BREAKING
ಬೆಂಗಳೂರಿನ ಎಲೆಕ್ರ್ಟಾನಿಕ್ ಸಿಟಿ ಬಳಿಯ ಫಾರಂ ಹೌಸ್ ಒಂದರಲ್ಲಿ ಎರಡು ವಾರದ ಹಿಂದೆ ನಡೆದಿದ್ದ ಪಾರ್ಟಿಗೆ ಸಂಬಂಧಿಸಿದಂತೆ ತೆಲುಗಿನ ಜನಪ್ರಿಯ ಪೋಷಕ ನಟಿ, ತೆಲುಗು ಕಲಾವಿದರ ಸಂಘದ ಪದಾಧಿಕಾರಿ ಹೇಮಾ ಕೊಲ್ಲ ಅವರನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು ಈ ಹಿಂದೆ ಹೇಮಾ ಅವರನ್ನು ವಿಚಾರಣೆ ಹಾಜರಾಗುವಂತೆ ನೊಟೀಸ್ಗಳನ್ನು ಕಳಿಸಿದ್ದರು. ಆದರೆ ಅನಾರೋಗ್ಯದ ಕಾರಣ ನೀಡಿ ಹೇಮಾ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಪೊಲೀಸರು ಹೇಮಾ ಅವರನ್ನು ಬಂಧಿಸಿದ್ದಾರೆ.
ರೇವ್ ಪಾರ್ಟಿ ಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ಡ್ರಗ್ಸ್ ಸೇವಿಸಿದ್ದರು ಎಂಬುದು ಅವರ ರಕ್ತದ ಮಾದರಿ ಪರೀಕ್ಷೆಯಿಂದ ತಿಳಿದು ಬಂದಿದ್ದು, ಪೊಲೀಸರು ವಿಚಾರಣೆಗಾಗಿ ಎರಡು ಬಾರಿ ನಟಿ ಹೇಮಾಗೆ ನೊಟೀಸ್ ನೀಡಿದ್ದರು. ಮೂರನೇ ನೊಟೀಸ್ ಬಳಿಕ ಇಂದು ಮುಂಜಾನೆ ನಟಿ ಹೇಮಾ ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಹೇಮಾ ನೀಡಿದ ಉತ್ತರಗಳು ತೃಪ್ತವಾಗಿರದ ಕಾರಣ ಹೇಮಾ ಅವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
ಮೇ 20ರ ಬೆಳ್ಳಂಬೆಳಿಗ್ಗೆ ಬೆಂಗಳೂರು ಪೊಲೀಸರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರಂ ಹೌಸ್ ಮೇಲೆ ದಾಳಿ ನಡೆಸಿದ್ದರು. ದಾಳಿಯ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಆಗಿರುವುದು ಪತ್ತೆಯಾಗಿತ್ತು. ಕೆಲವು ಗ್ರಾಂಗಳ ಹೈಡ್ರೋ ಗಾಂಜಾ, ಕೆಲವು ಗ್ರಾಂ ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆ ಪಾರ್ಟಿಯಲ್ಲಿ 98 ಮಂದಿ ಭಾಗಿಯಾಗಿದ್ದರು ಅದರಲ್ಲಿ 30 ಮಂದಿ ಮಹಿಳೆಯರು. ಅವರಲ್ಲಿ ನಟಿ ಹೇಮಾ ಹಾಗೂ ಆಶು ರೆಡ್ಡಿ ಸಹ ಇದ್ದರು.
Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?
ಹೇಮಾ ಹೆಸರು ಪಾರ್ಟಿಯಲ್ಲಿ ಕೇಳಿ ಬರುತ್ತಿದ್ದಂತೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದ ಹೇಮಾ, ನಾನು ಹೈದರಾಬಾದ್ನ ಫಾರಂ ಹೌಸ್ನಲ್ಲಿ ಇದ್ದೇನೆ ಎಂದಿದ್ದರು. ಆದರೆ ಬೆಂಗಳೂರು ಪೊಲೀಸರು ಡ್ರಗ್ಸ್ ಪಾರ್ಟಿಯಲ್ಲಿ ಹೇಮಾ ಇರುವುದನ್ನು ಖಾತ್ರಿ ಪಡಿಸಿದ್ದರು. ಹೇಮಾ ಸೇರಿದಂತೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಅದರಲ್ಲಿ ಹಲವರು ಡ್ರಗ್ಸ್ ತೆಗೆದುಕೊಂಡಿರುವುದು ಖಾತ್ರಿ ಆಗಿದ್ದು, ಹೇಮಾ ಸಹ ಡ್ರಗ್ಸ್ ಸೇವಿಸಿರುವುದು ಖಾತ್ರಿ ಆಗಿದೆ. ಇದೇ ಕಾರಣಕ್ಕೆ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಎರಡು ನೊಟೀಸ್ಗೆ ಉತ್ತರಿಸದೇ ಇದ್ದ ಹೇಮಾ ಈಗ ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದು ಅವರನ್ನು ಬಂಧಿಸಲಾಗಿದೆ.