B R Shetty
ಭಾರತದಲ್ಲಿ ಕೋಟ್ಯಧೀಶರ ಸಂಖ್ಯೆ ಕಡಿಮೆಯಿಲ್ಲ, ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಪತ್ರಿಕೆ, ಟಿವಿಗಳಲ್ಲಿ ಯುವಕರು ಕಡಿಮೆ ಸಮಯದಲ್ಲಿ ಹೇಗೆ ಉದ್ಯಮ ಕಟ್ಟಿ ಕೋಟ್ಯಧೀಶರಾದರು ಎಂಬ ಕತೆಗಳು ಅಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಆದರೆ ದೊಡ್ಡ ಉದ್ಯಮ ಕಟ್ಟಿ, ಸಾವಿರಾರು ಕೋಟಿ ಗಳಿಸಿ ಕೊನೆಗೆ ಏನನ್ನೂ ಉಳಿಸಿಕೊಳ್ಳಲಾಗದೆ ನಷ್ಟ ಹೊಂದಿದವರ ಸಂಖ್ಯೆಯೂ ಕಡಿಮೆ ಏನಿಲ್ಲ. 13 ಸಾವಿರ ಕೋಟಿ ಮೌಲ್ಯ ಹೊಂದಿದ್ದ ಕರ್ನಾಟಕ ಮೂಲದ ಉದ್ಯಮಿಯೊಬ್ಬರು ಕೊನೆಗೆ ಕೇವಲ 74 ರೂಪಾಯಿಗೆ ಕಂಪೆನಿಯನ್ನು ಮಾರಿದ ಕತೆ ಇಲ್ಲಿದೆ.
ಉಡುಪಿಯಲ್ಲಿ ಜನಿಸಿದ ಬಿ.ಆರ್.ಶೆಟ್ಟಿ 1970 ರ ಸಮಯದಲ್ಲಿ ದುಬೈಗೆ ವಲಸೆ ಹೋದರು ಅಲ್ಲಿ ಎನ್್ಎಂಸಿ ಹೆಸರಿನ ಆಸ್ಪತ್ರೆ ತೆರೆದರು. ಆಗಷ್ಟೆ ಪ್ರಗತಿಯಲ್ಲಿ ವೇಗ ಪಡೆಯುತ್ತಿದ್ದ ಅರಬ್ ದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ಅತಿ ದೊಡ್ಡ ಸಂಸ್ಥೆಯನ್ನಾಗಿ ಎನ್್ಎಂಸಿಯನ್ನು ಬಿಆರ್ ಶೆಟ್ಟಿ ಬೆಳೆಸಿದರು. ಸಂಸ್ಥೆಯೂ ಭಾರಿ ಲಾಭಗವನ್ನೇ ಮಾಡಿತ್ತು. ಇದರಿಂದಾಗಿ ಬಿಆರ್ ಶೆಟ್ಟಿ ದುಬೈನ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನ್ನಿಸಿಕೊಂಡರು.
ಐಶಾರಾಮಿ ಜೀವನ ಸಾಗಿಸುತ್ತಿದ್ದ ಬಿ.ಆರ್ ಶೆಟ್ಟಿ, ವಿಶ್ವದ ದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾನಲ್ಲಿ ಕೆಲವು ಫ್ಲೋರ್ ಗಳನ್ನು ಸುಮಾರು 400 ಕೋಟಿ ಕೊಟ್ಟು ಖರೀದಿಸಿದ್ದರು. ದುಬೈನ ಮತ್ತೊಂದು ಪ್ರತಿಷ್ಠಿತ ಬಹುಮಹಡಿ ಕಟ್ಟಡವಾದ ಪಾಮ್ ಜುಮೆರಿಯಾನಲ್ಲೂ ಬಿ.ಆರ್ ಶೆಟ್ಟಿ ಅವರಿಗೆ ಸೇರಿದ ಫ್ಲೋರ್ ಗಳಿದ್ದವು. ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಶೆಟ್ಟಿ ಅವರ ಬಳಿ ರಾಲ್ಸ್ ರಾಯ್ಸ್ , ಫೋರ್ಶೆ, ಲ್ಯಾಂಬೊರ್ಗಿನಿ ಅಂಥಹಾ ಹಲವು ಅತ್ಯಂತ ದುಬಾರಿ ಕಾರುಗಳಿದ್ದವು. 2019 ರ ವೇಳೆಗೆ ಬಿ.ಆರ್ ಶೆಟ್ಟಿ ಅವರ ಮೌಲ್ಯ ಸುಮಾರು 18 ಸಾವಿರ ಕೋಟಿಯಾಗಿತ್ತು. ಅವರು ಕಟ್ಟಿದ ಎನ್್ಎಂಸಿ ಸಂಸ್ಥೆಯ ಮೌಲ್ಯ ಸುಮಾರು 13 ಕೋಟಿಗಳಾಗಿತ್ತು.
ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು ಆದರೆ ಒಂದೇ ಒಂದು ಟ್ವೀಟ್ ಎಲ್ಲವನ್ನೂ ಹಾಳು ಮಾಡಿತು. ಮಡ್ಡಿ ವಾಟರ್ಸ್ ರಿಸರ್ಚ್ ಸಂಸ್ಥೆಯು ಟ್ವೀಟ್ ಒಂದನ್ನು ಮಾಡಿ ಶೆಟ್ಟಿ ಅವತ ಎನ್್ಎಂಸಿ ಸಂಸ್ಥೆಯು ಹಣಕಾಸಿನ ವಿಷಯದಲ್ಲಿ ತಪ್ಪು ಲೆಕ್ಕಗಳನ್ನು ತೋರಿಸಿದೆ. ಆ ಮೂಲಕ ಸರ್ಕಾರಕ್ಕೆ, ಷೇರು ಹೂಡಿಕೆದಾರರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿತು. ಬಳಿಕ ವರದಿಯನ್ನು ಬಿಡುಗಡೆ ಮಾಡಿತು. ವರದಿ ಹೊರಬಂದ ಬಳಿಕ ಎನ್್ಎಂಸಿಯ ಷೇರುಗಳು ಧಾರುಣವಾಗಿ ಕುಸಿದವು. ಶೆಟ್ಟಿ ಅವರು ಸಂಸ್ಥೆಯ ಉನ್ನತ ಸ್ಥಾನದಿಂದ ರಾಜೀನಾಮೆ ನೀಡೊ ಕೆಳಗಿಳಿಯಬೇಕಾಯ್ತು.
Bengaluru: ಬಾಡಿಗೆ ತಗ್ಗಿಸುತ್ತಿದ್ದಾರೆ ಬೆಂಗಳೂರಿನ ಮನೆ ಮಾಲೀಕರು, ಕಾರಣವೇನು?
ಅಷ್ಟೇ ಸಾಲದೆಂಬಂತೆ ಅಬುದಬಿ ಕಮರ್ಷಿಯಲ್ ಬ್ಯಾಂಕ್ ಶೆಟ್ಟಿ ಅವರ ಮೇಲೆ ದಾವೆ ಹೂಡಿದರು. ಯುಎಇಯ ಕೇಂದ್ರ ಬ್ಯಾಂಕ್ ಬಿ.ಆರ್ ಶೆಟ್ಟಿ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿತು. ಅವರ ಕೆಲವು ಆಸ್ತಿಗಳು ಸಹ ಜಪ್ತಿಯಾದವು. ನ್ಯಾಯ ಪ್ರಕ್ರಿಯೆಗಳಿಂದಾಗಿ ಒಲ್ಲದ ಮನಸ್ಸಿನಿಂದ ತಮ್ಮ 13 ಕೋಟಿ ಮೌಲ್ಯದ ಸಂಸ್ಥೆಯನ್ನು ಕೇವಲ 74 ರೂಪಾಯಿಗಳಿಗೆ ಇರಾನಿನ ಸಂಸ್ಥೆಯೊಂದಕ್ಕೆ ಮಾರಲೇ ಬೇಕಾಯ್ತು.