Charlie Chaplin: ಈ ಚಿತ್ರದಲ್ಲಿರುವವರು ಎಲ್ಲರಿಗೂ ಗೊತ್ತು, ಆದರೆ ಯಾರೂ ಗುರುತಿಸಲಾರರು

0
138
Charlie Chaplin

Charlie Chaplin

ಈ ಚಿತ್ರದಲ್ಲಿರುವ ವ್ಯಕ್ತಿ ಅಪ್ರತಿಮ ಕಲಾವಿದ. ಈತನ ಪರಿಚಯವಿಲ್ಲದ, ಹೆಸರು ಕೇಳದ ಜನ ಜಗತ್ತಿನಲ್ಲಿ ಅತ್ಯಂತ ವಿರಳ. ಆದರೆ ಈ ಚಿತ್ರ ನೋಡಿದ 90% ಜನ ಈ ಅದ್ಭುತ ನಟನನ್ನು ಗುರುತಿಸಲಾರರು. ಈ ಚಿತ್ರದಲ್ಲಿರುವ ವ್ಯಕ್ತಿ ಜಗತ್ತು ಕಂಡ ಶ್ರೇಷ್ಠ ನಟ, ಶ್ರೇಷ್ಠ ಮಾನವತಾವಾದಿ ಚಾರ್ಲಿ ಚಾಪ್ಲಿನ್. ಪುಟ್ಟ ಮೀಸೆ, ಕಪ್ಪು ಕೋಟು, ಕಪ್ಪು ಹ್ಯಾಟು, ಕೈಯಲ್ಲೊಂದು ಕೋಲು ಹಿಡಿದು ಮಾತ್ರವೇ ನಾವು ಚಾಪ್ಲಿನ್ ಅನ್ನು ಕಂಡಿದ್ದೇವೆ. ಹಾಗಾಗಿ ಚಾಪ್ಲಿನ್​ರ ಈ ಚಿತ್ರವನ್ನು ನಮಗೆ ಗುರುತಿಸಲು ಆಗದು. ಅಂದಹಾಗೆ ಚಾಪ್ಲಿನ್​ರ ಈ ಚಿತ್ರ ತೆಗೆದಿದ್ದು 1972 ರಲ್ಲಿ ಆಗ ಚಾಪ್ಲಿನ್ ವಯಸ್ಸು 83 ವರ್ಷ.

ಈ ಚಿತ್ರ ತೆಗೆದಿದ್ದು 1972ರಲ್ಲಿ ಚಾರ್ಲಿ ಚಾಪ್ಲಿನ್​ಗೆ ಆಸ್ಕರ್​ನ ಜೀವನಮಾನ ಸಾಧನೆ ಪ್ರಶಸ್ತಿ ನೀಡಿದಾಗ. ಚಾಪ್ಲಿನ್​ಗೆ ಆ ಪ್ರಶಸ್ತಿ ನೀಡಿದ ಕ್ಷಣ ಇತಿಹಾಸದಲ್ಲಿ ದಾಖಲಾಗಿದೆ. ಚಾಪ್ಲಿನ್ ವೇದಿಕೆಗೆ ಬರುತ್ತಿದ್ದಂತೆ ಆಡಿಟೋರಿಯಂನಲ್ಲ ತುಂಬಿದ್ದ ಜನ ಎದ್ದು ನಿಂತು ಬರೋಬ್ಬರಿ 12 ನಿಮಿಷಗಳ ಕಾಲ ಸತತವಾಗಿ ಚಪ್ಪಾಳೆ ಭಾರಿಸಿದರು. ಹಲವರ ಕಣ್ಣು, ಮನಸ್ಸು ಅಂದು ತುಂಬಿ ಬಂದಿತ್ತು. ಶತಮಾನದ ಸಾಧಕನಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡುತ್ತಿರುವುದನ್ನು ನೋಡುವ ಭಾಗ್ಯ ಅವರದ್ದಾಗಿತ್ತು. ಆಸ್ಕರ್ ಇತಿಹಾಸದಲ್ಲಿ ಇಷ್ಟು ಸುದೀರ್ಘ ಅವಧಿಗೆ ‘ಸ್ಟ್ಯಾಂಡಿಗ್ ಓವಿಯೇಷನ್’ ದೊರಕಿದ ನಟ, ನಿರ್ದೇಶಕ ಇನ್ನೊಬ್ಬ ಇಲ್ಲ.

