Site icon Samastha News

Elon Musk: ಬಿಲ್ ಗೇಟ್ಸ್ ಭಿಕ್ಷೆ ಬೇಡುವಂತೆ ಮಾಡುತ್ತೀನಿ: ಸವಾಲು ಹಾಕಿದ ಎಲಾನ್ ಮಸ್ಕ್

Ellon Musk

Elon Musk

ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ತಮ್ಮ ಫಿಲ್ಟರ್ ರಹಿತ ಹೇಳಿಕೆಗಳಿಂದ ಖ್ಯಾತರು. ಕ್ರಾಂತಿಕಾರಿ ತಂತ್ರಜ್ಞಾನಗಳನ್ನು ಪರಿಚಯಿಸುತ್ತಾ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎಲಾನ್ ಮಸ್ಕ್ ಸ್ಥಾನ ಗಳಿಸಿಕೊಂಡಿದ್ದಾರೆ. ಅಮೆಜಾನ್ ಮಾಲೀಕ ಜೆಫ್ ಬೆಜೋಜ್ ಅನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಶ್ರೀಮಂತ ಎನಿಸಿಕೊಂಡಿದ್ದಾರೆ. ಬಹು ಸಮಯದ ವರೆಗೆ ವಿಶ್ವದ ಶ್ರೀಮಂತ ವ್ಯಕ್ತಿ ಆಗಿದ್ದ ಬಿಲ್ ಗೇಟ್ಸ್ ಈಗ 14ನೇ ಸ್ಥಾನದಲ್ಲಿದ್ದಾರೆ.

ಎಲಾನ್ ಮಸ್ಕ್ ಮೊದಲಿನಿಂದಲೂ ಬಿಲ್ ಗೇಟ್ಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದೀಗ ಹೊಸ ಟ್ವೀಟ್ ಒಂದರಲ್ಲಿ ಟೆಸ್ಲಾ ಸಂಸ್ಥೆಯ ವಿರುದ್ಧ ಬೆಟ್ ಹಾಕಿದ ಎಲ್ಲರೂ ಭಿಕ್ಷುಕರಾಗುತ್ತಾರೆ (ಬ್ಯಾಂಕ್ ರಪ್ಟ್) ಬಿಲ್ ಗೇಟ್ಸ್ ಸಹ ಭಿಕ್ಷುಕರಾಗುತ್ತಾರೆ ಎಂದಿದ್ದಾರೆ.

ತಮ್ಮ ಆಟೋಬಯೋಗ್ರಫಿಯಲ್ಲಿಯೂ ಬಿಲ್ ಗೇಟ್ಸ್ ಬಗ್ಗೆ ಉಲ್ಲೇಖಿಸಿದ್ದ ಎಲಾನ್ ಮಸ್ಕ್, ನನ್ನ ಟೆಸ್ಲಾ ಸಂಸ್ಥೆ ಕಷ್ಟದಲ್ಲಿದ್ದಾಗ ಬಿಲ್ ಗೇಟ್ಸ್ ವಿರುದ್ಧ ಷೇರು ಮಾರುಕಟ್ಟೆಯಲ್ಲಿ ಶಾರ್ಟ್ ಪೊಸಿಷನ್ ಹಾಕಿದ್ದರು. (ಶಾರ್ಟ್ ಎಂದರೆ ಒಂದು ಕಂಪೆನಿಯ ಷೇರು ಮೌಲ್ಯ ಕುಸಿಯುತ್ತದೆ ಎಂದು ಊಹಿಸಿ ಹಣ ತೊಡಗಿಸುವುದು) ಆದರೆ ಟೆಸ್ಲಾ ಸಂಸ್ಥೆ ಮೇಲೆದ್ದಿತು, ಇದರಿಂದಾಗಿ ಬಿಲ್ ಗೇಟ್ಸ್ 12 ಸಾವಿರ ಕೋಟಿ ಕಳೆದುಕೊಂಡರು ಎಂದು ಬರೆದುಕೊಂಡಿದ್ದಾರೆ.

ಈಗ ಮಾಡಿರುವ ಟ್ವೀಟ್ ನಲ್ಲಿ, ಟೆಸ್ಲಾ ವಿರುದ್ಧ ಯಾರು ಬೆಟ್ ಹಾಕುತ್ತಾರೊ ಅವರೆಲ್ಲ ಭಿಕ್ಷುಕರಾಗುತ್ತಾರೆ, ಬಿಲ್ ಗೇಟ್ಸ್ ಸಹ ಎಂದಿದ್ದಾರೆ. ಮುಂದುವರೆದು, ಈಗಲೂ ಸಹ ಬಿಲ್ ಗೇಟ್ಸ್ ನನ್ನ ಕಂಪೆನಿ ಬೀಳುತ್ತದೆ ಎಂದು 8 ಸಾವಿರ ಕೋಟಿ ಬೆಟ್ ಹಾಕಿದ್ದಾರೆ (ಷೇರು ಶಾರ್ಟ್) ಎಂದಿದ್ದಾರೆ. ಇಷ್ಟೆಲ್ಲ ಇರುವಾಗ ಬಿಲ್ ಗೇಟ್ಸ್ ಮಾಡುತ್ತಿರುವ ಪರಿಸರ ಪರವಾದ ಚಳವಳಿಗೆ 5000 ಕೋಟಿ ದೇಣಿಗೆ ನೀಡುವಂತೆ ಕೇಳುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

Toll Plaza: ದೇವನಹಳ್ಳಿ ಟೋಲ್ ನಲ್ಲಿ ಒಂದು ವರ್ಷಕ್ಕೆ ಸಂಗ್ರಹವಾದ ಹಣ ಎಷ್ಟು ಕೋಟಿ?

ಎಲಾನ್ ಮಸ್ಕ್ ಈ ಹಿಂದೆಯೂ ಸಹ ಸಾಕಷ್ಟು ಬಾರಿ ಬಿಲ್ ಗೇಟ್ಸ್ ವಿರುದ್ಧ ಆರೋಪ ಮಾಡಿದ್ದಾರೆ. ಬಿಲ್ ಗೇಟ್ಸ್ ಈ ಬಗ್ಗೆ ಏನೂ ಹೇಳಿಲ್ಲ. ಅಂದ ಹಾಗೆ ಡೊನಾಲ್ಡ್ ಟ್ರಂಪ್ ಗೆಲುವಿನಲ್ಲಿ ಎಲಾನ್ ಮಸ್ಕ್ ಪ್ರಮುಖ ಪಾತ್ರ ವಹಿಸಿದ್ದು ಮಸ್ಕ್ ರ ಟೆಸ್ಲಾ ಸಂಸ್ಥೆಗೆ ಇದರಿಂದ ಸಾಕಷ್ಟು ಸಹಾಯ ಆಗಲಿದೆ ಎನ್ನಲಾಗುತ್ತಿದೆ. ಟ್ರಂಪ್ ಸಹಾಯದಿಂದ ಭಾರತಕ್ಕೆ ಎಲಾನ್ ಮಸ್ಕ್’ರ ಸ್ಟಾರ್ ಲಿಂಕ್ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಟ್ರಂಪ್ ಗೆದ್ದ ಒಡನೆ ಟೆಸ್ಲಾ ಷೇರು ಮೌಲ್ಯ ಹೆಚ್ಚಾಗಿದ್ದು, ಕೆಲವೇ ತಿಂಗಳುಗಳಲ್ಲಿ 60% ಹೆಚ್ಚಾಗಿದೆ.

Exit mobile version