಾರಣ ಬಿಯರ್ ಮಾರಾಟ ಗಗನಕ್ಕೇರಿದೆ. ಬೇಡಿಕೆ ಅತಿಯಾದ ಹಿನ್ನೆಲೆಯಲ್ಲಿ, ಬೇಡಿಕೆ ಪೂರೈಸುವಷ್ಟು ಉತ್ಪಾದನೆಯೇ ಆಗುತ್ತಿಲ್ಲ ಎಂದು ಬೆಂಗಳೂರಿನ ಕೆಲವು ರೆಸ್ಟೊರೆಂಟ್ ಮಾಲೀಕರು ಹೇಳಿಕೊಂಡಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಬಿಯರ್ ಬೇಡಿಕೆ ದುಪ್ಪಟ್ಟಾಗಿದೆ. ಆದರೆ ಬೇಡಿಕೆ ಪೂರೈಸುವಷ್ಟು ಬಿಯರ್ ಉತ್ಪಾದನೆ ಮಾಡಲು ನಮ್ಮಲ್ಲಿ ವ್ಯವಸ್ಥೆಯೇ ಇಲ್ಲ. ಉತ್ಪಾದನೆ ಮಾಡಿದ್ದೆಲ್ಲ ಮಾರಾಟವಾಗುತ್ತಿದೆ. ಬೇರೆ ಯಾವುದೇ ಡ್ರಿಂಕ್ಸ್ ಗಿಂತಲೂ ಬಿಯರ್ ಮಾರಾಟ 50% ಹೆಚ್ಚಾಗಿದೆ. ಅಲ್ಲದೆ ನೀರಿನ ಕೊರತೆಯೂ ಸಹ ಅತಿಯಾದ ಬಿಯರ್ ಉತ್ಪಾದನೆಯನ್ನು ಕುಂಠಿತಗೊಳಿಸಿದೆ’ ಎಂದಿದ್ದಾರೆ ಬೆಂಗಳೂರಿನ ಜನಪ್ರಿಯ ಬಿಯರ್ ಬ್ರಿವರಿ ಮಾಲೀಕರು.
Bengaluru Police: ರಸ್ತೆಯಲ್ಲಿ ಜಗಳವಾದಾಗ ಏನು ಮಾಡಬೇಕು? ಬೆಂಗಳೂರು ಪೊಲೀಸರು ನೀಡಿದ್ದಾರೆ ಸೂಚನೆ
ಪ್ರತಿ ವರ್ಷ ಬೇಸಗೆಯಲ್ಲಿ ವಿವಿಧ ಹಣ್ಣುಗಳ ಬಿಯರ್ ಮಾಡುತ್ತಿದ್ದೆವು. ಈ ಬಾರಿ ಮಳೆ ಕೊರತೆಯಿಂದಾಗಿ ಹಣ್ಣುಗಳು ಉತ್ಪಾದನೆ ಕಡಿಮೆ ಆಗಿದೆ. ಹಾಗಾಗಿ ಜನ ಸಾಂಪ್ರದಾಯಿಕ ಬಿಯರ್ ಮೊರೆ ಹೋಗಿದ್ದಾರೆ. ಬೇಡಿಕೆ ಪೂರೈಸಲಾಗದೆ ಬೆಂಗಳೂರಿನ ಎಷ್ಟೋ ರೆಸ್ಟೊರೆಂಟ್ ಗಳು ವೀಕೆಂಡ್ ಆಫರ್ ಗಳನ್ನು ತೆಗಡದು ಹಾಕಿವೆ. ಕೆಲವೆಡೆ ಬಿಯರ್ ಬೆಲೆಯನ್ನು ಏರಿಸಲಾಗಿದೆ ಎಂದಿದ್ದಾರೆ ಮತ್ತೊಂದು ಬ್ರಿವರಿ ಮಾಲೀಕ.