Darshan Thoogudeepa: ಕೊಲ್ಲೂರಿನಲ್ಲಿ ದರ್ಶನ್ ಗಾಗಿ ಪತ್ನಿಯಿಂದ ಯಾಗ, ಏನಿದರ ಮಹತ್ವ, ಕೊಲ್ಲೂರಿನ ಮಹಿಮೆ ಏನು?

1914 ರಿಂದಲೇ ನಟನೆ ಆರಂಭಿಸಿದ ಚಾರ್ಲಿ ಚಾಪ್ಲಿನ್, ನಟನೆ, ನಿರ್ದೇಶಕ, ನಿರ್ಮಾಣ ಎಲ್ಲವನ್ನೂ ಮಾಡಿದವರು. ಮಾತಿಲ್ಲದೆ, ಕೇವಲ ಆಂಗಿಕ ಅಭಿನಯದಿಂದಲೇ ಆ ಕಪ್ಪು-ಬಿಳುಪು ಕಾಲದಲ್ಲಿಯೇ ಕೋಟ್ಯಂತರ ಜನರನ್ನು ಸೆಳೆದ ಮಹಾನ್ ನಟ. ಇಂದಿಗೂ ಚಾರ್ಲಿ ಚಾಪ್ಲಿನ್ ಸಿನಿಮಾಗಳು ಕೋಟ್ಯಂತರ ಜನರ ಮೆಚ್ಚಿನ ಸಿನಿಮಾಗಳು. ಈಗಲೂ ಚಾಪ್ಲಿನ್ ಸಿನಿಮಾಗಳು ಜಗತ್ತಿನ ಹಲವೆಡೆ ಪ್ರದರ್ಶನ ಗೊಳ್ಳುತ್ತಲೇ ಇರುತ್ತವೆ.

ಹಿಟ್ಲರ್ ಅಂಥಹಾ ದುಷ್ಟ ಬದುಕಿದ್ದ ಕಾಲದಲ್ಲಿಯೇ ಬದುಕಿದ್ದು, ಹಿಟ್ಲರ್​ನ ನೀತಿಗಳನ್ನು ಕಲೆಯ ಮೂಲಕ ಟೀಕಿಸುತ್ತಾ ಬಂದವರು ಚಾಪ್ಲಿನ್. ಅತ್ತ ಹಿಟ್ಲರ್ ಹಿಂಸೆ ಸಾರುತ್ತಿದ್ದರೆ, ಅದೇ ರೀತಿ ಕುಳ್ಳ ದೇಹ, ಸಣ್ಣ ಮೀಸೆ ಹೊಂದಿದ್ದ ಚಾಪ್ಲಿನ್ ಪ್ರೀತಿಯನ್ನು ಹಂಚುತ್ತಾ ಬಂದರು. ಕೊನೆಗೆ ಗೆದ್ದಿದ್ದು ಪ್ರೀತಿ. ಚಾಪ್ಲಿನ್ ಕೇವಲ ಸಿನಿಮಾಗಳನ್ನು ಮಾಡಲಿಲ್ಲ, ಹಾಸ್ಯದ ಮೂಲಕ ಜೀವನ ಕಲೆಯನ್ನು, ಸ್ನೇಹ, ಪ್ರೀತಿ, ಮಾನವೀಯತೆಯನ್ನು ಪ್ರಚಾರ ಮಾಡಿದರು. ಹಾಗಾಗಿ ಚಾಪ್ಲಿನ್ ಎಂದಿಗೂ ಅಜರಾಮರ. 1889 ರಲ್ಲಿ ಇಂಗ್ಲೆಂಡ್​ನಲ್ಲಿ ಜನಿಸಿದ ಚಾರ್ಲಿ ಚಾಪ್ಲಿನ್ 1977 ರಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

LEAVE A REPLY

Please enter your comment!
Please enter your name here