BJP
ಬಿಜೆಪಿಯ ‘ಸಾಧನೆ’ಗಳಲ್ಲಿ ರಾಮ ಮಂದಿರವೂ ಒಂದು. ರಾಮ ಮಂದಿರ ನಿರ್ಮಾಣವನ್ನು ಪ್ರಣಾಲಿಕೆಯಲ್ಲಿ ಸೇರಿಸುತ್ತಾ ಬಂದಿದ್ದ ಬಿಜೆಪಿ ನರೇಂದ್ರ ಮೋದಿಯವರ ಎರಡನೇ ಅವಧಿಯಲ್ಲಿ ಅದನ್ನು ಪೂರ್ತಿಗೊಳಿಸಿ ಕೋಟ್ಯಂತರ ಹಿಂದೂಗಳ ಆಸೆಯನ್ನು ಈಡೇರಿಸಿದ್ದರು. ರಾಮ ಮಂದಿರ ನಿರ್ಮಾಣವಾದಾಗ ಭಲೇ ಎಂದಿದ್ದವರಲ್ಲಿ ಕೆಲವರು ಈಗ ರಾಮ ನಿಂದನೆಗೆ ಇಳಿದಿದ್ದಾರೆ.
ಜೂನ್ 4 ರಂದು ಹೊರಬಿದ್ದ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎಗೆ ಸರಳ ಬಹುಮತ ಬಂದಿದೆ. ಆದರೆ ಬಿಜೆಪಿಯು ಅಯೋಧ್ಯೆಯನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರ ಫೈಜಾಬಾದ್ ನಲ್ಲಿ ಪರಾಭವಗೊಂಡಿದೆ. ಇದು ಬಿಜೆಪಿಗೆ ತೀವ್ರ ಆಘಾತ ತಂದಿದೆ. ಕೆಲವರಂತೂ ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ರಾಮನನ್ನೇ ಹೊಣೆಗಾರನನ್ನಾಗಿಸಿ ನಿಂದನೆ ಆರಂಭಿಸಿದ್ದಾರೆ.
ರಾಘವೇಂದ್ರಾ ಚಾರ್ ಹೆಸರಿನ ಫೇಸ್ ಬುಕ್ ಖಾತೆಯಿಂದ ಪ್ರಭು ಶ್ರೀರಾಮನ ಬಗ್ಗೆ ತೀರ ಅವಾಚ್ಯ ಶಬ್ದಗಳನ್ನಹ ಬಳಸಿ ನಿಂದಿಸಿರುವ ಪೊಸ್ಟ್ ಒಂದು ಹಂಚಿಕೊಳ್ಳಲಾಗಿದ್ದು ಅದರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪದ್ಮಪಾಣಿ ಹೆಸರಿನ ಫೇಸ್ ಬುಕ್ ಖಾತೆಯಿಂದ ಮಾಡಲಾಗಿರುವ ಕಮೆಂಟ್ ಸಹ ಅವಹೇಳನಕಾರಿಯಾಗಿದ್ದು ‘ನಾನು ಅಯೋಧ್ಯೆಗೂ ಹೋಗಲ್ಲ, ಆ ಶಕ್ತಿಹೀನ ರಾಮನ ಮುಖವನ್ನೂ ನೋಡಲ್ಲ. ಅವನಿಗೆ ಟೆಂಟ್ ಸರಿ, ಭವ್ಯ ದೇಗುಲವಲ್ಲ’ ಎಂಬ ಕಮೆಂಟ್ ಮಾಡಲಾಗಿದೆ.
ಶ್ರೀರಾಮನ ನಿಂದಿಸಿರುವ ಇನ್ನೂ ಕೆಲವು ಕಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇನ್ನು ಕೆಲವರು ಬಿಜೆಪಿಯ ಸೋಲಿಗೆ ಶ್ರೀರಾಮನ ನಿಂದಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.
Vegetarian Food: ಮಾಂಸಾಹಾರಿಗಳೆ ಇಲ್ಲದ ವಿಶ್ವದ ಏಕೈಕ ಸಸ್ಯಹಾರಿ ನಗರ ಭಾರತದಲ್ಲಿದೆ
ಅಯೋಧ್ಯೆಯು ಉತ್ತರ ಪದೆಸೆಡಶದ ಫೈಜಾಬಾದ್ ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲಲ್ಲು ಸಿಂಗ್ ಸ್ಪರ್ಧಿಸಿದ್ದರು. ಅವರ ಎದುರು ಎಸ್ ಪಿ ಅಭ್ಯರ್ಥಿಯಾಗಿ ದಲಿತ ಮುಖಂಡ ಅವದೇಶ್ ಪ್ರಸಾದ್ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿಗೆ ಇದು ಸುಲಭ ಗೆಲುವು ಎಂದೇ ಊಹಿಸಲಾಗಿತ್ತು ಆದರೆ ಅವದೇಶ್ ಎದುರು 57 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಲಲ್ಲೂ ಸಿಂಗ್ ಸೋತಿದ್ದಾರೆ