Bengaluru
ಜೊಮ್ಯಾಟೋ ಭಾರತದ ಪ್ರಸ್ತುತ ಅತೊ ದೊಡ್ಡ ಆನ್ ಲೈನ್ ಆಹಾರ ವಿತರಣೆ (ಆನ್ ಲೈನ್ ಫೂಡ್ ಡೆಲಿವರಿ ಬ್ರ್ಯಾಂಡ್) ಪ್ರತಿ ದಿನ ಲಕ್ಷಾಂತರ ಗ್ರಾಹಕರಿಗೆ ಊಟ ಡೆಲಿವರಿ ಮಾಡುತ್ತಿದೆ. ಆದರೆ ಧಾರವಾಡ ಮೂಲದ ಮಹಿಳೆ ಒಬ್ಬರಿಗೆ ಜೊಮ್ಯಾಟೊ ಊಟ ಡೆಲಿವರಿ ಮಾಡದ ಕಾರಣ ಈಗ ಬರೋಬ್ಬರಿ 60 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಿ ಬಂದಿದೆ. ಅಂದಹಾಗೆ ಆ ಧಾರವಾಡ ಮೂಲದ ಮಹಿಳೆ ಆರ್ಡರ್ ಮಾಡಿದ್ದಿದ್ದು ಕೇವಲ 133 ರೂಪಾಯಿ ಊಟ.
ಧಾರವಾಡದ ಶೀತಲ್ ಕಳೆದ ವರ್ಷ 2023, ಆಗಸ್ಟ್ 31 ರಂದು ರೆಸ್ಟೊರೆಂಟ್ ಒಂದರಿಂದ 133 ರೂಪಾಯಿ ಬೆಲೆಯ ಮೊಮೋಸ್ ಆರ್ಡರ್ ಮಾಡಿದ್ದರು. ಅದಾದ ಕೆಲವೇ ಹೊತ್ತಿಗೆ ಆರ್ಡರ್ ಡೆಲಿವರಿ ಆಗಿದೆ ಎಂಬ ಸಂದೇಶ ಜೊಮ್ಯಾಟೊ ಕಡೆಯಿಂದ ಬಂತು. ಆದರೆ ಶೀಥಲ್ ಮನೆಗೆ ಯಾವುದೇ ಜೊಮ್ಯಾಟೊ ವ್ಯಕ್ತಿ ಬಂದಿರಲಿಲ್ಲ, ಆರ್ಡರ್ ಮಾಡಿದ್ದ ತಿಂಡಿಯನ್ನೂ ಕೊಟ್ಟಿರಲಿಲ್ಲ.
ಪುಟ್ಟ ಕಂದ ಆರ್ಯನ್ ಜೀವ ಉಳಿಸಲು ಸಚಿವ ದಿನೇಶ್ ಗುಂಡೂರಾವ್ ಆಸರೆ
ಆಗ ಶೀಥಲ್ ಮೊದಲು ರೆಸ್ಟೊರೆಂಟ್ ಅನ್ನು ಸಂಪರ್ಕಿಸಿದರು. ಅವರು ಡೆಲಿವರಿ ಬಾಯ್ ಆರ್ಡರ್ ಅನ್ನು ಪಡೆದುಕೊಂಡು ಹೋಗಿದ್ದಾಗಿ ತಿಳಿಸಿದ್ದಾರೆ. ಬಳಿಕ ಶೀಥಲ್ ಡೆಲಿವರಿ ಬಾಯ್ ನ ನಂಬರ್ ಗೆ ಕರೆ ಮಾಡಿದ್ದಾರೆ ಆದರೆ ಆತ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಕೊನೆಗೆ ಶೀಥಲ್ ಜೊಮ್ಯಾಟೋಗೆ ಇ ಮೇಲ್ ಮೂಲಕ ಕಂಪ್ಲೆಂಟ್ ಮಾಡಿದ್ದಾರೆ. ಆಗ ಜೊಮ್ಯಾಟೋ 72 ಗಂಟೆಗಳಲ್ಲಿ ಮರಳಿ ಪ್ರತಿಕ್ರಿಯಿಸುವುದಾಗಿ ಹೇಳಿದೆ.
ಆದರೆ ಜೊಮ್ಯಾಟೊ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಶೀಥಲ್ ಸೆಪ್ಟೆಂಬರ್ 13 ರಂದು ಗ್ರಾಹಕರ ವೇದಿಕೆಯಲ್ಲಿ ದೂರು ನೀಡಿ ನೊಟೀಸ್ ಒಂದನ್ನು ಕಳಿಸಿದ್ದಾರೆ. ನೊಟೀಸ್ ಸ್ವೀಕರಿಸಿದ ಜೊಮ್ಯಾಟೋ ಗ್ರಾಹಕರ ವೇದಿಕೆ ಮುಂದೆ ವಕೀಲರ ಮೂಲಕ ಹಾಜರಾಗಿ ಶೀಥಲ್ ಆರೋಪ ಸುಳ್ಳು ಎಂದು ಹೇಳಿದೆ. ಆದರೆ ಜೊಮ್ಯಾಟೋ 72 ಗಂಟೆಗಳ ಒಳಗಾಗಿ ದೂರಿಗೆ ಪ್ರತಿಕ್ರಿಯಿಸುವುದಾಗಿ ಹೇಳಿ ಆ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದನ್ನು ಗಮನಿಸಿ ಕಾರಣ ಕೇಳಿದೆ.
ಬಳಿಕ ಇದೇ ವರ್ಷ ಮೇ ತಿಂಗಳಲ್ಲಿ ಜೊಮ್ಯಾಟೋ ಶೀಥಲ್ ಗೆ 133.25 ರೂಪಾಯಿ ಹಣ ವಾಪಸ್ ಹಾಕಿದೆ. ಇದನ್ನು ಶೀಥಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಬಳಿಕ ಜೊಮ್ಯಾಟೊ ಆರ್ಡರ್ ಡೆಲಿವರಿ ಮಾಡದೇ ಇರುವುದರ ಜೊತೆಗೆ, ಗ್ರಾಹಕರ ಬಗ್ಗೆ ಸುಳ್ಳು ಹೇಳಿರುವುದನ್ನೂ ಸಹ ಪರಿಗಣಿಸಿ 50 ಸಾವಿರ ರೂಪಾಯಿ ದಂಡ ಹಾಗೂ ಶೀಥಲ್ ರ ನ್ಯಾಯಾಲಯದ ಖರ್ಚು 10 ಸಾವಿರ ರೂಪಾಯಿಯನ್ನು ನೀಡುವಂತೆ ಆದೇಶಿಸಿದೆ. 133.25 ರೂಪಾಯಿ ಇಂದಾಗಿ 60 ಸಾವಿರ ರೂಪಾಯಿ ಕಳೆದುಕೊಂಡಿದೆ ಜೊಮ್ಯಾಟೊ.