Site icon Samastha News

Kannada News: ಇಬ್ಬರ ಕೊಂದ ಬಾಲಕನಿಗೆ 15 ಗಂಟೆಯಲ್ಲಿ ಜಾಮೀನು, ಪ್ರಬಂಧ ಬರೆಯುವ ‘ಶಿಕ್ಷೆ’

Kannada News

ಪುಣೆಯಲ್ಲಿ ನಿನ್ನೆ (ಮೇ 19) ರಾತ್ರಿ ನಡೆದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಅಮಲಿನಲ್ಲಿ ಕೋಟ್ಯಂತರ ಮೌಲ್ಯದ ಪೋರ್ಷೆ ಕಾರು ಓಡಿಸಿಕೊಂಡು ಬಂದು ಗುದ್ದಿ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ. ಆದರೆ ಮದ್ಯದ ಅಮಲಿನಲ್ಲಿ ಇಬ್ಬರನ್ನು ಕೊಂದ ಶ್ರೀಮಂತ ಬಾಲಕನಿಗೆ ಕೇವಲ 15 ಗಂಟೆಗಳಲ್ಲಿ ಜಾಮೀನು ದೊರೆತಿದೆ. ಇಬ್ಬರನ್ನು ಕೊಂದು ಮಾಡಿರುವ ಅಪರಾಧಕ್ಕೆ ಪ್ರಬಂಧ ಬರೆಯುವ ‘ಶಿಕ್ಷೆ’ ನೀಡಲಾಗಿದೆ.

ಅಪರಾಧಿ ಇನ್ನೂ ಅಪ್ರಾಪ್ತನಾಗಿರುವ ಕಾರಣ ನಿಬಂಧನೆಗಳನ್ನು ಹಾಕಿ ಬಾಲಕನಿಗೆ ಜಾಮೀನು ನೀಡಲಾಗಿದೆ. ಬಾಲಕನು 15 ದಿನಗಳ ಕಾಲ ಯರವಾಡ ಟ್ರಾಫಿಕ್ ಪೊಲೀಸರ ಜೊತೆಗೆ ಕೆಲಸ ಮಾಡಿ ಸಂಚಾರಿ ನಿಯಮಗಳನ್ನು ತಿಳಿದುಕೊಳ್ಳಬೇಕಿದೆ. ಸಂಚಾರಿ ನಿಯಮಗಳ ಬಗ್ಗೆ ಪ್ರಬಂಧ ಬರೆಯಬೇಕಿದೆ ಎಂದಿದ್ದಾರೆ. ಇನ್ನು ಮದ್ಯ ಸೇವಿಸುವ ಚಟವಿರುವ ಕಾರಣ ಆ ಚಟ ತಪ್ಪಿಸಲು ಸೂಕ್ತ ಚಿಕಿತ್ಸೆ ಪಡೆಯುವಂತೆ ನ್ಯಾಯಾಲಯ ಹೇಳಿದೆ.

ಬಾಲಕ ತಮ್ಮ ಗೆಳೆಯರೊಟ್ಟಿಗೆ ಸೇರಿ ಪಬ್ ಒಂದರಲ್ಲಿ ಪಾರ್ಟಿ ಮಾಡಿ ಚೆನ್ನಾಗಿ ಕುಡಿದು ತಮ್ಮ ಐಶಾರಾಮಿ ಕಾರಿನಲ್ಲಿ ರಾತ್ರಿ 2:15ರ ವೇಳೆಗೆ ಸುಮಾರು 200 ಕಿ.ಮೀ ವೇಗದಲ್ಲಿ ಪುಣೆಯಲ್ಲಿ ವಾಹನ ಚಲಾಯಿಸುತ್ತಿದ್ದ. ಅದೇ ವೇಳೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಅನೀಶ್ ಹಾಗೂ ಅಶ್ವಿನಿ ಎಂಬ ಎಂಜಿನಿಯರ್​ಗಳಿಗೆ ಕಾರನ್ನು ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಇಬ್ಬರು ಸುಮಾರು 20 ಅಡಿಗಳಷ್ಟು ಮೇಲೆ ಹಾರಿ ಬಿದ್ದು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

ಅಪಘಾತವಾದ ಕೂಡಲೇ ಬಾಲಕ, ಕಾರು ಚಲಾಯಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ, ಆದರೆ ಕಾರಿನ ಏರ್​ಬ್ಯಾಗ್ ತೆರೆದಿದ್ದ ಕಾರಣ, ರಸ್ತೆ ಕಾಣಲಿಲ್ಲವಾದ್ದರಿಂದ ಕಾರು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಕಾರಿನಲ್ಲಿ ಚಾಲಕನ ಹೊರತಾಗಿ ಇನ್ನೂ ಇಬ್ಬರು ಇದ್ದು, ಅದರಲ್ಲಿ ಒಬ್ಬ ಮಾತ್ರ ಪರಾರಿಯಾಗಿದ್ದಾನೆ. ಇಬ್ಬರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಪಾಸು ಮಾಡಿರುವ ಕಾರಣ ಗೆಳೆಯರೊಟ್ಟಿಗೆ ಸೇರಿ ಈ ‘ಬಾಲಕ’ರು ಪಾರ್ಟಿ ಮಾಡುತ್ತಿದ್ದರು.

Accident in Bengaluru: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ರಾಜ್ಯದ 13 ಮಂದಿ ಸಾವು

ವಾಹನ ಚಲಾಯಿಸುತ್ತಿದ್ದವ 17 ವರ್ಷ 8 ತಿಂಗಳಿನವನಾಗಿದ್ದು, 18 ವರ್ಷವಾಗಲು ನಾಲ್ಕು ತಿಂಗಳಷ್ಟೆ ಬಾಕಿ ಇದೆ. ಹಾಗಾಗಿ ಆತನನ್ನು ಬಾಲಾಪರಾಧಿ ಎಂದು ಪರಿಗಣಿಸಿ, ಕೆಲವೇ ಗಂಟೆಗಳಲ್ಲಿ ಜಾಮೀನು ನೀಡಿ ಕಳಿಸಲಾಗಿದೆ. ಸಂಚಾರ ನಿಯಮಗಳ ಬಗ್ಗೆ ತಿಳಿದುಕೊಳ್ಳುವ, ಪ್ರಬಂಧ ಬರೆಯುವಂಥಹಾ ತೀರ ಸಾಮಾನ್ಯ ಶಿಕ್ಷೆಯನ್ನು ನೀಡಲಾಗಿದೆ. ಅಪಘಾತ ಮಾಡಿರುವ ಬಾಲಕ ಪುಣೆಯ ಶ್ರೀಮಂತ ವ್ಯಕ್ತಿಯೊಬ್ಬರ ಪುತ್ರನಾಗಿದ್ದು, ಅವರ ತಂದೆ ರಾಜಕೀಯವಾಗಿಯೂ ಪ್ರಭಾವಿಯಾಗಿದ್ದಾರೆ ಎನ್ನಲಾಗಿದೆ.

Exit mobile version