Prajwal Revanna: ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೊಟೀಸ್, ಕಾರಣ?

0
160
Prajwal Revanna 

Prajwal Revanna

ಅತ್ಯಾಚಾರ, ಕೊಲೆ ಬೆದರಿಕೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಹೊರಡಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದುಜ ಎನ್ನಲಾಗಿರುವ ಹಲವು ಲೈಂಗಿಕ ವಿಡಿಯೋಗಳು ಲೀಕ್ ಆಗಿದ್ದು, ವಿಡಿಯೋ ಹೊರಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಅವರ ವಿರುದ್ಧ ಈಗಾಗಲೇ ಕೆಲವು ಸಂತ್ರಸ್ತೆಯರು ದೂರು ನೀಡಿದ್ದು, ಪ್ರಕರಣವನ್ನು ಎಸ್​ಐಟಿಗೆ ನೀಡಲಾಗಿದೆ. ಇದರ ಬೆನ್ನಲ್ಲೆ ಪ್ರಜ್ವಲ್​ ರೇವಣ್ಣನನ್ನು ಭಾರತಕ್ಕೆ ಕರೆತರುವ ಪ್ರಯತ್ನವೂ ನಡೆದಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಹೊರಡಿಸಲಾಗಿದೆ. ಇಂಟರ್​​ಪೋಲ್ ಪೊಲೀಸರು ಇತರೆ ಸದಸ್ಯ ದೇಶಗಳಿಗೆ ಮಾಹಿತಿ ನೀಡಿ ಆರೋಪಿಯ ಪತ್ತೆಗೆ ಸಹಾಯ ಮಾಡಲಿದೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತನಿಖಾ ದಳ (ಎಸ್​ಐಟಿ)ಗೆ ನೀಡಲಾಗಿದೆ. ಇದೀಗ ಪ್ರಜ್ವಲ್ ರೇವಣ್ಣ ಪತ್ತೆಗೆ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ ಎಂದು ಸಹ ಹೇಳಿದ್ದಾರೆ.

ಬ್ಲೂ ಕಾರ್ನರ್ ನೊಟೀಸ್ ಅನ್ನು ಇಂಟರ್ನ್ಯಾಷನಲ್ ಪೊಲೀಸ್ ಕಾರ್ಪೊರೇಷನ್ (ಇಂಟರ್​ಪೋಲ್) ವತಿಯಿಂದ ನೀಡಲಾಗುತ್ತದೆ. ಇಂಟರ್ನ್ಯಾಷನಲ್ ಪೊಲೀಸ್ ಕಾರ್ಪೊರೇಷನ್ ನಲ್ಲಿ ಹಲವು ದೇಶಗಳು ಸದಸ್ಯತ್ವ ಹೊಂದಿದ್ದು, ಯಾವುದೇ ಪ್ರಕರಣದ ಆರೋಪಿಯ ಗುರುತು ಪತ್ತೆ, ಚಲನವಲನ ಮಾಹಿತಿ, ಅಪರಾಧದ ಮಾಹಿತಿಗಳನ್ನು ಸದಸ್ಯತ್ವ ಹೊಂದಿದ ದೇಶಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಇಂಟರ್ಪೋಲ್ ಸದಸ್ಯತ್ವ ಹೊಂದಿರುವ ದೇಶಕ್ಕೆ ಪ್ರಜ್ವಲ್ ರೇವಣ್ಣ ಹೋಗಿದ್ದರೆ ಆ ದೇಶವು ಪ್ರಜ್ವಲ್ ಇರುವಿಕೆ ಕುರಿತು ಆತನ ಚಲನ ವಲನ ಕುರಿತು ಮಾಹಿತಿಯನ್ನು ಒದಗಿಸುವ ಜೊತೆಗೆ ಪ್ರಜ್ವಲ್​ನನ್ನು ಭಾರತಕ್ಕೆ ರವಾನಿಸುವ ಕಾರ್ಯವನ್ನು ಮಾಡಲಿದೆ.

ಇತ್ತ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ತಂದೆ ಎಚ್​ಡಿ ರೇವಣ್ಣ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗುತ್ತಿರುವ ಸಂತ್ರಸ್ತೆಯನ್ನು ಅಪಹರಣ ಮಾಡಿರುವ ಪ್ರಕರಣದಲ್ಲಿ ಎಚ್​ಡಿ ರೇವಣ್ಣ ಬಂಧನವಾಗಿದೆ. ಇಂದು ಮಾಧ್ಯಮಗಳ ಬಳಿ ಚುಟುಕಾಗಿ ಮಾತನಾಡಿರುವ ಎಚ್​ಡಿ ರೇವಣ್ಣ ಈ ಲೈಂಗಿಕ ಹಗರಣ ನಮ್ಮ ಕುಟುಂಬದ ವಿರುದ್ಧ ನಡೆದಿರುವ ರಾಜಕೀಯ ಪಿತೂರಿ ಎಂದಿದ್ದಾರೆ.

Bengaluru Traffic: ಡಿಸೆಂಬರ್ ವೇಳೆಗೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ 30% ಕಡಿಮೆ: ಯಾವ ಏರಿಯಾಗಳಿಗೆ ಹೆಚ್ಚು ಲಾಭ

ಇನ್ನು ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಆದಷ್ಟು ಬೇಗ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಟ್ವೀಟ್ ಮಾಡಿದ್ದ ಪ್ರಜ್ವಲ್ ರೇವಣ್ಣ ಆದಷ್ಟು ಬೇಗ ಸತ್ಯ ಹೊರಗೆ ಬರಲಿದೆ ಎಂದಿದ್ದರು. ಆದರೆ ಈವರೆಗೂ ಪ್ರಜ್ವಲ್ ಭಾರತಕ್ಕೆ ಬರದೆ ಪರಾರಿಯಲ್ಲೇ ಇದ್ದಾರೆ.

LEAVE A REPLY

Please enter your comment!
Please enter your name here